ಸಾರಾಂಶ
ಇಂದು ಬೆಳಗ್ಗೆ ಸ್ವಾಮಿಗೆ ಓಕಳಿ ಅವಭೃತೋತ್ಸವಕನ್ನಡಪ್ರಭ ವಾರ್ತೆ, ಬೀರೂರು
ನೂರಾರು ವರ್ಷಗಳ ಇತಿಹಾಸವುಳ್ಳ ಹಳೇಪೇಟೆ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನ ಮಹಾ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿತು.ರಥೋತ್ಸವದ ಅಂಗವಾಗಿ ಮಾರ್ಚ್ 4ರಿಂದ 12ರವರೆಗೂ ಪ್ರತಿದಿನ ಊರಿನ ರಾಜಬೀದಿಗಳಲ್ಲಿ ಆನೆ, ಸಿಂಹ, ಸರ್ಪ, ಕುದುರೆ, ಬಸವ, ನವಿಲು, ಮಂಟಪ ಉತ್ಸವ ಸೇರಿದಂತೆ 8 ದಿನಗಳ ಕಾಲ ಶ್ರೀ ವೀರಭದ್ರಸ್ವಾಮಿಯನ್ನು ಅಲಂಕರಿಸಿ ವಿವಿಧ ವಾಹನಗಳ ಸಹಿತ ಉತ್ಸವ ಹಾಗೂ ದಾಸೋಹ ನೆರವೇರಿಸಲಾಯಿತು.ವಿಶೇಷವಾಗಿ ಮಾ. 7ರಂದು ಶುಕ್ರವಾರ ಬೆಳಗಿನ ಜಾವ ಊರಿನ ಪ್ರಮುಖ ದೇವರಾದ ಶ್ರೀ ಮೈಲಾರಲಿಂಗಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ ಸ್ವಾಮಿ ಸಮ್ಮುಖದಲ್ಲಿ ವೀರಭದ್ರಸ್ವಾಮಿಗೆ 101ಎಡೆ ಸೇವೆಯನ್ನು ದೇವಾಲಯದ ಭಕ್ತರಿಂದ ನೆರವೇರಿ ಸಲಾಯಿತು. ಮಾ.12ರ ಬುಧವಾರ ಸಂಜೆ ದೇವರಿಗೆ ಕಲ್ಯಾಣೋತ್ಸವ, ಹಣತೆ ಹಾಗೂ ಹರಕೆ ಹೊತ್ತ ಸುಮಂಗಲೆಯರು, ಕನ್ಯೆಯರು ಬೆಳಿಗ್ಗೆಯಿಂದ ರಾತ್ರಿವರೆಗೆ ಉಪವಾಸವಿದ್ದು ಸಂಜೆ ರಥೋತ್ಸವದ ಸುತ್ತಲು ಹಣತೆಯೊಂದಿಗೆ ಮೂರು ಬಾರಿ ಪ್ರದಕ್ಷಣೆ ಹಾಕಿ ತಮ್ಮ ಮನೋಭಿಲಾಷೆ ವಿಶೇಷ ದುಗ್ಗುಲದ ಸೇವೆ ಸಲ್ಲಿಸಿದರು.
