ನವತಂತ್ರಜ್ಞಾನದ ಮೂಲಕ ಅಪಾರ ಜ್ಞಾನ ಗಳಿಸುತ್ತಿರುವ ವಿದ್ಯಾಥಿ೯ಗಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕೆಂಬುದೇ ಶಿಕ್ಷಕ ವಗ೯ದ ನೈಜ ಸವಾಲಾಗಿ ಪರಿಣಮಿಸಿದೆ. ಶಿಕ್ಷಕರು ಪ್ರತೀ ನಿತ್ಯವೂ ಜ್ಞಾನ ಮತ್ತು ಕೌಶಲ್ಯವನ್ನು ಪರಿಷ್ಕರಿಸುತ್ತಾ ಪಾಠ ಮಾಡುವ ಅನಿವಾಯ೯ತೆಯಿದೆ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಸುಜಾತ ಎಫ್.ತಳವಾರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ನವತಂತ್ರಜ್ಞಾನದ ಮೂಲಕ ಅಪಾರ ಜ್ಞಾನ ಗಳಿಸುತ್ತಿರುವ ವಿದ್ಯಾಥಿ೯ಗಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕೆಂಬುದೇ ಶಿಕ್ಷಕ ವಗ೯ದ ನೈಜ ಸವಾಲಾಗಿ ಪರಿಣಮಿಸಿದೆ. ಶಿಕ್ಷಕರು ಪ್ರತೀ ನಿತ್ಯವೂ ಜ್ಞಾನ ಮತ್ತು ಕೌಶಲ್ಯವನ್ನು ಪರಿಷ್ಕರಿಸುತ್ತಾ ಪಾಠ ಮಾಡುವ ಅನಿವಾಯ೯ತೆಯಿದೆ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಸುಜಾತ ಎಫ್.ತಳವಾರ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಪತ್ರಿಕಾಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ನಾಲ್ವರು ಸಾಧಕ ಶಿಕ್ಷಕರಿಗೆ ರಾಷ್ಟ್ರ ನಿಮಾ೯ತೖ ಪ್ರಶಸ್ತಿ ಪ್ರಧಾನ ನೆರವೇರಿಸಿ ಮಾತನಾಡಿದ ಸುಜಾತ ತಳವಾರ್, ದಿನಕಳೆದಂತೆ ವಿದ್ಯಾಥಿ೯ಗಳಿಗೆ ಲಭಿಸುತ್ತಿರುವ ನವತಾಂತ್ರಿಕತೆಯ ಮಾಧ್ಯಮಗಳಿಂದಾಗಿ ಮೊದಲಿನಂತೆ ಪಾಠ ಹೇಳಲು ಸಾಧ್ಯವಿಲ್ಲದಂತಾಗಿ ಶಿಕ್ಷಕರ ವೖತ್ತಿಯೂ ಸವಾಲಿನದ್ದಾಗುತ್ತಲೇ ಇದೆ ಇಂಥ ಸ್ಥಿತಿಯಲ್ಲಿ ವಿದ್ಯಾಥಿ೯ಗಳಿಗೆ ಹೊಸ ವಿಚಾರಗಳ ಬಗ್ಗೆ ತಿಳಿಹೇಳುತ್ತಲೇ ಪಠ್ಯ, ಪಠ್ಯೇತರ ವಿಚಾರಗಳನ್ನು ಕಲಿಸುವ ಬಹಳ ದೊಡ್ಡ ಹೊಣೆಗಾರಿಕೆ ಶಿಕ್ಷಕ ವೖತ್ತಿಯವರದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಕೂಡ ಹಲವು ಸಂದಭ೯ಗಳಲ್ಲಿ ಪೋಷಕರಿಗೆ ಗುರುವಾಗಿ ಪರಿಣಮಿಸುತ್ತಾರೆ. ಮಕ್ಕಳಿಂದಲೂ ಕಲಿಯುವುದು ಸಾಕಷ್ಟಿರುತ್ತದೆ ಎಂದು ಹೇಳಿದ ಸುಜಾತ, ಶಿಕ್ಷಕರಿಗೆ ಹಿಂದಿನ ಕಾಲದಿಂದ ಇಂದಿನ ಕಾಲದವರಗೂ ತರಗತಿಯಲ್ಲಿ ಪಾಠ ಮಾಡುವುದು ಎಂದರೆ ನಿತ್ಯದ ಅಗ್ನಿಪರೀಕ್ಷೆಯ ಸನ್ನಿವೇಶವೇ ಆಗಿರುತ್ತದೆ. ಪಠ್ಯದಲ್ಲಿ ಇರುವುದರೊಂದಿಗೆ ಜೀನದ ಇತರ ಮೌಲ್ಯಗಳನ್ನೂ ಕಲಿಸಬೇಕಾದ ಗುರುಗಳು ಸಮಾಜದಲ್ಲಿ ಎಂದೆಂದೂ ಇತರ ವೖತ್ತಿಗೆ ಸರಿಸಾಟಿಯಾಗದ ಜ್ಞಾನವಂತರಾಗಿದ್ದಾರೆ ಎಂದು ಶ್ಲಾಘಿಸಿದರು. ಬದುಕಿನಲ್ಲಿ ನಿಖರ ಗುರಿ ಮುಟ್ಟಲು ಸರಿಯಾದ ಗುರು ಮುಖ್ಯವಾಗಿರುತ್ತಾರೆ. ಇಂಥ ಗುರುವಿದ್ದರೆ ಸಾಧನೆಯ ಗುರಿ ಸುಲಭಸಾಧ್ಯ ಎಂದೂ ಸುಜಾತ ತಳವಾರ್ ಅಭಿಪ್ರಾಯಪಟ್ಟರು.ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ಮಾತನಾಡಿ, ಶಿಕ್ಷಕರನ್ನು ಸನ್ಮಾನಿಸುವ ಮೂಲಕ ರೋಟರಿ ಸಂಸ್ಥೆಯು ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಜೀವನದ ಎಲ್ಲಾ ಹಂತದಲ್ಲಿಯೂ ಒಂದಲ್ಲ ಒಂದು ಹಂತದಲ್ಲಿ ಗುರು ಅಗತ್ಯ ಎಂದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ಎಚ್.ಎಸ್. ವಸಂತಕುಮಾರ್ ಮಾತನಾಡಿ, ವಿದ್ಯಾಥಿ೯ಗಳಿಗೆ ದಾರಿದೀಪದಂತಿರುವ ಶಿಕ್ಷಕರು, ಸಮಾಜಕ್ಕೆ ಕೂಡ ಉತ್ತಮ ಮಾಗ೯ದಶ೯ಕರಾಗಿದ್ದಾರೆ. ಶಿಕ್ಷಕರ ಸಾಧನೆ ಗುರುತಿಸಿ, ಸನ್ಮಾನಿಸಿ ಭವಿಷ್ಯದಲ್ಲಿ ಮತ್ತಷ್ಟು ಯುವ ಶಿಕ್ಷಕರಿಗೆ ಪ್ರೇರಣೆ ನೀಡುವ ಕಾಯ೯ವನ್ನು ರೋಟರಿ ಸಂಸ್ಥೆಗಳು ಮಾಡುತ್ತಿದೆ ಎಂದರು.ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂಧನ್ ಮಾತನಾಡಿ, ಉತ್ತಮ ಗುರುಗಳಿದ್ದಾಗ ಉತ್ತಮ ಸಮಾಜ ನಿಮಾ೯ಣ ಸುಲಭಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸೇನೆ ಸೇರುವ ಯುವಪೀಳಿಗೆಗೆ ತರಬೇತಿ ನೀಡುತ್ತಿರುವ ಅಮ್ಮತ್ತಿ ಕಾಮಾ೯ಡು ಗ್ರಾಮದ ಕುಟ್ಟಂಡ ಲವ, ಭೀಮಯ್ಯ ಮಡಿಕೇರಿಯ ಚೆಸ್ ತರಬೇತುದಾರ ಎನ್.ಟಿ. ಶಂಕರನಾರಾಯಣ, ಅರೆಕಾಡುವಿನ ಮುಖ್ಯ ಶಿಕ್ಷಕಿ ಪಿ.ಎಂ. ಪದ್ಮಾವತಿ, ಮದೆನಾಡಿನ ನಿವೖತ್ತ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರನ್ನು ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ವಂದಿಸಿದ ಕಾಯ೯ಕ್ರಮವನ್ನು ರೋಟರಿ ನಿದೇ೯ಶಕರಾದ ಅನಿಲ್ ಹೆಚ್.ಟಿ, ಅನಿತಾಪೂವಯ್ಯ, ಸತೀಶ್ ಸೋಮಣ್ಣ, ಡಾ. ತಾರಾನಂದ್, ಡಾ. ಕೖಷ್ಣದೀಪ್, ನಿವ೯ಹಿಸಿದರು. ಪತ್ರಕತ೯ ನಿಶಾಂತ್ ಬೆಳ್ಯಪ್ಪ ಸಂಪಾದಕತ್ವದ ರೋಟೋ ಮಿಸ್ಟ್ ವಾತಾ೯ ಸಂಚಿಕೆಯನ್ನು ಈ ಸಂದಭ೯ ಅನಾವರಣಗೊಳಿಸಲಾಯಿತು.