ತಿಪಟೂರು ನಗರದ ಕೆರೆಕೋಡಿ ಸರ್ಕಲ್ ವೈ.ಟಿ. ರಸ್ತೆಯಲ್ಲಿರುವ ಶ್ರೀ ದೊಡ್ಡಮಠದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ದೊಡ್ಡ ಮಠದ ಶ್ರೀ ಬಾಲ ಗಣಪತಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಒಂದನೇ ವರ್ಷದ ವಾರ್ಷಿಕೋತ್ಸವ ಅಕ್ಟೋಬರ್ ೨೫ರ ಭಾನುವಾರ ಹಾಗೂ ಅಕ್ಟೋಬರ್ ೨೬ರಂದು ಸೋಮವಾರ ಏರ್ಪಡಿಸಲಾಗಿದೆ ಎಂದು ಶ್ರೀ ದೊಡ್ಡಮಠದ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಗಣೇಶ್ (ಸೊಪ್ಪು) ಹೇಳಿದ್ದಾರೆ.

ತಿಪಟೂರು: ತಿಪಟೂರು ನಗರದ ಕೆರೆಕೋಡಿ ಸರ್ಕಲ್ ವೈ.ಟಿ. ರಸ್ತೆಯಲ್ಲಿರುವ ಶ್ರೀ ದೊಡ್ಡಮಠದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ದೊಡ್ಡ ಮಠದ ಶ್ರೀ ಬಾಲ ಗಣಪತಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಒಂದನೇ ವರ್ಷದ ವಾರ್ಷಿಕೋತ್ಸವ ಅಕ್ಟೋಬರ್ ೨೫ರ ಭಾನುವಾರ ಹಾಗೂ ಅಕ್ಟೋಬರ್ ೨೬ರಂದು ಸೋಮವಾರ ಏರ್ಪಡಿಸಲಾಗಿದೆ ಎಂದು ಶ್ರೀ ದೊಡ್ಡಮಠದ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಗಣೇಶ್ (ಸೊಪ್ಪು) ಹೇಳಿದ್ದಾರೆ.

ಅಕ್ಟೋಬರ್ ೨೫ರಂದು ಭಾನುವಾರ ಬೆಳಗ್ಗೆ ೮ ಗಂಟೆಗೆ ಸುಹಾಸಿನಿಯರಿಂದ ದೇವಾಲಯದಲ್ಲಿ ಗಂಗಾ ಭಾಗಿರಥಿ ಪೂಜೆ ಧ್ವಜಾರೋಹಣ, ಗೋ ಪೂಜೆ, ಋಥ್ವಿಕಾವರಣ, ಗುರು ಗಣೇಶ ಪ್ರಾರ್ಥನೆಯೊಂದಿಗೆ ಯಾಗ ಶಾಲೆ ಪ್ರವೇಶ ಮಹಾಸಂಕಲ್ಪ, ಮಹಾ ಗಣಪತಿ ಪೂಜೆ, ಸ್ವಸ್ತಿ ಪುಣ್ಯಹವಾಚನ, ಪಂಚಗವ್ಯ ಸ್ಥಾಪನೆ ದೇವಾಲಯ ಶುದ್ದಿ, ದೇವ ನಾಂದಿ, ಕೌತುಕ ಬಂಧನ, ಕಂಕಣ ಪೂಜೆ, ರಕ್ಷ ಸೂತ್ರದಾರಣೆ ಸರ್ಷಪ ವಿಕಿರಣ ಕಳಸ ಸ್ಥಾಪನೆ, ಸೂಕ್ತಪಾರಾಯಣ, ಅಗ್ನಿ ಪ್ರತಿಷ್ಠಾಪನೆ, ಅಷ್ಟ ದ್ರವ್ಯ ಸಹಿತ ಮಹಾಗಣಪತಿ ಹೋಮ ನವಗ್ರಹ ಹೋಮ ಮೃತ್ಯುಂಜಯ ಹೋಮ, ಪಂಚಗವ್ಯ ಪ್ರಾಯಶ್ಚಿತ್ತ ಹೋಮ, ಪೂರ್ಣಹುತಿ ದಿಕ್ಪಾಲಕ ಬಲಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೫ಗಂಟೆಗೆ ಗುರುಗಣೇಶ ಕ್ಷೇತ್ರಪಾಲ ಸಭಾ ಪ್ರಾರ್ಥನೆಯೊಂದಿಗೆ ವಾಸ್ತು ಮಹಾ ಸುದರ್ಶನ ಮಂಡಲ ರಚನೆ, ಆರಾಧನೆ, ಕಳಸ ಸ್ಥಾಪನೆ ವಾಸ್ತು ಹೋಮ, ರಾಕ್ಷೋಜ್ಞ ಹೋಮ, ಮಹಾ ಸುದರ್ಶನ ಹೋಮ, ಸುಬ್ರಹ್ಮಣ್ಯ ಮೂಲ ಮಂತ್ರ ಹೋಮ, ರಾಕ್ಷೋಜ್ಞ ಬಲಿ ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.ಅಕ್ಟೋಬರ್ ೨೬ರಂದು ಸೋಮವಾರ ಬೆಳಗ್ಗೆ ೭ ಗಂಟೆಗೆ ದೇವಾಲಯದಲ್ಲಿ ಸುಪ್ರಭಾತ ಸೇವೆ ಸರ್ವವಾದ್ಯ ಸೇವೆಯೊಂದಿಗೆ ಸರ್ವ ದೇವತಾ ಪ್ರಾರ್ಥನೆ ಆಚಾರ್ಯಾದಿ ಸಭಾ ವಂದನೆ ಸ್ವಸ್ತಿ ವಾಚನ, ಶ್ರೀ ಸತ್ಯನಾರಾಯಣ ಪೂಜೆ ಕಳಸ ಸ್ಥಾಪನೆ, ಗಣಪತಿ ಸುಬ್ರಮಣ್ಯ ಅಯ್ಯಪ್ಪ ಸ್ವಾಮಿಯವರಿಗೆ ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಗ್ನಿ ಪ್ರತಿಷ್ಠಾಪನೆ, ಮಹಾ ಗಣಪತಿ ಹೋಮ, ತತ್ವನ್ಯಾಸ ಕಲಾನ್ಯಾಸ ಹೋಮ, ಶ್ರೀ ಅಯ್ಯಪ್ಪ ಸ್ವಾಮಿಯವರ ಮೂಲ ಮಂತ್ರ ಹೋಮ ಹಾಗೂ ಹುಣ್ಣಿಮೆ ಪ್ರಯುಕ್ತ ರಾಮತಾರಕ ಹೋಮ, ಬೆಳಗ್ಗೆ ೧೧ ಗಂಟೆಗೆ ಮಹಾಪೂರ್ಣಹುತಿ, ಕುಂಭಾಭಿಷೇಕ, ಶ್ರೀ ಸ್ವಾಮಿಯವರಿಗೆ ಅಲಂಕಾರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ನಂತರ ಮಧ್ಯಾಹ್ನ ೧:೩೦ಕ್ಕೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಲಾಗಿದೆ.