ಸಂಜೆ ೬ ಗಂಟೆಗೆ ಸಹಾಸ್ರಾರು ಭಕ್ತರು ದೇವಿಯ ಹೆಸರಿನಲ್ಲಿ ಉಧೋ ಉಧೋ ಎನ್ನುತ್ತಾ ಗುಡ್ಡದ ಆವರಣದಿಂದ ಬನ್ನಿಕಟ್ಟಿಯವರೆಗೆ ಮಹಾರಥವನ್ನು ಎಳೆದು ತಂದರು.
ಶಿರಹಟ್ಟಿ: ತಾಲೂಕಿನ ಶ್ರೀಮಂತಗಡ ಗ್ರಾಮದ ಹೊಳಮ್ಮದೇವಿಯ ಮಹಾರಥೋತ್ಸವವು ಭಾನುವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಬೆಳಗ್ಗೆ ೬ ಗಂಟೆಗೆ ದೇವಿಗೆ ರುದ್ರಾಭಿಷೇಕ, ಉಡಿ ತುಂಬುವುದರ ಮೂಲಕ ಮಹಾಪೂಜೆ ಸಲ್ಲಿಸಲಾಯಿತು, ನಂತರ ದೇವಸ್ಥಾನದ ಪರಂಪರೆಯಂತೆ ಮುತ್ತೈದೆಯರಿಗೆ ಉಡಿ ತುಂಬುವುದು, ಪಡ್ಡಲಗಿ ತುಂಬಿ ಜೋಗು ಹಾಕುವ ಕಾರ್ಯಕ್ರಮ ತದನಂತರ ದೇವಸ್ಥಾನದ ಆವರಣದಲ್ಲಿ ದೇವಿಯ ಅಲಂಕೃತ ಮಂಟಪದಲ್ಲಿ ಪಲ್ಲಕ್ಕಿ ಸಮೇತ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಛತ್ರಿ- ಚಾಮರ, ದಿವಟಗಿ, ಡೊಳ್ಳು ಕುಣಿತ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.ಸಂಜೆ ೬ ಗಂಟೆಗೆ ಸಹಾಸ್ರಾರು ಭಕ್ತರು ದೇವಿಯ ಹೆಸರಿನಲ್ಲಿ ಉಧೋ ಉಧೋ ಎನ್ನುತ್ತಾ ಗುಡ್ಡದ ಆವರಣದಿಂದ ಬನ್ನಿಕಟ್ಟಿಯವರೆಗೆ ಮಹಾರಥವನ್ನು ಎಳೆದು ತಂದರು. ನೆರೆದಿದ್ದ ಜನಸ್ತೋಮವು ರಥದ ಕಳಸಕ್ಕೆ ಉತ್ತತ್ತಿ, ನಿಂಬೆಹಣ್ಣನ್ನು ಎಸೆದು ಭಕ್ತಿ ಭಾವದಿಂದ ದೇವಿಯ ಆರಾಧನೆ ಮಾಡಿದರು.ಹೊಳಲಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷ ಕೇಮಣ್ಣ ಪವಾರ, ನೂರಾರು ಭಕ್ತರು ಇದ್ದರು.ಶ್ರದ್ಧಾ- ಭಕ್ತಿಯ ಜಂಗಮೋತ್ಸವ
ಮುಂಡರಗಿ: ಅನ್ನದಾನೀಶ್ವರ ಶಿವಯೋಗಿಗಳ 156ನೇ ಯಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವದ 2ನೇ ದಿನ ಅಂದರೆ ಭಾನುವಾರ ಸಂಜೆ ಜಂಗಮೋತ್ಸವವು ಸಕಲ ಭಕ್ತರ ವೇದಮಂತ್ರ ಘೋಷಣೆಯೊಂದಿಗೆ ನೆರವೇರಿತು.ಡಾ. ಅನ್ನದಾನೀಶ್ವರ ಸ್ವಾಮೀಜಿ ಜಂಗಮೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ನಾಡಿನ ಹರ ಗುರು ಚರಮೂರ್ತಿಗಳು ಉಪಸ್ಥಿತರಿದ್ದರು.ಅಡ್ಡಪಲ್ಲಕ್ಕಿಯಲ್ಲಿ ನರಗುಂದದ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಆಸೀನರಾಗಿ ಭಕ್ತರಿಗೆ ದರ್ಶನಾಶಿರ್ವಾದ ನೀಡಿದರು. ಈ ಸಂದರ್ಭದಲ್ಲಿ ಭಕ್ತರು ಹೂವು, ಹಣ್ಣು, ಕಾಯಿಗಳನ್ನು ನೀಡಿ ಪೂಜೆ ಸಲ್ಲಿಸಿದರು. ಶ್ರೀಮಠದಿಂದ ಹೊರಟ ಜಂಗಮೋತ್ಸವದ ಅಡ್ಡಪಲ್ಲಕ್ಕಿ ಮಹೋತ್ಸವವು ಪಟ್ಟಣದ ವಿವಿಧೆಡೆ ತೆರಳಿ ನಂತರ ಮಠಕ್ಕೆ ಆಗಮಿಸಿತು.ಈ ಸಂದರ್ಭದಲ್ಲಿ ಯಾತ್ರಾ ಕಮಿಟಿ ಅಧ್ಯಕ್ಷ ಕೈಲಾಸಪತಿ ಹಿರೇಮಠ, ಮಹೇಶ ಜಂತ್ಲಿ, ಶಿವು ವಾಲಿಕಾರ, ಆನಂದ ನಾಡಗೌಡ್ರ, ಆರ್.ಆರ್. ಹೆಗ್ಗಡಾಳ, ಕರಬಸಪ್ಪ ಹಂಚಿನಾಳ, ಬಾಬಣ್ಣ ಶಿವಶೆಟ್ಟರ, ಬಸವರಾಜ ಬನ್ನಿಕೊಪ್ಪ, ಡಾ. ಬಿ.ಜಿ. ಜವಳಿ, ಎಸ್.ಎಂ. ಹೊಸಮಠ, ಸಂತೋಷ ಹಿರೇಮಠ, ವೀರೇಶ ಸಜ್ಜನರ, ಅನುಪಕುಮಾರ, ಮಂಜುನಾಥ ಶಿವಶೆಟ್ಟರ, ಮಂಜುನಾಥ ಕಾಲವಾಡ, ಪವನ್ ಮೇಟಿ, ಆಕಾಶ ಹಂಚಿನಾಳ, ನಾಗರಾಜ ಗುಡಿಮನಿ, ಆದರ್ಶ ಹಂಚಿನಾಳ, ಕುಮಾರ ಬನ್ನಿಕೊಪ್ಪ, ವೆಂಕಟೇಶ ದೇಸಾಯಿ, ರವಿ ಕುಂಬಾರ, ಮಂಜುನಾಥ ಇಟಗಿ, ರಾಘವೇಂದ್ರ ಪಟಗೆ, ಸಿದ್ದು ದೇಸಾಯಿ, ಮುತ್ತು ಅಳವಂಡಿ, ಗುಡದೀರಪ್ಪ ಲಿಂಬಿಕಾಯಿ, ದೇವು ಹಡಪದ, ರಂಗಪ್ಪ ಕೋಳಿ, ವಿಶ್ವನಾಥ ಗಡ್ಡದ, ಪ್ರಶಾಂತಗೌಡ ಗುಡದಪ್ಪನವರ, ವೀರೇಶ ಹಡಗಲಿ, ವಿನಯ ಗಂಧದ, ಗಿರೀಶ ಶೀರಿ, ಜಗದೀಶ ಹೊರಡಿ, ವಿ.ಎಸ್. ಗಟ್ಟಿ, ನಿಂಗಪ್ಪ ಭಂಡಾರಿ, ಮಂಜುನಾಥ ಮುಧೋಳ, ಗಂಗಾಧರ ನೂರಾರು ಭಕ್ತರು ಉಪಸ್ಥಿತರಿದ್ದರು.