ಚಲಿಸುತ್ತಿದ್ದ ಬಸ್ಸಿನ ಮುಂಭಾಗದ ಗಾಜು ಒಡೆದು ಚಾಲಕ ಸೇರಿ ಮೂವರಿಗೆ ಗಾಯ

| Published : May 05 2024, 02:02 AM IST

ಚಲಿಸುತ್ತಿದ್ದ ಬಸ್ಸಿನ ಮುಂಭಾಗದ ಗಾಜು ಒಡೆದು ಚಾಲಕ ಸೇರಿ ಮೂವರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಉರಿಮಜಲಿನಲ್ಲಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ಸಮೀಪ ತಲುಪುತ್ತಿಂದ್ದಂತೆ ಮುಂಭಾಗ ಗಾಜು ಒಡೆದಿದೆ.

ಬಂಟ್ವಾಳ: ಚಲಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ಸಿನ ಗಾಜೊಂದು ಆಕಸ್ಮಿಕವಾಗಿ ಒಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಶನಿವಾರ ನಡೆದಿದೆ.

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಉರಿಮಜಲಿನಲ್ಲಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ಸಮೀಪ ತಲುಪುತ್ತಿಂದ್ದಂತೆ ಮುಂಭಾಗ ಗಾಜು ಒಡೆದಿದೆ. ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಓರ್ವ ಬಾಲಕನನ್ನು ಪುತ್ತೂರಿ‌ನ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ಲಭಿಸಿದೆ. ಬಿಸಿಲಿನ ತೀವ್ರತೆ ಹೆಚ್ಚಾಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.----

ಟಿಪ್ಪರ್‌ ಡಿಕ್ಕಿ: ಪಾದಚಾರಿ ಯುವಕ ಸಾವುಮೂಲ್ಕಿ: ಪಾವಂಜೆ ಸೇತುವೆ ಬಳಿ ಟಿಪ್ಪರ್‌ ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟಿರುವ ಘಟನೆ ನಡೆದಿದೆ. ಪಾವಂಜೆ ನಿವಾಸಿ ಹನುಮಪ್ಪ ಎಚ್‌. ಗೋರಜನಲ ಎಂಬವರ ಮಗ ರಂಗನಾಥ (24) ಮೃತರು.ಶುಕ್ರವಾರ ರಾತ್ರಿ ಇವರು ಹೆದ್ದಾರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದು, ಪಾವಂಜೆ ಸೇತುವೆ ನಂತರ ಸಿಗುವ ಎಡಕ್ಕೆ ಹೋಗುವ ರಸ್ತೆಯ ಸುಮಾರು 500 ಮೀಟರ್ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟಿಪ್ಪರ್ ಲಾರಿ ಚಾಲಕ ಸುಕೇಶ್ ಪೂಜಾರಿ ಎಂಬಾತ ನಿರ್ಲಕ್ಷ್ಯದ ಚಾಲನೆಯಿಂದಾಗಿ ಟಿಪ್ಪರ್‌ ರಂಗನಾಥಗೆ ಡಿಕ್ಕಿ ಹೊಡೆದಿದೆ. ಆತನ ಹೊಟ್ಟೆಯ ಮೇಲೆ ಟಿಪ್ಪರ್ ಲಾರಿಯ ಚಕ್ರ ಹರಿದು ಗಂಭಿರವಾಗಿದ್ದರು. ಕೂಡಲೇ ಚಿಕಿತ್ಸೆಗಾಗಿ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಾಗ ಅದಾಗಲೇ ರಂಗನಾಥ ಮೃತಪಟ್ಟಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.---

ಧರ್ಮಸ್ಥಳ ಸ್ನಾನಘಟ್ಟದಲ್ಲಿ ಕುಸಿದುಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ: ಕುಳಿತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ ಸಂಭವಿಸಿದೆ.ಸುಮಾರು 42 ವರ್ಷದ ವ್ಯಕ್ತಿ ಮಧ್ಯಾಹ್ನ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ, ನೀರಿನ ಬಾಟಲ್ ಹಿಡಿದು ಕುಳಿತ್ತಿದ್ದಾಗ, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ನಿವಾಸಿ ಮಹಾರುದ್ರ ಸ್ವಾಮಿ ಎಂದು ಗುರುತಿಸಲಾಗಿದೆ. ಇವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮಧ್ಯಾಹ್ನದ ವೇಳೆ ಅತಿಯಾದ ಬಿಸಲಿನ ತಾಪವಿದ್ದು ಇದರಿಂದಾಗಿ ಬಸವಳಿದಿದ್ದರಿಂದಲೂ ಮೃತಪಟ್ಟಿರಬಹುದೆಂದ ಹೇಳಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.---ಚಾರ್ಮಾಡಿ: ಅರಣ್ಯ ರಸ್ತೆ ಬದಿ ಬೆಂಕಿ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕುತ್ರಿಜಾಲು ಸಮೀಪ ನೆರಿಯ- ಧರ್ಮಸ್ಥಳ ಬ್ಲಾಕ್ ಅರಣ್ಯದ ರಸ್ತೆ ಬದಿ ಬೆಂಕಿ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಧೂಮಪಾನಿಗಳು ಬೀಡಿ ಇಲ್ಲವೇ ಸಿಗರೇಟು ಸೇದಿ ಎಸೆದ ಪರಿಣಾಮ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ತಕ್ಷಣ ಜಾಗೃತರಾಗಿ ಬೆಂಕಿ ಹತೋಟಿಗೆ ತಂದ ಕಾರಣ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿಲ್ಲ. ಅರಣ್ಯದ ಒಳಗೆ ಬೆಂಕಿ ಪ್ರವೇಶಿಸುತ್ತಿದ್ದರೆ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಇತ್ತು.