ಸಪ್ತಾಂಬಿಕ ದೇವಿಯ ಜಾತ್ರಾ ಮಹೋತ್ಸವ

| Published : Mar 18 2025, 12:35 AM IST

ಸಾರಾಂಶ

ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಹೆಗ್ಗಟ್ಟ ಗ್ರಾಮದ ಗ್ರಾಮ ದೇವತೆ ಸಪ್ತಾಂಬಿಕ ದೇವಿಯ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಸಪ್ತಂಬಿಕ ಮಾತೆಯು ಶಕ್ತಿ ದೇವತೆಯಾಗಿದ್ದು ಭಕ್ತಿಯಿಂದ ನಡೆದುಕೊಳ್ಳುವ ತನ್ನ ಭಕ್ತರನ್ನು ಉದ್ಧರಿಸುತ್ತಾ ಬಂದಿರುವುದರಿಂದಲೇ ದೇವಿಯ ಮಹಿಮೆ ಮತ್ತು ಪವಾಡಗಳು ಭಕ್ತರಿಗೆ ಮನವರಿಕೆಯಾಗಿದೆ ದಯಾಮಯಳಾಗಿರುವ ಸಪ್ತಾಂಬಿಕ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲು ಇರಲಿ ಎಂದು ಪ್ರಾರ್ಥಿಸಿವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಗಂಡಸಿ ಹೋಬಳಿ ಹೆಗ್ಗಟ್ಟ ಗ್ರಾಮದ ಗ್ರಾಮ ದೇವತೆ ಸಪ್ತಾಂಬಿಕ ದೇವಿಯ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಬಳಿಕ ಗ್ರಾಮ ದೇವತೆ ಸಪ್ತಾಂಬಿಕ ದೇವಿ ಸಮೇತ ಧೂತರಾಯ ಸ್ವಾಮಿ ಮತ್ತು ಮುತ್ತುರಾಯಸ್ವಾಮಿಯ ಉತ್ಸವವು ಗ್ರಾಮದ ಮುಖ್ಯ ರಸ್ತೆಗಳಲ್ಲಿ ನಡೆದ ಬಳಿಕ ದೇವಾಲಯಕ್ಕೆ ಗ್ರಾಮ ದೇವತೆಗಳನ್ನು ಕರೆ ತರಲಾಯಿತು.

ಉತ್ಸವದಲ್ಲಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ಯಾವುದೇ ಧರ್ಮದ ಹಬ್ಬ ಹರಿದಿನಗಳ ಆಚರಣೆ ಇರಬಹುದು ಅಥವಾ ಈ ರೀತಿಯ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ವಿರಬಹುದು, ಇವುಗಳ ಆಚರಣೆಯ ಮೂಲ ಆಶಯವೆಂದರೆ ಸಮಾಜದ ಪ್ರತಿಯೊಬ್ಬರು ಕೂಡಿಕೊಂಡು ಹಬ್ಬ ಹರಿದಿನ ಜಾತ್ರಾ ಮಹೋತ್ಸವ ಆಚರಣೆ ಮಾಡಿದರೆ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಎಂದರು. ಸಪ್ತಂಬಿಕ ಮಾತೆಯು ಶಕ್ತಿ ದೇವತೆಯಾಗಿದ್ದು ಭಕ್ತಿಯಿಂದ ನಡೆದುಕೊಳ್ಳುವ ತನ್ನ ಭಕ್ತರನ್ನು ಉದ್ಧರಿಸುತ್ತಾ ಬಂದಿರುವುದರಿಂದಲೇ ದೇವಿಯ ಮಹಿಮೆ ಮತ್ತು ಪವಾಡಗಳು ಭಕ್ತರಿಗೆ ಮನವರಿಕೆಯಾಗಿದೆ ದಯಾಮಯಳಾಗಿರುವ ಸಪ್ತಾಂಬಿಕ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲು ಇರಲಿ ಎಂದು ಪ್ರಾರ್ಥಿಸಿವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿಮೆಂಟ್ ನಾಗಣ್ಣ,ಲಾಯರ್ ಮೋಹನ್, ಸೋಮಶೇಖರ್, ದೈಹಿಕ ಶಿಕ್ಷಕ ರವೀಶ್ ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು.