ಸಾರಾಂಶ
ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಐದು ವರ್ಷಕ್ಕೆ ಆಡಳಿತ ನೀಡಿದ್ದಾರೆ. ಇಂತಹ ಸರ್ಕಾರಕ್ಕೆ ಕಿರುಕುಳ ಅಥವಾ ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡಲ್ಲ. ಯಾವುದೇ ಕಾರಣಕ್ಕೆ ಕೈ ಸರ್ಕಾರ ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡಲ್ಲ ಎಂದು ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ಧಾರವಾಡ:
ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಐದು ವರ್ಷಕ್ಕೆ ಆಡಳಿತ ನೀಡಿದ್ದಾರೆ. ಇಂತಹ ಸರ್ಕಾರಕ್ಕೆ ಕಿರುಕುಳ ಅಥವಾ ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದಿನ ಬಾರಿ ಬಹುಮತ ಇಲ್ಲದ ಕಾರಣ ಕೈ ಸರ್ಕಾರದ ಪತನದ ಬಳಿಕ ಬಿಜೆಪಿ ಅಧಿಕಾರ ಹಿಡಿದಿದೆ. ಒಬೊಬ್ಬ ಶಾಸಕರಿಗೆ ₹ 100 ಕೋಟಿ ಹಣ ನೀಡಿರುವುದು ಬೋಗಸ್. ಯಾವುದೇ ಕಾರಣಕ್ಕೆ ಕೈ ಸರ್ಕಾರ ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡಲ್ಲ ಎಂದು ಭರವಸೆ ನೀಡಿದರು.
ಕ್ರಮ ಕೈಗೊಳ್ಳಲಿಲ್ಲ ಏಕೆ?2005-06ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. 2008ಕ್ಕೆ ಅವರ ವಿರುದ್ಧ ಪ್ರಕರಣವಿತ್ತು. 2013-18ರ ವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರೂ, ಕ್ರಮಕೈಗೊಳ್ಳಲಿಲ್ಲ ಏಕೆ? ಎಂದು ಪ್ರಶ್ನಿಸಿದರು. 2018-19ರ ಅಂತ್ಯದವರೆಗೆ ಜೆಡಿಎಸ್ ಶಾಸಕರ ಸಂಖ್ಯೆ ಕಡಿಮೆ ಇದ್ದರೂ ಬಿಜೆಪಿಗೆ ಅಧಿಕಾರ ತಪ್ಪಿಸಲು ಕುಮಾರಸ್ವಾಮಿ ಕಾಲು ಮುಗಿದು ಮುಖ್ಯಮಂತ್ರಿ ಮಾಡಿದ್ಯಾರು? 2008ರ ಪ್ರಕರಣಕ್ಕೆ ಕುಮಾರಸ್ವಾಮಿ ರಾಜೀನಾಮೆ ಕೇಳುವ ಸಿದ್ದರಾಮಯ್ಯ 2024ರಲ್ಲೇ ತನಿಖೆ ನಡೆಯುತ್ತಿದ್ದರೂ, ರಾಜೀನಾಮೆ ಕೊಡುವುದಿಲ್ಲ ಎನ್ನುವುದು ನಾಚಿಗೇಡು. ಏನು ಮಾತನಾಡಿದ್ದೇನೆ ಎನ್ನುವ ಪ್ರಜ್ಞೆಯೇ ಇದೆಯೇ? ಎಂದು ಪ್ರಶ್ನಿಸಿದರು.