ಸಾರಾಂಶ
ಯಲಬುರ್ಗಾ: ಗಣಿತ ಕಲಿಯುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಕರಮುಡಿ ಗ್ರಾಪಂ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣನವರ ಹೇಳಿದರು.ತಾಲೂಕಿನ ಕರಮುಡಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತೊಂಡಿಹಾಳ ಮತ್ತು ಬಂಡಿಹಾಳ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗಣಿತ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳ ಹಂಚುವುದರ ಮೂಲಕ ಕಲಿಕಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗಣಿತ ವಿಷಯದ ಆಸಕ್ತಿಯಿಂದ ವಿದ್ಯಾರ್ಥಿಗಳು ತಮ್ಮ ಬುದ್ಧಿಮಟ್ಟವನ್ನು ಸಹ ಇನ್ನಷ್ಟು ಹೆಚ್ಚಿಸಿಕೊಂಡು ಬೆಳೆಯಬೇಕು ಎಂದರು.ಗಣಿತವು ಪಠ್ಯಪುಸ್ತಕಗಳು ಮತ್ತು ತರಗತಿಗಳನ್ನು ಮೀರಿದೆ. ವಿದ್ಯಾರ್ಥಿಗಳು ಪ್ರತಿದಿನ ಅವಲಂಬಿಸುವ ಅಗತ್ಯ ಜೀವನ ಕೌಶಲ್ಯಗಳನ್ನು ಇದು ನೀಡುತ್ತದೆ. ಗಣಿತವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.ಮುಧೋಳ ಸಿಆರ್‌ಪಿ ಶಾಂತಪ್ಪ ಜುಮ್ಮನ್ನವರ್ ಮಾತನಾಡಿ, ೪, ೫, ೬ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಗಣಿತ ವಿಷಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಗಣಿತ ಕಲಿಕಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಿಂದ ಸತತ ಅಭ್ಯಾಸದಿಂದ ಗಣಿತದ ಲೆಕ್ಕಗಳನ್ನು ನಿರರ್ಗಳವಾಗಿ ಮಾಡಬಹುದು ಎಂದು ಹೇಳಿದರು.ಎಸ್‌ಡಿಎಂಸಿ ಅಧ್ಯಕ್ಷ ಗೌಡಪ್ಪ ಬಲಕುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಿತವು ಜೀವನದ ಪ್ರತಿ ಹಂತದಲ್ಲೂ ಲೆಕ್ಕಾಚಾರಗಳ ಭಾವನೆಗಳನ್ನು ಎದುರಿಸುತ್ತೇವೆ. ಗಣಿತ ವಿಷಯ ಕುರಿತಂತೆ ಹೆಚ್ಚಿನ ಗಮನ ಹರಿಸಬೇಕಾದ್ದು ಪ್ರತಿ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.ಕರಮುಡಿ ಬಂಡಿಹಾಳ ತೊಂಡಿಹಾಳ ವಿದ್ಯಾರ್ಥಿಗಳು ಗಣಿತ ಪರೀಕ್ಷೆಯಲ್ಲಿ ೧೫೦ ವಿದ್ಯಾರ್ಥಿಗಳು ಹಾಜರಿದ್ದರು. ಪಿಡಿಒ ಬಸವರಾಜ್, ಮುಖಂಡ ಗಂಗಪ್ಪ ಹವಳಿ ಮಾತನಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ರಾಮಣ್ಣ ಹೊಕ್ಕಳದ, ಮೈಲಾರಪ್ಪ ಪಲ್ಲೇದ, ಕರಮುಡಿ ಶಾಲೆಯ ಶಿಕ್ಷಕರಾದ ಹನುಮಪ್ಪ ಬಂಡಿಹಾಳ, ತಿರುಗಣೆಪ್ಪಾ ದೇವಕ್ಕಿ, ಜಗದೀಶಪ್ಪ ಅಂಗಡಿ, ಹನುಮಪ್ಪ ತಳವಾರ, ಮುತ್ತಣ್ಣ ಬಡಿಗೇರ, ಪ್ರಸನ್ನ ಉಳ್ಳಾಗಡ್ಡಿ, ಮಂಜುನಾಥ ರಾಂಪುರ, ರಾಜೇಶ್ವರಿ, ವಿಜಯಲಕ್ಷ್ಮಿ ಬಂಡಿಹಾಳ, ಆನಂದ್ ಕೆರಳ್ಳಿ, ನಾಗರಾಜ್ ಭಜಂತ್ರಿ, ಎಲ್ಲಮ್ಮ ತಳವಾರ, ಮರ್ತುಜಾ ಮುಜಾವರ್, ರವಿಚಂದ್ರ ಕೆಂಚರೆಡ್ಡಿ ಇದ್ದರು.