ಸಾರಾಂಶ
ಕಡೂರು, ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ನಡುವೆ ಗುರುವಾರ ರಾತ್ರಿ ಸಂಪನ್ನವಾಯಿತು.
ಸಂಕ್ರಾಂತಿ ಹಬ್ಬದಿಂದ ಮೊಲ ಬಿಡುವ ಸೇವೆಯಿಂದ ಪ್ರಾರಂಭವಾದ ಜಾತ್ರೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ನಡುವೆ ಗುರುವಾರ ರಾತ್ರಿ ಸಂಪನ್ನವಾಯಿತು.
ಸಂಕ್ರಾಂತಿ ಹಬ್ಬದಿಂದ ಮೊಲ ಬಿಡುವ ಸೇವೆಯಿಂದ ಪ್ರಾರಂಭವಾದ ಜಾತ್ರೋತ್ಸವ ಪ್ರತಿದಿನ ಅಭೀಷೇಕ ಮತ್ತು ಹಣ್ಣು ತುಪ್ಪ ಸೇವೆಯೊಂದಿಗೆ ಗುರುವಾರ ರಾತ್ರಿ ನೇರವೇರಿತು. ಗುರುವಾರ ಬೆಳಗ್ಗೆಯಿಂದ ದೇವಾಲಯದಲ್ಲಿ ರಾಜ್ಯದ ಮೂಲೆ ಮೂಲೆ ಗಳಿಂದ ಬಂದ ಭಕ್ತಾಧಿಗಳು ಸ್ವಾಮಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಧನ್ಯರಾದರು.ಪಟ್ಟಣದ ಗ್ರಾಮಸ್ಥರು ಮತ್ತು ಭಕ್ತಾದಿಗಳು ಸೇರಿ ರಥಗಳನ್ನು ಅಲಂಕರಿಸುವ ಕಾರ್ಯದಲ್ಲಿ ಕೈಜೋಡಿಸಿದರು. ಮಧ್ಯಾಹ್ನ ಶ್ರೀ ಶಕುನ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಗ್ರಾಮದ ಬಿಡದಿ ಮನೆಗೆ ಕರೆತಂದು ಪ್ರತಿಷ್ಠಾಪಿಸ ಲಾಯಿತು.
ರಾತ್ರಿ 9.30 ಗಂಟೆಗೆ ಸರಿಯಾಗಿ ದೇವಾಲಯದಿಂದ ಶ್ರೀದೇವಿ ಮತ್ತು ಭೂದೇವಿಯವರ ಉತ್ಸವ ಮೂರ್ತಿಗಳನ್ನು ವೇದ ಘೋಷಗಳೊಂದಿಗೆ ಬಿಡದಿ ಮನೆ ಸಮೀಪದ ಅರಳೀಕಟ್ಟೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಆನಂತರ ಶ್ರೀದೇವಿ ಮತ್ತು ಭೂದೇವಿಯವರನ್ನು ರಂಗನಾಥಸ್ವಾಮಿಯೊಂದಿಗೆ ಕಲ್ಯಾಣೋತ್ಸವ ಮಾಡಿಸಿದರು. ಬಿಡದಿ ಮನೆಗೆ ತೆರಳಿದ ನಂತರ ಪೂಜೆ ಸಲ್ಲಿಸಲಾಯಿತು.ಅಲಂಕಾರಗೊಂಡ ಮಹಾರಥದಲ್ಲಿ ಶ್ರೀ ರಂಗನಾಥಸ್ವಾಮಿ ಮತ್ತು ದೇವಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷೆ ರಾಜಮ್ಮ , ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜು, ತಹಸೀಲ್ದಾರ್ ಮಂಜುನಾಥ್ , ದೇವಾಲಯ ಸಮಿತಿ ಲೋಕೇಶ್, ಸಚ್ಚಿದಾನಂದ, ಪೊಲೀಸ್ ವೃ ತ್ತ ನಿರೀಕ್ಷಕ ರಫೀಕ್ ಸೇರಿದಂತೆ ಕಂದಾಯಾಧಿಕಾರಿಗಳು, ಗ್ರಾಪಂ ಸದಸ್ಯರು, ದೇವಾಲಯ ಸಮಿತಿ ಸದಸ್ಯರು, ಭಕ್ತಾದಿಗಳು ಹಾಗೂ ಗ್ರಾಮಸ್ಥರು ರಥಕ್ಕೆ ಪೂಜೆ ಸಲ್ಲಿಸಿದರು. -- ಬಾಕ್ಸ್ ----ಗೋವಿಂದ ನಾಮ ಸ್ಮರಿಸುತ್ತಾ ರಥ ಎಳೆದ ಭಕ್ತರು
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ದಾಸಯ್ಯ ಶಂಖ ಜಾಗಟೆಗಳ ನಾದ ಹಾಗೂ ಹಳ್ಳಿ ವಾದ್ಯಗಳ ಅಬ್ಬರ, ಜೊತೆಗೆ ಪಟಾಕಿಗಳ ಶಬ್ಧ ಮುಗಿಲು ಮುಟ್ಟಿತ್ತು. ಗೋವಿಂದ ಗೋವಿಂದ ಎನ್ನುತ್ತ ರಥವನ್ನು ಎಳೆಯಲಾಯಿತು. ಭಕ್ತರು ರಥದ ಮೇಲೆ ಬಾಳೇಹಣ್ಣುಗಳನ್ನು ಎಸೆದು ಸಂಭ್ರಮಿಸಿದರು. ನಂತರ ಉತ್ಸವ ಮೂರ್ತಿಗಳನ್ನು ರಥದಲ್ಲಿ ಕುಳ್ಳಿರಿಸಿ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಥೋತ್ಸವ ಮುಗಿದ ಬಳಿಕ ಭಕ್ತರು ಶ್ರೀ ಕೆಂಚರಾಯಸ್ವಾಮಿಗೆ ತೆರಳಲು ಅಣಿಯಾಗುತ್ತಿರುವುದು ಕಂಡು ಬಂದಿತು.--
17ಕೆಕೆಡಿಯು2.ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ಭಾರಿ ಭಕ್ತರ ನಡುವೆ ಸಖರಾಯಪಟ್ಟಣದಲ್ಲಿ ಗುರುವಾರ ರಾತ್ರಿ ನಡೆಯಿತು.