ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಲೋಕೊಪಯೋಗಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿ ನಡೆದಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಪಟ್ಟಣದ ಸೌಂದರ್ಯಕ್ಕೆ ಮೆರಗು ನೀಡಿದೆ.ರಸ್ತೆಗಳ ಅಗಲೀಕರಣ, ನಗರ ಸೌಂದರ್ಯದ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿತೆಯ ಜತೆ ಇಂಡಿ ಜಿಲ್ಲಾ ಕೇಂದ್ರದ ಕನಸು ಹೊತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲರ ಕನಸಿಗೆ ಕೈಜೊಡಿಸಿದಂತೆ ಸ್ಟೇಷನ್ ರಸ್ತೆ ಮೆರಗು ತಂದಿದೆ. ಸುಮಾರು ₹5 ಕೋಟಿ ವೆಚ್ಚದಲ್ಲಿ ನಡೆದ ಸಿಸಿ ವಿಭಜಕ ರಸ್ತೆ, ₹2 ಕೊಟಿ ವೆಚ್ಚದಲ್ಲಿ ನಿರ್ಮಿಸಿದ ವಿಭಜಕ ಮಧ್ಯದ ಅಲಂಕಾರಿಕ ವಿದ್ಯುತ್ ದೀಪಗಳು ಕಂಗೊಳಿಸುವಂತೆ ಮಾಡಿವೆ. ರಾತ್ರಿ ಸ್ಟೇಷನ್ ರಸ್ತೆಯ ಮೇಲೆ ಹೊರಟರೇ ಇದೇನು ಬೆಂಗಳೂರು ರಸ್ತೆಯೋ ಎನ್ನುವಂತೆ ಭಾಸವಾಗುತ್ತದೆ.
ಇಂಡಿ ಜಿಲ್ಲಾ ಕೇಂದ್ರದ ಕೂಗಿಗೆ ಮುಕುಟದಂತೆ ಮಿನಿ ವಿಧಾನಸೌಧ ಹಾಗೂ ಸ್ಟೇಷನ್ ರಸ್ತೆ ಶೋಭಿಸುತ್ತಿವೆ. ಇದರಿಂದ ನಗರ ಸೌಂದರ್ಯವೂ ಹೆಚ್ಚಾಗಲು ಸಹಾಯವಾಗಿದೆ. ರಸ್ತೆಯ ಮಧ್ಯದಲ್ಲಿ ತಲೆ ಎತ್ತಿದ ವಿವಿಧ ಬಣ್ಣದ ಅಲಂಕಾರಿಕ ವಿದ್ಯುತ್ ದೀಪಗಳು ಆಕರ್ಷಿಸುವಂತಾಗಿದೆ. ರಸ್ತೆಯ ವಿಭಜಕದ ಮಧ್ಯ ಅಲಂಕಾರಿಕ ಸಸಿಗಳನ್ನು ನೆಟ್ಟರೆ ಇಂಡಿ ನಗರದ ಸೊಬಗಿಗೆ ಮತ್ತಷ್ಟು ಮೆರಗು ನೀಡಿದಂತಾಗುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ನಾಗರಿಕರಿಗೆ ಶುದ್ಧ ಗಾಳಿ ಸಿಗುವುದರ ಜೊತೆಗೆ ಅಭಿವೃದ್ಧಿಗೆ ಮತ್ತೊಂದು ಅಡಿಗಲ್ಲು ಇಟ್ಟಂತಾಗುತ್ತದೆ. ನಗರಕ್ಕೆ ಸಾರ್ವಜನಿಕರಿಗೆ ಆಕರ್ಷಿಸುವ ಜತೆಗೆ ಹಸಿರೀಕರಣ ಸೃಷ್ಟಿಸಲು ಅನುಕೂಲವಾಗುತ್ತದೆ. ಇಂಡಿ ಸ್ಟೇಷನ್ ರಸ್ತೆ ಶಿರಾಡೋಣ-ಲಿಂಗಸೂರು, ಪಂಡರಪೂರ-ಗಾಣಗಾಪೂರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಈ ರಾಜ್ಯ ಹೆದ್ದಾರಿಗಳು ಮುಂಬರುವ ದಿನದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೇಗೆರಿದರೆ ಈ ರಸ್ತೆ ಮತ್ತಷ್ಟು ಮೆರಗು ಹೆಚ್ಚಿಸುತ್ತದೆ. ನಗರದ ಹಂಜಗಿ ರಸ್ತೆಯ ಕ್ರಾಸ್‌ದಿಂದ ಅಮರ ಇಂಟರ್ ನ್ಯಾಷನಲ್ ಹೋಟೆಲ್, ಕೃಷಿ ವಿಜ್ಞಾನ ಕೇಂದ್ರದವರೆಗೆ ಸುಮಾರು ಒಂದುವರೇ ಕಿಮೀವರೆಗೆ ನಡೆದಿರುವ ರಸ್ತೆ ವಿಭಜಕ ರಸ್ತೆ, ಮಧ್ಯದಲ್ಲಿ ಅಲಂಕಾರಿಕ ವಿದ್ಯುತ್ ಕಂಗಳ ದೀಪಗಳು ನೊಡುಗರನ್ನು ಆಕರ್ಷಿಸುವಂತಾಗಿದೆ. ಇಂಡಿಯಿಂದ ರೈಲು ನಿಲ್ದಾಣದ ವರೆಗಿನ ಸುಮಾರು 6 ಕಿಮೀ ರಸ್ತೆ ಸಂಪೂರ್ಣ ಅಭಿವೃದ್ಧಿಪಡಿಸಲಾಗಿದ್ದು, 6 ಕಿಮೀ ರಸ್ತೆ ಕೇವಲ 10 ನಿಮಿಷದಲ್ಲಿ ಇಂಡಿಯನ್ನು ತಲುಪುವಂತಾಗಿದೆ.ಸ್ಟೇಷನ್ ರಸ್ತೆಯಂತೆ ಸಿಂದಗಿ, ವಿಜಯಪುರ, ಅಗರಖೇಡ ರಸ್ತೆ ಆಕರ್ಷಿಸುವಂತೆ ಮಾಡಿದರೇ ಇಂಡಿ ಜಿಲ್ಲಾ ಕೇಂದ್ರದ ಕೂಗಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ಇಂಡಿ ಬಸವೇಶ್ವರ ವೃತ್ತದಿಂದ ಸಿಂದಗಿ ರಸ್ತೆಯ ವೀರಭಾರತಿ ಶಾಲೆ, ವಿಜಯಪುರ ರಸ್ತೆಯ ಆದರ್ಶ ವಿದ್ಯಾಲಯ, ಅಗರಖೇಡ ರಸ್ತೆಯ ಸಾತಪೂರ ಕ್ರಾಸ್‌ವರೆಗೆ ವಿಭಜಕ ರಸ್ತೆ, ಮಧ್ಯದಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳು, ಮಧ್ಯದಲ್ಲಿ ವಿವಿಧ ಬಗೆಯ ಬಣ್ಣದ ಸಸಿಗಳು ನೆಟ್ಟರೆ, ಬೆಂಗಳೂರು, ವಿಜಯಪುರ ನಗರಗಳನ್ನು ಹೊಲುವಂತೆ ಇಂಡಿಯೂ ಸಜ್ಜಾಗಲಿದೆ. ಅಲ್ಲದೆ ಇಂಡಿ ಸುತ್ತ-ಮುತ್ತಲು ಅಹ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ. ಆ ಕೆಲಸ ಶೀಘ್ರ ಆಗಲಿ ಎಂಬುವುದು ತಾಲೂಕಿನ ಸಾರ್ವಜನಿಕರ ಆಗ್ರಹ.ಇಂಡಿಯನ್ನು ಜಿಲ್ಲಾ ಕೇಂದ್ರವಾಗಬೇಕು, ಜಿಲ್ಲಾ ಕೇಂದ್ರಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂಬ ಕನಸಿನಿಂದ ಮಿನಿ ವಿಧಾನಸೌಧ, ಹೆಲಿಪ್ಯಾಡ್, ಕ್ರೀಡಾಂಗಣ, ವಿವಿಧ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಸೇರಿದಂತೆ ವಿವಿಧ ಅಭಿವೃದ್ಧಿಪರ ಕಾರ್ಯಗಳನ್ನು ಮಾಡಲಾಗಿದೆ. ಮುಂಬರುವ ದಿನದಲ್ಲಿ ಇಂಡಿ ಜಿಲ್ಲೆ ಮಾಡದಿದ್ದರೇ ಮುಂಬರುವ ವಿಧಾನಸಭೆ ಚುನಾವಣೆ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆಯೂ ಮಾಡಲಾಗಿದೆ. ಹೀಗಾಗಿ ಸ್ಟೇಷನ್ ರಸ್ತೆ ಅಭಿವೃದ್ಧಿಪಡಿಸಲಾಗಿದೆ.ಈಗಾಗಲೇ ವಿಜಯಪುರ, ಸಿಂದಗಿ, ಅಗರಖೇಡ ರಸ್ತೆಗಳ ಅಗಲೀಕರಣ ಮಾಡಲಾಗಿದ್ದು, ಮುಂಬರುವ ದಿನದಲ್ಲಿ ಎಲ್ಲ ರಸ್ತೆಗಳ ವಿಭಜಕಗಳಿಗೆ ವಿದ್ಯುತ್ ದೀಪಗಳ ಜತೆಗೆ, ಅಲಂಕಾರಿಕ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗುತ್ತದೆ.-ಯಶವಂತರಾಯಗೌಡ ಪಾಟೀಲ,
ಶಾಸಕರು,ಇಂಡಿ.ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಅಡಿಯಲ್ಲಿ 5 ಕೋಟಿ ವೆಚ್ಚದಲ್ಲಿ ಸ್ಟೇಷನ್ ರಸ್ತೆಯಲ್ಲಿ ವಿಭಜಕ ಕಾಂಕ್ರೇಟ್ ರಸ್ತೆ ನಿರ್ಮಿಸಲಾಗಿದೆ.ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ನಗರ ಸೌಂದರ್ಯಕರಣಕ್ಕೆ ಒತ್ತು ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಸ್ಟೇಷನ್ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಮುಂಬರುವ ದಿನದಲ್ಲಿ ಪಟ್ಟಣದ ಮುಖ್ಯ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.-ದಯಾನಂದ ಮಠ, ಎಇಇ, ಲೋಕೊಪಯೋಗಿ ಇಲಾಖೆ, ಇಂಡಿ. ಸ್ಟೇಷನ್ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ಪುರಸಭೆಯ ಪಾತ್ರವಿಲ್ಲ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅನುದಾನ ಒದಗಿಸಿದ್ದರಿಂದ ಲೋಕೋಪಯೋಗಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ಅಭಿವೃದ್ಧಿಯಾಗಿದೆ. ರಸ್ತೆ ಉದ್ಘಾಟನೆಗೊಂಡು ಪುರಸಭೆಗೆ ಹಸ್ತಾಂತರಸಿದ ಮೇಲೆ ಪುರಸಭೆ ನಿರ್ವಹಣೆ ಮಾಡುತ್ತದೆ.
-ಮಹಾಂತೇಶ ಹಂಗರಗಿ, ಮುಖ್ಯಾಧಿಕಾರಿ, ಪುರಸಭೆ, ಇಂಡಿ.ಶಾಸಕ ಯಶವಂತರಾಯಗೌಡ ಪಾಟೀಲ ಅವರ ಇಂಡಿ ಜಿಲ್ಲೆಯಾಗಬೇಕು ಎಂಬ ಅವರ ಕನಸಿನಂತೆ, ಜಿಲ್ಲಾ ಕೇಂದ್ರಕ್ಕೆ ಪೂರಕವಾದ ರಸ್ತೆಗಳನ್ನು ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ. ವಿಭಜಕದ ಮದ್ಯ ವಿವಿಧ ಬಗೆಯ ಬಣ್ಣದ ವಿದ್ಯುತ್ ದೀಪಗಳ ಕಂಬಗಳನ್ನು ನೆಡಲಾಗಿದೆ. ಇದು ರಸ್ತೆ ಮತ್ತಷ್ಟು ಅಂದವಾಗಿಸಿದೆ. ಇಂಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಜಿಲ್ಲಾ ಕೇಂದ್ರಕ್ಕೆ ಪೂರಕವಾದ ವಾತಾವರಣ ಇಂಡಿಯಲ್ಲಿ ನಿರ್ಮಿಸುತ್ತಿದ್ದಾರೆ.
-ಜಾವೀದ್ ಮೋಮಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಇಂಡಿ.