ಸಾರಾಂಶ
ಪಾನಕದ ಬಂಡಿ ಓಟ ನೋಡಲು ಮುಗಿ ಬಿದ್ದ ಜನತೆ:
ಕನ್ನಡಪ್ರಭ ವಾರ್ತೆ, ಬೀರೂರುಃ ಪಟ್ಟಣದ ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿ ರಥೋತ್ಸವ ಕ್ರೋಧಿನಾಮ ಸಂವತ್ಸರ ಉತ್ತರಾಯಣ ಹೇಮಂತ ಋತುವಿನಲ್ಲಿ ಮಂಗಳವಾರ ಅಪರಾಹ್ನ 2.45ಕ್ಕೆ ಶ್ರದ್ಧಾಭಕ್ತಿ, ಸಡಗರದಿಂದ ಜರುಗಿತು. ಭಾನುವಾರದಿಂದ ನಿತ್ಯ ಅಮ್ಮನಿಗೆ ಶ್ರೀಮದ್ಭಗವತ್ ಪೂಜಾಕೈಂಕರ್ಯ ನಡೆದವು. ಸಂಜೆ ದ್ವಜಾರೋಹಣೆ, ತವರು ಮನೆಯಲ್ಲಿ ಕಂಕಣ ಧಾರಣೆ ಸೇವೆ ಸಲ್ಲಿಸಿ ಸೋಮವಾರ ಗಣಂಗಳ ಸೇವೆ, ರಾತ್ರಿ ದುಗ್ಗಳ ಸೇವೆ ಹಾಗು ಬ್ರಹ್ಮರಥೋರೋಹಣ ನೇರವೇರಿಸಿ, ಮಂಗಳವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಬೇವಿನಸೇವೆ ಉತ್ಸವ ನಡೆದು ಅಪರಾಹ್ನ ಪುಷ್ಪಾಲಾಂಕೃತ ರಥದಲ್ಲಿ ಶ್ರೀಅಂತರ ಘಟ್ಟಮ್ಮದೇವಿಯನ್ನು ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ರಥವನ್ನು ಮಂಗಳವಾದ್ಯ, ವೇದಘೋಷ ಮತ್ತು ಸೋಮನ ಕುಣಿತದೊಂದಿಗೆ ಹಳೇಪೇಟೆ ಆಂಜನೇಯ ದೇವಾಲಯದವರೆಗೆ ಎಳೆದು ತರಲಾಯಿತು.ಹಿಂದೆಯೇ ಶೃಂಗಾರದೊಂದಿಗೆ ಸಾಗುತ್ತಿದ್ದ ಜೋಡೆತ್ತುಗಳ ಪಾನಕದ ಬಂಡಿಗಳ ಮೆರವಣಿಗೆ ಪಕ್ಕದ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದಲ್ಲಿ ಅಮ್ಮನವರ ರಥ ಓರೆಯಾಗಿ ಸ್ಥಗಿತಗೊಂಡ ನಂತರ ಪಾನಕದ ಬಂಡಿಗಳ ಓಟ ಸಾಗಿ ಮಹಾನವಮಿ ಬಯಲಿನಲ್ಲಿ ನೆರೆದಿದ್ದ ಭಕ್ತ ವೃಂದಕ್ಕೆ ಪಾನಕ ವಿತರಿಸಲಾಯಿತು. ರಸ್ತೆ ಇಕ್ಕೆಲಗಳಲ್ಲಿ ನೆರೆದಿದ್ದ ಅಪಾರ ಭಕ್ತರು ರಥದ ಮೇಲೆ ಮೆಣಸು- ಬಾಳೆ ಹಣ್ಣುಗಳನ್ನು ಎಸೆಯುವ ಮೂಲಕ ಭಕ್ತಿ, ಹರಕೆ ಸಮರ್ಪಿಸಿದರು. ಬಳಿಕ ರಥವನ್ನು ಹಳೆಪೇಟೆಯಿಂದ ಶಿವಾಜಿನಗರದ ಆಲದಮರದವರೆಗೂ ಸಾಗಿಸಿ ವಾಪಸು ದೇವಾಲಯಕ್ಕೆ ಕರೆತರಲಾಯಿತು.
