ಹೆತ್ತ ತಂದೆ, ತಾಯಿ, ಭೂತಾಯಿ ಸ್ವರ್ಗಕ್ಕೆ ಸಮಾನ

| Published : Dec 30 2024, 01:03 AM IST

ಹೆತ್ತ ತಂದೆ, ತಾಯಿ, ಭೂತಾಯಿ ಸ್ವರ್ಗಕ್ಕೆ ಸಮಾನ
Share this Article
  • FB
  • TW
  • Linkdin
  • Email

ಸಾರಾಂಶ

The father, mother, and earthly mother are equal to heaven.

-ಸುನಂದಮ್ಮ ಜಯದೇವಯ್ಯ ಮುಧೋಳ್ ಮಠ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ

-----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹೆತ್ತ ತಂದೆ, ತಾಯಿ, ಭೂತಾಯಿ ಸ್ವರ್ಗಕ್ಕೆ ಸಮಾನ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮಿಗಳು ತಿಳಿಸಿದರು. ಸುನಂದಮ್ಮ ಜಯದೇವಯ್ಯ ಮುಧೋಳ್ ಮಠರವರ ಸಹಸ್ರ ಚಂದ್ರ ದರ್ಶನದ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದ ಅವರು, ತಾಯಿ ಮಗುವಿಗೆ ಜನ್ಮ ನೀಡಿ, ಸಂಸ್ಕೃತಿ ಕಲಿಸಿ, ಸಮಾಜದಲ್ಲಿ ಧರ್ಮದ ತಳಹದಿಯ ಮೇಲೆ ಜೀವನ ರೂಪಿಸಿಕೊಳ್ಳುವ ಮೊದಲ ಗುರುವಾಗಿದ್ದು, ಈ ದಂಪತಿಗಳ ಆದರ್ಶ ಬದುಕು ಕುಟುಂಬಕ್ಕೆ, ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.

ನಿತ್ಯ ತಂದೆ ತಾಯಿ ಸೇವೆ ಮಾಡಿ ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿ ಕೊಂಡು ಧರ್ಮ ಮಾರ್ಗದಲ್ಲಿ ಸಾಗಬೇಕೆಂದರು.

ಶ್ರೀ ಮಹಾಂತ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಮಳೆ ಹಿರೇಮಠ ತೊಗರ್ಸಿ. ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ಕಬ್ಬಿಣ ಕಂತಿಮಠ ರಟ್ಟೀಹಳ್ಳಿ ಶ್ರೀಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ ಸಾಲೂರು. ಶ್ರೀ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಪಂಚವಣ್ಣಿಗೆ ಮಠ ತೊಗರ್ಸಿ, ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ ನರೇಗಲ್ಲು, ಮೂಲಿಮಠ ಸವದತ್ತಿ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು, ಹಿರೇಮಾಗಡಿ, ಜಯದೇವಯ್ಯ ದಂಪತಿ ಸಾಧನೆ ಕುರಿತು ಮಾತನಾಡಿ ಶುಭ-ಹಾರೈಸಿದರು.

ವೀರಶೈವ ಸಮಾಜ, ಸುರಭಿ ಬಳಗ, ಮುಂತಾದ ಸಂಸ್ಥೆಯವರು ಜಯದೇವಯ್ಯ ದಂಪತಿ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.

---------------

ಫೋಟೋ: 29ಎಸ್‌ಕೆಪಿ01

ಸುನಂದಮ್ಮ ಜಯದೇವಯ್ಯ ಮುಧೋಳ್ ಮಠ ಅವರ ಸಹಸ್ರ ಚಂದ್ರದರ್ಶನ ಕಾರ್ಯಕ್ರಮವನ್ನು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮಿಗಳು ಉದ್ಘಾಟಿಸಿದರು.