ಸಾರಾಂಶ
The duty of parents-teachers is important for the development of children
-ದಾವಣಗೆರೆ ಮಾಸಬ ಕಾಲೇಜಿನಲ್ಲಿ ನಡೆದ ಪೋಷಕರ ಸಭೆಯಲ್ಲಿ ಪ್ರೊ.ಜಿ.ಸಿ.ನೀಲಾಂಬಿಕ
------ಕನ್ನಡಪ್ರಭ ವಾರ್ತೆ ದಾವಣಗೆರೆ
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಅವರ ಭವಿಷ್ಯದ ದೃಷ್ಟಿಯಿಂದ ಪೋಷಕ-ಉಪನ್ಯಾಸಕರ ಕರ್ತವ್ಯ ಮುಖ್ಯ ಎಂದು ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ.ನೀಲಾಂಬಿಕ ಹೇಳಿದರು.ನಗರದ ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಪೋಷಕರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಓದಿನಲ್ಲಿ ನಿರಾಸಕ್ತಿ ತೋರುತ್ತಿರುವುದು ವಿಷಾದನೀಯ. ಆದರೂ ಪೋಷಕರು ಮತ್ತು ಉಪನ್ಯಾಸಕರು ಸೇರಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಮೂಡಿಸಿ, ಆತ್ಮವಿಶ್ವಾಸದ ಮೂಲಕ ಬದುಕು ರೂಪಿಸಿಕೊಳ್ಳಲು ಪ್ರೇರೇಪಿಸಬೇಕಾಗಿದೆ ಎಂದರು.ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ.ಟಿ.ಆರ್.ರಂಗಸ್ವಾಮಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನ ಬಗ್ಗೆ ಅರಿವನ್ನು ಮೂಡಿಸಿಕೊಂಡು ಜೀವನವನ್ನು ಕಟ್ಟಿಕೊಳ್ಳಲು ಅವಕಾಶಗಳಿವೆ. ಅವುಗಳನ್ನು ಅರಿತು ಒಳ್ಳೆಯ ಪ್ರಜೆಗಳಾಗಿ ನಿರ್ಮಾಣ ಹೊಂದಬೇಕು ಎಂದು ತಿಳಿಸಿದರು.
ಪೋಷಕರ ಪರವಾಗಿ ಕುತ್ತಿಜಾ ಬಾನು ಮಾತನಾಡಿ, ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಗ್ಗೆ ತೋರುತ್ತಿರುವ ಆಸಕ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಪೋಷಕರು ಮತ್ತು ಉಪನ್ಯಾಸಕರು ನಡುವಿನ ಒಡನಾಟದೊಂದಿಗೆ ಮಕ್ಕಳನ್ನು ಸರಿದಾರಿಗೆ ತರಬೇಕಾಗಿದೆ ಎಂದರು.ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ಕೆ.ವೈ.ಈಶ್ವರ, ಡಾ.ಎ.ಬಿ. ವಿಜಯಕುಮಾರ, ಡಾ.ಎಂ.ಮಂಜುನಾಥ, ಪವಿತ್ರಾ, ಕಾಲೇಜಿನ ಬೋಧಕ ಬೋಧಕೇತರ ವರ್ಗದವರು ಹಾಗೂ ಪೋಷಕರು ಹಾಜರಿದ್ದರು.
......ಫೋಟೊ: ದಾವಣಗೆರೆ ಮಾಸಬ ಕಾಲೇಜಿನಲ್ಲಿ ನಡೆದ ಪೋಷಕರ ಸಭೆಯಲ್ಲಿ ಪ್ರೊ.ಜಿ.ಸಿ.ನೀಲಾಂಬಿಕ ಮಾತನಾಡಿದರು.ಕ್ಯಾಪ್ಷನ 9ಕೆಡಿವಿಜಿ32