ಕಾಫಿ ತೋಟದಲ್ಲಿ ಬೆಂಕಿ ಆಕಸ್ಮಿಕ

| Published : Feb 19 2024, 01:31 AM IST

ಸಾರಾಂಶ

ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ನಷ್ಟವಾದ ಘಟನೆ ಶನಿವಾರ ಸಂಜೆ ನಡೆದಿದೆ.

ಸೋಮವಾರಪೇಟೆ: ತಾಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಸಂತೋಷ್ ಎಂಬವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ನಷ್ಟವಾದ ಘಟನೆ ಶನಿವಾರ ಸಂಜೆ ನಡೆದಿದೆ.

ರಸ್ತೆ ಬದಿಯ ಕುರುಚಲು ಕಾಡಿಗೆ ಬೆಂಕಿ ಬಿದ್ದು ಕಾಫಿ ತೋಟಕ್ಕೆ ಪಸರಿಸಿದೆ. ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ಠಾಣೆಯವರಿಗೆ ಮಾಹಿತಿ ನೀಡಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆಯವರು ಆಗಮಿಸಿ ಬೆಂಕಿ ನಂದಿಸಿದರು.ಈ ಭಾಗದಲ್ಲಿ ಕೋಟೆ ಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಧೂಮಪಾನ ಮಾಡಿ, ಸಿಗರೇಟ್‌ ಎಸೆದು, ಅದರ ಕಿಡಿ ಹೊತ್ತಿಕೊಂಡು ಬೆಂಕಿ ಹಬ್ಬಲು ಕಾರಣವಾಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

-----------------

ಇಂದು ಕೊತ್ನಳ್ಳಿ ಶ್ರೀ ಭೈರವಲಿಂಗೇಶ್ವರ ದೇವಳ ಪ್ರತಿಷ್ಠಾಪನಾ ಮಹೋತ್ಸವ

ಸೋಮವಾರಪೇಟೆ: ತಾಲೂಕಿನ ಕೊತ್ನಳ್ಳಿ ಗ್ರಾಮದಲ್ಲಿರುವ ಶ್ರೀ ಭೈರವಲಿಂಗೇಶ್ವರ ಮತ್ತು ವನದುರ್ಗಾ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರ ನಡೆಯಲಿದೆ. ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಈಗಾಗಲೇ ದೇವಾಲಯದಲ್ಲಿ ಗಣಪತಿ ಹೋಮ, ಪುಣ್ಯಹ, ಋತ್ವಗ್ವರಣ ವಾಸ್ತು, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್‍ ಬಲಿ, ಬಿಂಬಶುದ್ಧಿ, ಅಧಿವಾಸ ಹೋಮ, ಶಯ್ಯದಿಕಲ್ಪ ನೆರವೇರಿವೆ. ಸೋಮವಾರ ಬೆಳಗ್ಗೆ 5 ಗಂಟೆಯಿಂದ ಪ್ರತಿಷ್ಠಾಪನಾ ಹೋಮ, ಕುಂಭ ಲಗ್ನದ ಶುಭಾಂಶದಲ್ಲಿ ಶ್ರೀ ವನದುರ್ಗಾ-ಭೈರವಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆ, ಕಲಾಕಳಸ ಪ್ರತಿಷ್ಠೆ, ಕಲಾ ತತ್ವಾದಿ ಹೋಮ, ಕಲಾ ಕಲಶಾಭಿಷೇಕ, ಮಹಾಮಂಗಳಾರತಿ ನೆರವೇರಲಿದೆ.