ಎಲ್ಲರ ಕಷ್ಟಗಳಿಗೆ ಸ್ಪಂದಿಸಿ ನಡೆಯುವುದೇ ಧರ್ಮದ ಸಾರ:ಶಾಸಕ ಶಿವಲಿಂಗೇಗೌಡ

| Published : Jul 30 2024, 12:32 AM IST

ಎಲ್ಲರ ಕಷ್ಟಗಳಿಗೆ ಸ್ಪಂದಿಸಿ ನಡೆಯುವುದೇ ಧರ್ಮದ ಸಾರ:ಶಾಸಕ ಶಿವಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಮೌಲಾನಾ ರಿಜ್ವಾನ್ ಖಾದ್ರಿ ಅವರಿಂದ ಕುರಾನ್ ಪಠಣ ನಡೆಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಅವರ ಕಷ್ಟ ದುಃಖಗಳಿಗೆ ಸ್ಪಂದಿಸಿಕೊಂಡು ಹೋಗುವುದೇ ಧರ್ಮದ ಸಾರ. ಸಮಾಜ ಬಾಂಧವರು ಸಹನೆ ಶಾಂತಿ ಸಹಬಾಳ್ವೆಯಿಂದ ಬಾಳುವಂತೆ ಅಲ್ಲಾಹನಲ್ಲಿ ನಾನು ಪ್ರಾರ್ಥಿಸುವುದಾಗಿ ಶಾಸಕ ಶಿವಲಿಂಗೇಗೌಡ ತಿಳಿಸಿದರು. ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೇಟಿಕುರ್ಕೆ (ಡಿ.ಎಂ ಕುರ್ಕೆ) ಗ್ರಾಮದ ಜಾಮಿಯಾ ಮಸೀದಿಯನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಇನ್ನೂ ಹಲವು ಯೋಜನೆಗಳಿಗೆ ಅನುದಾನಗಳನ್ನು ತರುವ ಮೂಲಕ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಪಡಿಸಿ ಒಟ್ಟಾರೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುದಾಗಿ ಹೇಳಿದರು. ಕಮಿಟಿಯ ಅಧ್ಯಕ್ಷ ನೂರುಲ್ಲಾ ಮಾತನಾಡಿ, ಡಿ.ಎಂ.ಕುರ್ಕೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಬಾಂಧವರು ಸಣ್ಣದಾದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅನಾನುಕೂಲ ಇದ್ದ ಕಾರಣ ರಾಜ್ಯ ಸರ್ಕಾರದ ವಸತಿ ಹಾಗೂ ವಾಕ್ ಬೋರ್ಡ್ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಮುಸ್ಲಿಂ ಬಾಂಧವರು ಗ್ರಾಮದ ಹಿಂದೂ ಬಾಂಧವರ ಸಹಕಾರದಿಂದ ಒಂದು ಸುಂದರವಾದ ಮಸೀದಿಯನ್ನು ಪುನರ್ ನಿರ್ಮಾಣ ಮಾಡಲು ಇಂದು ಸಾಧ್ಯವಾಗಿದೆ ಇದಕ್ಕೆ ಸಹಕಾರ ನೀಡಿದಂತ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ನಗರಸಭೆ ಸದಸ್ಯ ಎಂ.ಸಮಿವುಲ್ಲಾ ಮಾತನಾಡಿದರು.

ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಮೌಲಾನಾ ರಿಜ್ವಾನ್ ಖಾದ್ರಿ ಅವರಿಂದ ಕುರಾನ್ ಪಠಣ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಚನ್ನಬಸವ, ಸುರೇಶ್, ಗೌರೇಶ್, ಸಸಿವಾಳ ಅನಿಲ್, ಮೇಟಿಕುರ್ಕೆ ಜಾಮಿಯಾ ಮಸೀದಿಯ ಅಧ್ಯಕ್ಷ ನೂರುಲ್ಲಾ , ಕಾರ್ಯದರ್ಶಿ ಶಹಾನವಾಜ್, ಅತಿಫ್, ಮಹಮ್ಮದ್ ಶಫಿ ಮತ್ತಿತರರಿದ್ದರು.