ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಕಾಶಪ್ಪನವರ ಮನೆತನದ ಗುರಿ: ವಿಜಯಾನಂದ ಕಾಶಪ್ಪನವರ

| Published : Jun 23 2025, 12:33 AM IST

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಕಾಶಪ್ಪನವರ ಮನೆತನದ ಗುರಿ: ವಿಜಯಾನಂದ ಕಾಶಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಶಾಲೆ ಕಲಿಯುವ ವಿದ್ಯಾರ್ಥಿಗಳೇ ಮುಂದಿನ ನಾಯಕರು. ಅವರ ಭವಿಷ್ಯ ಉತ್ತಮವಾಗಿರಬೇಕಾದರೆ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರತ್ಸಾಹ ಬೇಕು. ಅಂತಹ ಕಾರ್ಯವನ್ನು ಕಾಶಪ್ಪನವರ ಮನೆತನ ಮಾಡುತ್ತಾ ಬಂದಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ಶಾಲೆ ಕಲಿಯುವ ವಿದ್ಯಾರ್ಥಿಗಳೇ ಮುಂದಿನ ನಾಯಕರು. ಅವರ ಭವಿಷ್ಯ ಉತ್ತಮವಾಗಿರಬೇಕಾದರೆ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರತ್ಸಾಹ ಬೇಕು. ಅಂತಹ ಕಾರ್ಯವನ್ನು ಕಾಶಪ್ಪನವರ ಮನೆತನ ಮಾಡುತ್ತಾ ಬಂದಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದ ವಿಜಯ ಮಹಾಂತೇಶ್ವರ ಅನುಭವ ಮಂಟಪದಲ್ಲಿ ದಿ.ಎಸ್.ಆರ್. ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ ವತಿಯಿಂದ ೨೩ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ತ ಅವಳಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ನಮ್ಮ ಮನೆತನ ಇಳಕಲ್ಲ-ಹುನಗುಂದ ತಾಲೂಕಿನ ಜನರ ಸೇವೆ ಮಾಡುತ್ತಾ ಬಂದಿದೆ. ಅವಳಿ ತಾಲೂಕಿನಲ್ಲಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಸತ್ಕರಿಸಿ ಅವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹಿಸುತ್ತೇವೆ ಎಂದು ತಿಳಿಸಿದರು.

ನಮ್ಮ ತಂದೆ ಶಾಸಕ, ಸಚಿವರಾಗಿ ಹಾಗೂ ನಮ್ಮ ತಾಯಿ ಶಾಸಕರಾಗಿದ್ದ ಅವಧಿ ಮತ್ತು ನನ್ನ ಎರಡು ಅವಧಿಯಲ್ಲಿ ಈ ಅವಳಿ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರದ ಅನೇಕ ಇಲಾಖೆಯ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಿದ್ದೇವೆ. ಆದರೆ ನಮಗೆ ಆಗದವರು ನಾವು ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಅವರು ಸಾಕ್ಷಿ ಸಮೇತ ಬಂದರೆ ನಾನು ಅಭಿವೃದ್ಧಿ ಮಾಡಿದ್ದನ್ನು ತೋರಿಸುವೆ. ನಮಗೆ ನಮ್ಮ ಅವಳಿ ತಾಲೂಕಿನ ಮತದಾರರೇ ದೇವರು. ನಿಮ್ಮ ಆಶೀರ್ವಾದ ಸದಾ ಇರಲಿ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಇಳಕಲ್ಲ ವಿಜಯ ಮಹಾಂತ ಶ್ರೀಮಠದ ಗುರುಮಹಾಂತ ಶ್ರೀಗಳು ಮಾತನಾಡಿ, ದಿ.ಎಸ್.ಆರ್. ಕಾಶಪ್ಪನವರ ಅವರ ಜನಾನುರಾಗಿ ಕಾರ್ಯಗಳು ಇಂದಿಗೂ ನಮ್ಮ ತಾಲೂಕಗಳಲ್ಲಿ ಹಾಗೂ ಜನರಲ್ಲಿ ಮನೆ ಮಾತಾಗಿವೆ. ಅವರ ಸೇವಾ ನಿಷ್ಠೆ, ಕಾರ್ಯ ನಮಗೆ ಮೆಚ್ಚುಗೆಯಾಗಿದೆ. ತಂದೆ ಎಸ್.ಆರ್. ಕಾಶಪ್ಪನವರಂತೆ ಶಾಸಕ ವಿಜಯಾನಂದ ಕಾಶಪ್ಪನವರ ಸದಾ ಅವಳಿ ತಾಲೂಕಿನ ಜನ ಸೇವೆಗೆ ಸಿದ್ಧರಿದ್ದಾರೆ ಎಂದರು.

ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಶಿರೂರಿನ ಪೂಜ್ಯ ಡಾ.ಬಸವಲಿಂಗ ಶ್ರೀಗಳು, ಹಿರಿಯರಾದ ವೆಂಕಟೇಶ ಸಾಕಾ, ಎಸ್.ಜಿ. ರಾಮಗಿರಿಮಠ, ಶರಣಪ್ಪ ಆಮದಿಹಾಳ, ರಾಜು ಬೋರಾ, ಅರುಣ ಬಿಜ್ಜಳ, ಅಬುಲ್‌ರಜಾಕ್‌ ತಟಗಾರ, ಬಸವರಾಜ ಗದ್ದಿ, ಸಿದ್ದಪ್ಪ ಹೊಸೂರ, ಶೇಖರಪ್ಪ ಬಾದವಾಡಗಿ, ಎ.ಕೆ. ಉಪನಾಳ, ಚನ್ನಪ್ಪಗೌಡ ನಾಡಗೌಡ, ಮಹಾಂತೇಶ ನರಗುಂದ, ಮಹಾಂತೇಶ ಅವಾರಿ, ಸುಧಾರಾಣಿ ಸಂಗಮ, ಸುರೇಶ ಜಂಗ್ಲಿ, ಅಮೃತ ಬಿಜ್ಜಳ, ಬಸವರಾಜ ಶಿರೂರ ಇತರರು ಇದ್ದರು.