ಬುಧವಾರ ಸಂಜೆ ಅತ್ಯಂತ ದೊಡ್ಡದಾದ ಪುಷ್ಪಹಾರ, ಹೂವಿನ ಅಲಂಕಾರ, ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀವೀರಭದ್ರ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ರುದ್ರಹೋಮ ಸೇರಿದಂತೆ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿ ನೂರಾರು ತೆಂಗಿನ ಕಾಯಿಗಳನ್ನು ರಥದ ಮುಂದೆ ಒಡೆಯುವ ಮೂಲಕ ರಥಕ್ಕೆ ಚಾಲನೆ ನೀಡಲಾಯಿತು.ದೇವಸ್ಥಾನದಿಂದ ದೂರದ ಮಹಾನವಮಿ ಬಯಲಿನವರಗೆ ರಥ ಎಳೆಯುವ ಸಂದರ್ಭದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಸೇರಿದ್ದ ಮಹಾ ರುದ್ರನಿಗೆ ಜೈ, ವೀರಭದ್ರಸ್ವಾಮಿಗೆ ಜೈ ಎನ್ನುತ್ತಾ ಜಯಘೋಶ ಕೂಗಿದರೆ ನೂರಾರು ಭಕ್ತರು ತೇರಿಗೆ ಬಾಳೆಹಣ್ಣು ಎಸೆಯುವ ಜೊತೆ ಹಣ್ಣು ಕಾಯಿ ಸಮರ್ಪಿಸುವ ಮೂಲಕ ತಮ್ಮ ಶ್ರದ್ಧಾ ಭಕ್ತಿ ಅರ್ಪಿಸಿದರು.ವಾಪಸ್ಸು ರಥ ದೇವಾಲಯದ ಸನಿಹಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಎಳೆ ಹಸುಳೆಗಳು ಸೇರಿದಂತೆ ನೂರಾರು ಮಕ್ಕಳು ರಥದ ಸುತ್ತಲೂ ದಿಂಡು ಉರುಳು ಸೇವೆ ಮೂಲಕ ಮಕ್ಕಳ ಶ್ರೇಯಸ್ಸು ಹಾಗೂ ಯಶಸ್ಸಿಗೆ ಪ್ರಾರ್ಥಿಸಲಾಯಿತು.ನಂದಿಧ್ವಜ ಕುಣೆತ, ವೀರಗಾಸೆ ಸೇರಿದಂತೆ ವಿವಿಧ ವಾದ್ಯ ಹಾಗೂ ನೃತ್ಯ ಮೇಳ ಭಕ್ತರ ಗಮನ ಸೆಳೆಯಿತು.ಶ್ರೀ ವೀರಭದ್ರ ಸ್ವಾಮಿ ಯುವಕ ಸಂಘ ಸೇರಿದಂತೆ ಭಕ್ತಾದಿಗಳು ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಮಾಡಿದ ಅನ್ನ ದಾಸೋಹ ಮೆರುಗು ನೀಡಿತು.ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಪುರಸಭಾ ಅಧ್ಯಕ್ಷೆ ವನಿತಾಮಧು ಬಾವಿಮನೆ, ಪುರಸಭಾ ಸದಸ್ಯ ಬಿ.ಕೆ. ಶಶಿಧರ್, ಮೋಹನ್ ಕುಮಾರ್, ಸಹನಾ ವೆಂಕಟೇಶ್, ರಘು ಮತ್ತು ದೇವಸ್ಥಾನದ ಆಡಳಿತ ಮಂಡಳಿ ಎಂ.ಜಿ.ಮಧು ಸೇರಿದಂತೆ ಮುಖಂಡರು ಇದ್ದರು.13ಬೀರೂರು 1ಬೀರೂರಿನ ಹಳೇಪೇಟೆಯ ಪುರಾತನ ಪ್ರಸಿದ್ದವಾದ ಶ್ರೀ ವೀರಭದ್ರಸ್ವಾಮಿಯ ಹಾಗೂ ಭದ್ರಕಾಳಿ ಅಮ್ಮನವರ ರಥೋತ್ಸವ ಗುರುವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಗಳಿಂದ ನೆರವೇರಿತು. 13 ಬೀರೂರು 2ಬೀರೂರಿನ ಹಳೇಪೇಟೆಯ ಶ್ರೀ ವೀರಭದ್ರಸ್ವಾಮಿಯ ಹಾಗೂ ಭದ್ರಕಾಳಿ ಅಮ್ಮನವರ ರಥೋತ್ಸವದ ಅಂಗವಾಗಿ ಮಹಿಳೆಯರು ಶ್ರೀಸ್ವಾಮಿಗೆ ಹಣತೆಯ ಕುಂಡವನ್ನೊತ್ತು ದು ಗ್ಗಳ ಸೇವೆ ನೆರವೇರಿಸಿದರು.