ಸಾರಾಂಶ
- ಹೊನ್ನಾಳಿಯಲ್ಲಿ ಕ್ಲಸ್ಟರ್‌ಮಟ್ಟದ ಉರ್ದು ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರತಿ ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ, ಅನಾವರಣಗೊಳಿಸುವ ಪ್ರಯತ್ನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ. ತಿಪ್ಪೇಶಪ್ಪ ಹೇಳಿದರು.ಮಂಗಳವಾರ ಪಟ್ಟಣದ ಶಾದಿ ಮಹಲ್‌ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಉರ್ದು-1 ಮತ್ತು ಉರ್ದು-2ರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತಿಭಾ ಕಾರಂಜಿಗೆ ಅವಕಾಶ ಮಾಡಿಕೊಟ್ಟಂತೆ, ಉರ್ದು ಭಾಷಾ ಮಾಧ್ಯಮಗಳ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಈ ಮಾಧ್ಯಮದ ಮಕ್ಕಳ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ ಎಂದರು.ಹೊನ್ನಾಳಿ ತಾಲೂಕು ಉರ್ದು ಶಿಕ್ಷಣ ಸಂಯೋಜಕರಾದ ಶಂಷಾದ್ ಬೇಗಂ ಮಾತನಾಡಿ, ಮಕ್ಕಳ ಪ್ರತಿಭೆ ಪರಿಚಯಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿಕ್ಷಕರು ಸಾಕಷ್ಟು ಪೂರ್ವ ತಯಾರಿ, ತರಬೇತಿ ನೀಡಿ, ವಿದ್ಯಾರ್ಥಿಗಳನ್ನು ಕರೆ ತಂದಿದ್ದಾರೆ. ತೀರ್ಪುಗಾರರು ನ್ಯಾಯವಾದ ತೀರ್ಪು ನೀಡಬೇಕು ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ವಕ್ಫ್ ಸಮಿತಿ ಅಧಿಕಾರಿ ಮೌಜಂ ಪಾಷಾ ಮಾತನಾಡಿದರು. ಪಟ್ಟಣದ ಜಾಮೀಯ ಮಸೀದಿ ವತಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲು ₹15 ಸಾವಿರ ಧನಸಹಾಯ ಮಾಡಲಾಯಿತು. 26 ಶಾಲೆಗಳ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.ರಾಜ್ಯ ಉರ್ದು ಶಿಕ್ಷಕರ ಸಂಘ ಅಧ್ಯಕ್ಷ ಅಖಿಲ್ ಪಾಷಾ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ನಯಾಜ್ ಖಾನ್, ಮೌಲನಾ ಅಬ್ದುಲ್ ಕಲಂ ಆಜಾದ್ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಇಫ್ತಿಖಾರ್ ಅಹ್ಮದ್ ಖಾನ್, ಮುಖ್ಯ ಶಿಕ್ಷಕರಾದ ಶಂಮೀಮ್ ಉನ್ನಿಸಾ, ನ್ಯಾಮತಿಯ ಮುಖ್ಯ ಶಿಕ್ಷಕರಾದ ಅಬೀದಾ ಬಾನು, ಬೇವಿನಹಳ್ಳಿಯ ಮುಖ್ಯಶಿಕ್ಷಕ ಅಕ್ಬರ್, ಆನೇಕಲ್ ಬಡಾವಣೆ ಶಿಕ್ಷಕಿ ಫರ್ಜಾನ ಬೇಗಂ, ಹಿರೇಗೋಣಿಗೆರೆಯ ಎ.ಶೇಖರಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹ್ಮದ್ ಫಾರೂಕ್ ಹಾಗೂ ಮುಖ್ಯಶಿಕ್ಷಕ ಲತೀಫ್ ಕಾರ್ಯಕ್ರಮ ನಡೆಸಿಕೊಟ್ಟರು.- - - -3ಎಚ್.ಎಲ್.ಐ2:
ಹೊನ್ನಾಳಿ ಪಟ್ಟಣದ ಶಾದಿ ಮಹಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ಲಸ್ಟರ್‌ಮಟ್ಟದ ಉರ್ದು ಪ್ರತಿಭಾ ಕಾರಂಜಿಯನ್ನು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ತಿಪ್ಪೇಶಪ್ಪ ಉದ್ಘಾಟಿಸಿದರು.