ರೈತ ನಿನಗೆ ಗೋ ಶಾಪ? ಚಿತ್ರದ ಫಸ್ಟ್‌ ಲುಕ್ ಬಿಡುಗಡೆ

| Published : Jul 11 2025, 01:48 AM IST

ಸಾರಾಂಶ

ಸನಾತನ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದಿರುವ ಗೋ ಮಾತೆ ರಕ್ಷಣೆ ಹಾಗೂ ಗೋವಿನ ಮಹತ್ವ ಸಾರುವ ರೈತ ನಿನಗೆ ಗೋ ಶಾಪ? ಚಲನಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದೆ

ವಿಜಯಪುರ: ಸನಾತನ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದಿರುವ ಗೋ ಮಾತೆ ರಕ್ಷಣೆ ಹಾಗೂ ಗೋವಿನ ಮಹತ್ವ ಸಾರುವ ರೈತ ನಿನಗೆ ಗೋ ಶಾಪ? ಚಲನಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದೆ. ಯಾವುದೇ ಅಡೆತಡೆ ಉಂಟಾಗದೆ ಚಿತ್ರೀಕರಣ ಯಶಸ್ವಿಯಾಗಿ ಪೂರೈಸಿ, ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಭ ಹಾರೈಸಿದರು.

ನಗರದ ಆರಾಧ್ಯದೈವ ಸಿದ್ದೇಶ್ವರ ಶ್ರೀ ದೇವಸ್ಥಾನದಲ್ಲಿ ಬಸವೇಶ್ವರ ಗೋ ಶಾಲಾ ಟ್ರಸ್ಟ್ ಆಂದೋಲಾ ನಿರ್ಮಾಣದ ರೈತ ನಿನಗೆ ಗೋ ಶಾಪ? ಚಲನಚಿತ್ರದ ಚಿತ್ರೀಕರಣ ಅಂಗವಾಗಿ ನಡೆದ ಲೋಕಕಲ್ಯಾಣ ಯಜ್ಞದಲ್ಲಿ ಭಾಗವಹಿಸಿದ ಅವರು, ಚಿತ್ರ ಮೊದಲ ಲುಕ್ ಬಿಡುಗಡೆಗೊಳಿಸಿ ಮಾತನಾಡಿದರು. ಸಂಸ್ಥೆ ಚೇರ್‌ಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಗೌರವ ಕಾರ್ಯದರ್ಶಿ ಸದಾನಂದ ದೇಸಾಯಿ, ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ವಿಜಯಕುಮಾರ ಡೋಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ರಮೇಶ ಹಳ್ಳದ, ಸಿಇಒ ಎನ್.ಎಂ.ಪ್ಯಾಟಿ, ಸುಭಾಸ ಮರನೂರ, ಬಸವೇಶ್ವರ ಗೋ ಶಾಲಾ ಟ್ರಸ್ಟ್ ಅಧ್ಯಕ್ಷರು ಹಾಗೂ ಚಿತ್ರದ ನಿರ್ದೇಶಕ ಎಸ್.ವಿರೇಶ, ಪ್ರಧಾನ ಕಾರ್ಯದರ್ಶಿ ದೌಲಪ್ಪ ಪೂಜಾರಿ ಹಾಗೂ ಟ್ರಸ್ಟ್‌ ಸದಸ್ಯರು ಇದ್ದರು.