ನಮ್ಮ ಬದುಕಿಗೆ ಪರಿಸರವೇ ಮಹಾಮನೆ: ಮಹಾಲಿಂಗಯ್ಯ

| Published : Jul 07 2025, 11:48 PM IST

ನಮ್ಮ ಬದುಕಿಗೆ ಪರಿಸರವೇ ಮಹಾಮನೆ: ಮಹಾಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆ ನಮ್ಮ ಪರಿಸರದಿಂದ ಮಾತ್ರ ಸಾಧ್ಯವಾಗಿದೆ. ಮಾನವರು, ಸಸ್ಯಗಳು, ಪ್ರಾಣಿಗಳು, ಮಣ್ಣು, ನೀರು ಗಾಳಿ ಒಳ್ಳಗೊಂಡತೆ ಬದುಕಲು ಬೇಕಾದ ಎಲ್ಲವನ್ನು ಒದಗಿಸುವ ಮಹಾಮನೆ ಈ ಪರಿಸರವಾಗಿದೆ ಎಂದು ತುಮಕೂರು ಜಿಲ್ಲೆ ಅಜ್ಜನಗೊಂಡನಹಳ್ಳಿ ಮಹಾಲಿಂಗಯ್ಯ ಹೇಳಿದ್ದಾರೆ.

ನ್ಯಾಮತಿ: ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆ ನಮ್ಮ ಪರಿಸರದಿಂದ ಮಾತ್ರ ಸಾಧ್ಯವಾಗಿದೆ. ಮಾನವರು, ಸಸ್ಯಗಳು, ಪ್ರಾಣಿಗಳು, ಮಣ್ಣು, ನೀರು ಗಾಳಿ ಒಳ್ಳಗೊಂಡತೆ ಬದುಕಲು ಬೇಕಾದ ಎಲ್ಲವನ್ನು ಒದಗಿಸುವ ಮಹಾಮನೆ ಈ ಪರಿಸರವಾಗಿದೆ ಎಂದು ತುಮಕೂರು ಜಿಲ್ಲೆ ಅಜ್ಜನಗೊಂಡನಹಳ್ಳಿ ಮಹಾಲಿಂಗಯ್ಯ ಹೇಳಿದರು.

ತಾಲೂಕಿನ ಚೀಲೂರು ರಾಜ್ಯ ಹೆದ್ದಾರಿಯಲ್ಲಿ ಪರಿಸರ ಉಳಿಸಿ ಸೈಕಲ್‌ ಜಾಥಾದಲ್ಲಿ ಶಿವಮೊಗ್ಗ ಕಡೆ ಸೋಮವಾರ ಸಾಗುವ ಸಂದರ್ಭ ಅವರು ಮಾತನಾಡಿದರು. ಪರಿಸರ ರಕ್ಷಣೆ, ಪ್ರಕೃತಿ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ರಾಜ್ಯಾದಂತ ಜಾಗೃತಿಗಾಗಿ ಸೈಕಲ್‌ ಜಾಥಾ ನಡೆಸುತ್ತಿದ್ದೇನೆ. ರಾಜ್ಯದ 31 ಜಿಲ್ಲಾಧಿಕಾರಿಗಳ ಭೇಟಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5ರಿಂದ 10 ಎಕರೆಯಲ್ಲಿ ಕಿರು ಅರಣ್ಯ, ಪಕ್ಷಿಧಾಮವನ್ನು ಸರ್ಕಾರದಿಂದ ನಿರ್ಮಿಸಿ, ಅಭಿವೃದ್ಧಿಪಡಿಸಬೇಕು ಒತ್ತಾಯ ಮಾಡಿದ್ದೇನೆ ಎಂದರು.

ಸರ್ಕಾರಿ ಶಾಲೆಗಳನ್ನು ಉಳಿಸಲು ಮೂಲ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಪಡಿಸಬೇಕು. ದೇಶವನ್ನು ಮುನ್ನಡೆಸುವಂತೆ ಯುವಪೀಳಿಗೆ ವಿದ್ಯಾಕ್ಕಾಗಿ ಸರ್ಕಾರಿ ಶಾಲೆ, ಆರೋಗ್ಯಕ್ಕಾಗಿ ಪರಿಸರ ಇವೆರಡನ್ನೂ ಸಂರಕ್ಷಿಸಬೇಕು ಎಂದು ಸೈಕಲ್‌ ಜಾಥಾ ಮುಖಾಂತರ ಜಿಲ್ಲಾಡಳಿತಗಳು ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ, ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದರು.

ಈಗಾಗಲೇ ಪರಿಸರ ಉಳಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಸೈಕಲ್‌ ಜಾಥಾ ಮೂಲಕ 20 ಜಿಲ್ಲೆಗಳಲ್ಲಿ ಸಂಚರಿಸಿ, ಶಿವಮೊಗ್ಗ ಕಡೆ ಹೋಗುತ್ತಿದ್ದೇನೆ. 2021ರಲ್ಲಿ ಇದೇ ರೀತಿ ಸುಮಾರು ಆರೂವರೆ ಸಾವಿರ ಕಿ.ಮೀ. ಸೈಕಲ್‌ ಜಾಥಾ ನಡೆಸಿದ್ದೇನೆಂದು ಮಹಾಲಿಂಗಯ್ಯ ಹೇಳಿದರು.

- - -

-ಚಿತ್ರ: ಪರಿಸರ ಉಳಿವಿಗಾಗಿ ರಾಜ್ಯಾದ್ಯಂತ ಸೈಕಲ್‌ ಜಾಥಾ ನಡೆಸುತ್ತಿರು ಅಜ್ಜನಗೊಂಡನಹಳ್ಳಿ ಮಹಾಲಿಂಗಯ್ಯ.