ಪಾನಕದ ಬಂಡಿ ಓಟದಲ್ಲಿ ಸುಮಾರು 67 ಗಾಡಿಗಳು ಪಾಲ್ಗೊಂಡಿದ್ದವು, ರಸ್ತೆ ಬದಿಯಲ್ಲಿ ನಿಂತು ನೋಡಬೇಕಾದ ರಸ್ತೆಗೆ ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.ಹರಕೆ ಹೊತ್ತವರು ಹರಕೆ ತಿರೀಸಲು ಪಾನಕದ ಗಾಡಿಯನ್ನು ಶ್ರಮ ವಹಿಸಿ ಓಡಿಸುತ್ತಿದ್ದರೆ ಇತ್ತ ನೋಡಲು ಬಂದಿದ್ದ ಯುವಕರು ಅತಿ ಉತ್ಸಾಹದಿಂದ ಕೈಯಲ್ಲಿ ಬಾಳೆದಿಂಡು, ಚಾಟಿಕೋಲು ಮತ್ತಿತರ ವಸ್ತುಗಳಿಂದ ವೇಗವಾಗಿ ಬರುತ್ತಿದ್ದ ಗಾಡಿ ಎತ್ತುಗಳಿಗೆ ಬೆದರಿಸುತ್ತಿದ್ದರಿಂದ ಗಾಡಿ ಮಾಲೀಕನಿಗೆ ಎತ್ತುಗಳ ಹತೋಟಿ ತಪ್ಪಿದ್ದು ಕಂಡು ಬಂತು. ಈ ಕಾರಣಕ್ಕೆ ಅಹಿತಕರ ಘಟನೆಸಂಭವಿಸದಂತೆ ಮುಂದಿನ ವರ್ಷ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಪಡ್ಡೆಹುಡುಗರನ್ನು ನಿಯಂತ್ರಿಸಲು ಇಲಾಖೆಗೆ ಮನವಿ ಮಾಡಲಾಗಿದೆ. ಬುಧವಾರ ಅಮ್ಮನವರಿಗೆ ಓಕುಳಿ ಉತ್ಸವ, ಸಂಜೆ ಪುಷ್ಪಮಂಟಪದಲ್ಲಿ ಶ್ರೀಅಮ್ಮನವರನ್ನು ಊರಿನ ರಾಜಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಉತ್ಸವ ನಡೆಸಲಾಗುವುದು. ರಥೋತ್ಸವದಲ್ಲಿ ನಡೆದ ಈ ಸಂದರ್ಭದಲ್ಲಿ ದೇವಸ್ಥಾನದ ಗುಡಿಕಟ್ಟಿನ ಗೌಡರು, ಪಟ್ಟಣದ ಹಿರಿಯ ಮುಖಂಡರು ಸೇರಿದಂತೆ ಗ್ರಾಮದೇವತೆ ಒಕ್ಕಲಿನ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಪರಾಕಾಷ್ಠೆ ಮೆರೆದರು. ವೃತ್ತನಿರೀಕ್ಷಕ ಶ್ರೀಕಾಂತ್ ಹಾಗೂ ಪಿಎಸೈ ಸಜಿತ್ ಕುಮಾರ್ ಉತ್ತಮ ಪೊಲೀಸ್ ಬಂದೋಬಸ್ತ್ ನೀಡಿ ಜಾತ್ರೆಗೆ ಸಹಕರಿಸಿದರು.04 ಬೀರೂರು 1ಬೀರೂರು ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿಯ ರಥೋತ್ಸವ ಮಂಗಳವಾರ ಅಪರಾಹ್ನ 02.45ಕ್ಕೆ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. 4ಬೀರೂರು 2ಬೀರೂರು ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿಯ ರಥೋತ್ಸವದ ಅಂಗವಾಗಿ ಮೂಲವಿಗ್ರಹಕ್ಕೆ ಪುಷ್ಪಾಲಂಕಾರ ಮಾಡಿರುವುದು4ಬೀರೂರು 3ಬೀರೂರು ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿಯ ರಥೋತ್ಸವದ ಅಂಗವಾಗಿ ಪಾನಕದ ಬಂಡಿಗಳ ಓಟ