ನೂರಾರು ಕೋಟಿ ಅನುದಾನದಿಂದ ಕ್ಷೇತ್ರ ಸಮಗ್ರ ಅಭಿವೃದ್ಧಿ ಮಾಡುವೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Mar 09 2024, 01:40 AM IST

ನೂರಾರು ಕೋಟಿ ಅನುದಾನದಿಂದ ಕ್ಷೇತ್ರ ಸಮಗ್ರ ಅಭಿವೃದ್ಧಿ ಮಾಡುವೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿ ತಾಲೂಕಿನ ನಾಗೇಗೌಡನದೊಡ್ಡಿ, ತಂಮ್ಮಡಹಳ್ಳಿ, ಮೊಳೇದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 8.5 ಕೋಟಿ ರು. ವೆಚ್ಚದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ನೀರಾವರಿ ಇಲಾಖೆಯಿಂದ 170 ಕೋಟಿ, 184 ಕೋಟಿ ಕುಡಿಯುವ ನೀರಿನ ಯೊಜನೆ, 25 ಕೋಟಿ ವಿಶೇಷ ಅನುದಾನ, ಎಸ್‌ಸಿಪಿ ಟಿಎಸ್‌ಪಿ 6 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ 15 ಕೋಟಿಗೂ ಹೆಚ್ಚು ಅನುದಾನ ತಂದಿದ್ದು, ಕಾಮಗಾರಿ ಆರಂಭಿಗೊಂಡಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜೊತೆಗೆ ನೂರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ವಿರೋಧಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ತಾಲೂಕಿನ ನಾಗೇಗೌಡನದೊಡ್ಡಿ, ತಂಮ್ಮಡಹಳ್ಳಿ, ಮೊಳೇದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 8.5 ಕೋಟಿ ರು. ವೆಚ್ಚದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.

ನೀರಾವರಿ ಇಲಾಖೆಯಿಂದ 170 ಕೋಟಿ, 184 ಕೋಟಿ ಕುಡಿಯುವ ನೀರಿನ ಯೊಜನೆ, 25 ಕೋಟಿ ವಿಶೇಷ ಅನುದಾನ, ಎಸ್‌ಸಿಪಿ ಟಿಎಸ್‌ಪಿ 6 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ 15 ಕೋಟಿಗೂ ಹೆಚ್ಚು ಅನುದಾನ ತಂದಿದ್ದು, ಕಾಮಗಾರಿ ಆರಂಭಿಗೊಂಡಿದೆ ಎಂದರು.

ಮುಖ್ಯಮಂತ್ರಿ ಆಗಮನ ವೇಳೆ ತುರ್ತು ಕಾಮಗಾರಿ ಕೈಗೊಂಡು ಪಟ್ಟಣದಲ್ಲಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಪಿಡ್ಲ್ಯೂಡಿ ಇಲಾಖೆಯಿಂದಲೂ 40 ಕೋಟಿ ಅನುದಾನ ಬಿಡುಗಡೆ ಮಾಡಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಹಿಂದಿನ ಆಡಳಿತದಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆ ಹಾಗೂ ಉಪ ನೋಂದಣಿ ಕಚೇರಿ ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಅಕ್ರಮಭೂಮಿ ಪರಭಾರೆ ಮಾಡಲಾಗಿದೆ. ಅದನ್ನು ಸರಿಪಡಿಸುವ ಜವಾಬ್ದಾರಿ ಈಗಾಗಲೇ ನಡೆಯುತ್ತಿದೆ. ಸುಮಾರು 800 ಎಕರೆ ವಾಪಸ್ ಪಡೆಯಲಿದೆ. ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲವು ಬೆಳಕಿಗೆ ಬರಲಿದೆ ಎಂದರು.

ಮುಖ್ಯಮಂತ್ರಿಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ತರುವುದರ ಜೊತೆಗೆ ವಿಶೇಷ ಶಾಲೆಗಳಿಗೂ ಮಂಜೂರಾತಿ ಪಡೆಯಲಾಗಿದೆ. ಹಲಗೂರು ಮತ್ತು ಬೆಳಕವಾಡಿಗೆ ಸಿಎಚ್‌ಸಿ ತರಲು ಸರ್ಕಾರಕ್ಕೆ ಬೇಡಿಕೆ ನೀಡಲಾಗಿದೆ ಎಂದರು.

ವಿದ್ಯುತ್ ಸಮಸ್ಯೆ ಬಗೆಹರಿಸಲು ಪೂರಿಗಾಲಿ, ಕೆಂಬೂತಗೆರೆ, ಹೊಸಹಳ್ಳಿ. ಧನಗೂರು ಗ್ರಾಮಗಳಲ್ಲಿ ಎಂವಿಎಸ್ ಸ್ಟೇಷನ್‌ಗಳನ್ನು ತರಲಾಗಿದೆ. ಇಂದು 8 ಕೋಟಿಗೂ ಹೆಚ್ಚು ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ದ್ಯಾಪೇಗೌಡ, ಎಂ ನಿಂಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ವಕೀಲ ಜಗದೀಶ್, ಮುಖಂಡ ರೋಹಿತ್ ಗೌಡ (ದೀಪು), ಸಿ.ಪಿ ರಾಜು, ಸೇರಿದಂತೆ ಇತರರು ಇದ್ದರು.