The family left the village because they could not pay their debts

ಕಡೂರು: ಸಾಲ ತೀರಿಸಲಾಗದೆ ಕುಟುಂಬವೊಂದು ಊರು ಬಿಟ್ಟಿರುವ ಪ್ರಕರಣವು ಕಡೂರು ತಾಲೂಕಿನ ಎಮ್ಮೇದೊಡ್ಡಿಯಲ್ಲಿ ನಡೆದಿದೆ.

ತಾಲೂಕಿನ ಎಮ್ಮೇದೊಡ್ಡಿ ಗ್ರಾಮದ ಶ್ರೀನಿವಾಸ್ ಅವರ ಮನೆ ಕಟ್ಟಲು ಕಡೂರಿನ ಖಾಸಗಿ ಬ್ಯಾಂಕ್ ಒಂದರಿಂದ 7 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. 8 ವರ್ಷಗಳ ಕಾಲದ ಇಎಂಐ ರೂಪದ 7 ಲಕ್ಷ ಲೋನ್ ಮಾಡಿದ್ದಕ್ಕೆ ಮೂರು ವರ್ಷಗಳಿಂದ ಕಂತು ಕಟ್ಟಿದ ಶ್ರೀನಿವಾಸ್ ಅವರು ಅರ್ಥಿಕ ಸಂಕಷ್ಟದಿಂದ ಕಳೆದ ನಾಲ್ಕು ತಿಂಗಳಿನಿಂದ ಇಎಂಐ ಕಟ್ಟಿರಲಿಲ್ಲ ಎನ್ನಲಾಗಿದೆ. ಬ್ಯಾಂಕಿನ ಸಿಬ್ಬಂದಿ ತಿಂಗಳ ಕಂತು ಬಡ್ಡಿ ಕಟ್ಟುವಂತೆ ಮನೆ ಬಾಗಿಲಿಗೆ ಬಂದು ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಮನೆ ಹರಾಜು ಹಾಕುವುದಾಗಿ ಬೆದರಿಕೆ ಆರೋಪ ಕೇಳಿ ಬಂದಿದ್ದು, ಶ್ರೀನಿವಾಸ್ ಅವರ ಮನೆಯ ಗೋಡೆಯ ಮೇಲೆ ಬ್ಯಾಂಕಿಗೆ ಸೇರಿದ್ದು ಎಂಬ ಬರಹ ಕೂಡ ಬರೆದಿದ್ದು, ಇದರಿಂದ ಬೇಸತ್ತು ಇಡೀ ಕುಟುಂಬವು ಊರು ಬಿಟ್ಟಿರುವುದಾಗಿ ತಿಳಿದು ಬಂದಿದೆ.