ಕರ್ನಾಟಕ ರಕ್ಷಣಾ ವೇದಿಕೆ ಕಳೆದ 26 ವರ್ಷಗಳಿಂದ ನಾಡು, ನುಡಿ, ಭಾಷೆ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡುತ್ತ ಬಂದಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಕ್ಷಣಾ ವೇದಿಕೆ ಕಳೆದ 26 ವರ್ಷಗಳಿಂದ ನಾಡು, ನುಡಿ, ಭಾಷೆ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡುತ್ತ ಬಂದಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಹೇಳಿದರು.

ಇತ್ತೀಚೆಗೆ ಇಲ್ಲಿನ ಕೆಟಿಜೆ ನಗರದ ಶನೇಶ್ವರ ದೇವಸ್ಥಾನ ಬಳಿ ಹಮ್ಮಿಕೊಂಡ ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಜಿಲ್ಲಾ ಮಟ್ಟದ ಕನ್ನಡ ದೀಕ್ಷೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

2026ರ ಜನವರಿ ಕೊನೆಯ ವಾರದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ದೀಕ್ಷೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಬೇಕೆಂದು ಕರೆ ನೀಡಿದರು.

ಇದೆ ವೇಳೆ ಕರವೇ ಮಹಿಳಾ ಘಟಕದ ಜಿಲ್ಲಾ ಗೌರವಾಧ್ಯಕ್ಷರಾಗಿ ಶಾಂತಮ್ಮ, ಜಿಲ್ಲಾಧ್ಯಕ್ಷರಾಗಿ ಬಸಮ್ಮ ರಾಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾತ್ನಮ್ಮ ತಿಮ್ಮಪ್ಪ, ಉಪಾಧ್ಯಕ್ಷರಾಗಿ ಮೀನಾಕ್ಷಮ್ಮ ರಾಮಪ್ಪ, ಸಾವಿತ್ರಮ್ಮ ರಾಜಣ್ಣ, ಉಮಾದೇವಿ ಶಿವಕುಮಾರ, ಕಾರ್ಯದರ್ಶಿಯಾಗಿ ಸಾಕಮ್ಮ ಬಾಯಿ, ಮಂಜುಳಾ ರವಿಕುಮಾರ, ಸಹ ಕಾರ್ಯದರ್ಶಿಯಾಗಿ ಸುಮಿತ್ರ ಶಿವಕುಮಾರ, ಅನುಷಾ ಅಂಜನಪ್ಪ, ಸಂಚಾಲಕರಗಳಾಗಿ ದುಗ್ಗಮ್ಮ ಮಾಂತೇಶ, ನೇತ್ರಾವತಿ ಅಶೋಕ, ಸಂಘಟನಾ ಕಾರ್ಯದರ್ಶಿಗಳಾಗಿ ಸರೋಜಮ್ಮ ಹನುಮಂತಪ್ಪ, ಶೋಭಾ ಶ್ರೀನಿವಾಸ, ಸಾವಿತ್ರಮ್ಮ ಅಂಜನಪ್ಪ, ಕೋಶಾಧಿಕಾರಿಯಾಗಿ ಮಮತಾ ಕುಮಾರ, ಕಾರ್ಯಕಾರಿ ಸಮಿತಿ ಸದಸ್ಯರುಗಳು ವೀಣಾ ಬಸವರಾಜ, ಕರಿಬಸಮ್ಮ, ಮಂಜುಳಾ ಮಲ್ಲಿಕಾರ್ಜುನ, ಗಂಗಮ್ಮ ಕೃಷ್ಣಪ್ಪ, ಸುಶೀಲಮ್ಮ ಮುಕೇಶ್, ರೇಣುಕಾ ನಾಗರಾಜ, ಪಾಲಾಕ್ಷಮ್ಮ, ವಿದ್ಯಾ ಕಿರಣ್, ಶಿವರುದ್ರಮ್ಮ ನಾಗರಾಜ, ಚೌಡಮ್ಮ ಭೀಮಪ್ಪ, ರತ್ನಮ್ಮ ಪ್ರಕಾಶ, ಶಂಕ್ರಮ್ಮ ರಾಜು, ರೀನಾ ತಿಮ್ಮರಾಜ್, ನಾಗಮ್ಮ ಮುನಿಸ್ವಾಮಿ, ಸಾವಿತ್ರಿಬಾಯಿ, ಪೂರ್ಣಿಮಾ, ಒಳಗೊಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಮಂಜುಳಾ ಗಣೇಶ್, ಜಿಲ್ಲಾ ಕಾರ್ಯದರ್ಶಿ ಈಶ್ವರ್, ಯುವ ಘಟಕ ಅಧ್ಯಕ್ಷ ಗೋಪಾಲ್ ದೇವರ ಮನೆ, ಸಾಮಾಜಿಕ ಜಾಲತಾಣದ ಮುಸ್ತಫ, ಕಲ್ಪತರು ಶ್ರೀನಿವಾಸ್, ಮಂಜುಳಾ ಮಾಂತೇಶ್ ಮತ್ತಿತರು ಹಾಜರಿದ್ದರು.