ಮೇಲ್ಸೇತುವೆ ಮುಂದಿನ ಮಾರ್ಚ್‌ಗೆ ಪೂರ್ಣ

| Published : Apr 20 2025, 01:48 AM IST

ಸಾರಾಂಶ

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ೮೩.೭೨ ಕೋಟಿ. ಇದರಲ್ಲಿ ರಾಜ್ಯದ ಪಾಲು ೪೯.೫೪ ಕೋಟಿ ನೀಡಬೇಕಿದೆ. ಈಗ ೨೧.೮೧ ಕೋಟಿ ರು. ನೀಡುವುದಾಗಿ ಸರ್ಕಾರ ಹೇಳಿದ್ದು, ಎಚ್‌ಎಂಆರ್‌ಡಿಸಿ ಅಡಿ ೧೫ ಕೋಟಿ ನೀಡಲಾಗಿದೆ. ಅನುದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ಸೇತುವೆ ಮೇಲಿನ ಕಬ್ಬಿಣದ ಬೃಹತ್ ಕಮಾನು ನಿರ್ಮಾಣ ಹೈದ್ರಾಬಾದ್‌ನಲ್ಲಿ ಆಗಲಿದೆ, ಅದಕ್ಕಾಗಿ ೮ ತಿಂಗಳು ಸಮಯಾವಕಾಶ ಬೇಕಿದೆ. ಅಲ್ಲಿವರೆಗೂ ಸಿವಿಲ್ ವರ್ಕ್ ಸೇರಿ ಉಳಿದ ಕಾಮಗಾರಿ ನಡೆಯಲಿವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೊಸ ಬಸ್ ನಿಲ್ದಾಣದ ಎದುರಿನ ರೈಲ್ವೆ ಮೇಲ್ಸೇತುವೆ ೨ನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ೨೦೨೬ ಫೆಬ್ರವರಿ ಇಲ್ಲವೇ ಮಾರ್ಚ್ ವೇಳೆಗೆ ಮುಗಿಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ಶನಿವಾರ ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೂ ನಿಮಾಣ ಹಂತದಲ್ಲಿರುವ ಮೇಲ್ಸೇತುವೆ ಮೇಲೆ ತೆರಳಿ ಎಲ್ಲೆಲ್ಲಿ ಕಾಮಗಾರಿ ಆಗಬೇಕು ಎಂಬುವರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಹಲವು ಕಾರಣಗಳಿಂದಾಗಿ ಕೆಲ ವರ್ಷಗಳಿಂದ ಕಾಮಗಾರಿ ನಿಂತಿತ್ತು. ಇದೀಗ ತಮ್ಮ ತಮ್ಮ ಪಾಲಿನ ಅನುದಾನ ನೀಡಲು ಸಮ್ಮತಿಸಿವೆ. ಹೀಗಾಗಿ ಈಗಾಗಲೇ ಶುರುವಾಗಿರುವ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಆಗಬಾರದು ಎಂದು ಸೂಚನೆ ನೀಡಲಾಗಿದೆ ಎಂದರು.

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ೮೩.೭೨ ಕೋಟಿ. ಇದರಲ್ಲಿ ರಾಜ್ಯದ ಪಾಲು ೪೯.೫೪ ಕೋಟಿ ನೀಡಬೇಕಿದೆ. ಈಗ ೨೧.೮೧ ಕೋಟಿ ರು. ನೀಡುವುದಾಗಿ ಸರ್ಕಾರ ಹೇಳಿದ್ದು, ಎಚ್‌ಎಂಆರ್‌ಡಿಸಿ ಅಡಿ ೧೫ ಕೋಟಿ ನೀಡಲಾಗಿದೆ. ಅನುದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ಸೇತುವೆ ಮೇಲಿನ ಕಬ್ಬಿಣದ ಬೃಹತ್ ಕಮಾನು ನಿರ್ಮಾಣ ಹೈದ್ರಾಬಾದ್‌ನಲ್ಲಿ ಆಗಲಿದೆ, ಅದಕ್ಕಾಗಿ ೮ ತಿಂಗಳು ಸಮಯಾವಕಾಶ ಬೇಕಿದೆ. ಅಲ್ಲಿವರೆಗೂ ಸಿವಿಲ್ ವರ್ಕ್ ಸೇರಿ ಉಳಿದ ಕಾಮಗಾರಿ ನಡೆಯಲಿವೆ ಎಂದರು.

ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೇಂದ್ರ ಸಹ ತನ್ನ ಪಾಲಿನ ಅನುದಾನ ನೀಡಲು ಒಪ್ಪಿದೆ. ಹೀಗಾಗಿ ಮೇಲ್ಸೇತುವೆ ಕಾಮಗಾರಿ ಇನ್ನುಮಂದೆ ಯಾವುದೇ ಅಡೆತಡೆ ಇಲ್ಲದೆ ಮುನ್ನಡೆಯಲಿದೆ ಎಂದರು. ಎರಡೂ ಬದಿಯ ನಾಲ್ಕು ಪಥದ ಮೇಲ್ಸೇತುವೆ ನಿರ್ಮಾಣ ಆದರೆ ವಾಹನ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.