ವಾರ್ಡ್‌ಗೊಂದು ಯೋಗ ಕಕ್ಷೆ ಆರಂಭಿಸುವ ಗುರಿ

| Published : Jul 19 2024, 01:03 AM IST

ವಾರ್ಡ್‌ಗೊಂದು ಯೋಗ ಕಕ್ಷೆ ಆರಂಭಿಸುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ನಾಗರಿಕರೆಲ್ಲರನ್ನು ಸದೃಢರನ್ನಾಗಿಸಲು ವಾರ್ಡ್ಗೊಂದು ಯೋಗ ಕಕ್ಷೆ ಆರಂಭಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಪತಂಜಲಿ ಯೋಗ ಸಮಿತಿಯ ಮುಖ್ಯ ಪ್ರಭಾರಿ ಭವರಲಾಲ್ ಆರ್ಯಾಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ನಾಗರಿಕರೆಲ್ಲರನ್ನು ಸದೃಢರನ್ನಾಗಿಸಲು ವಾರ್ಡ್‌ಗೊಂದು ಯೋಗ ಕಕ್ಷೆ ಆರಂಭಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಪತಂಜಲಿ ಯೋಗ ಸಮಿತಿಯ ಮುಖ್ಯ ಪ್ರಭಾರಿ ಭವರಲಾಲ್ ಆರ್ಯಾಜಿ ಹೇಳಿದರು.

ನಗರದ ವಿದ್ಯಾಗರಿಯ ಸಾಯಿ ಮಂದಿರ ಆವರಣದಲ್ಲಿ 21 ದಿನಗಳಿಂದ ಹಮ್ಮಿಕೊಂಡಿದ್ದ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ 108 ಯೋಗ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಗಳಿಕೆಯನ್ನೇ ಗುರಿಯಾಗಿರಿಸಿಕೊಂಡಿರುವ, ಆಧುನಿಕ ಯುಗದ ಪ್ರತಿಯೊಬ್ಬ ವ್ಯಕ್ತಿ ಒಂದಿಲ್ಲಾ ಒಂದು ರೋಗದಿಂದ ಬಳಲುತ್ತಿರುವುದು ವಾಸ್ತವಿಕ ಸಂಗತಿಯಾಗಿದೆ. ರೋಗದಿಂದ ಮುಕ್ತಿ ಹೊಂದಲು ಯೋಗ ಮಾರ್ಗ ಒಂದೆ ಸರಳ ಸೂತ್ರವಾಗಿದೆ. ರಾಜ್ಯದ ಅನೇಕ ಅನುಭವಿ ಯೋಗ ಶಿಕ್ಷಕರಿಂದ ತರಬೇತಿ ಪಡೆದಿರುವ ತಾವೆಲ್ಲರೂ ರೋಗ ಮುಕ್ತ ಸಮಾಜ ನಿರ್ಮಿಸಲು ಕಂಕಣಬದ್ಧರಾಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷ ಜಿ.ಎನ್.ಪಾಟೀಲ್ ಅವರು, ನಮ್ಮ ಏಳಿಗೆ ನಮ್ಮ ಕೈಯಲ್ಲಿದೆ .ಅದಕ್ಕೆ ಮಾರ್ಗದರ್ಶನ ಮುಖ್ಯವಾಗಿದೆ. ಪತಂಜಲಿ ತಂಡದ ಸಹವಾಸವನ್ನು ನಾವು ಬೆಳೆಸಿಕೊಂಡರೆ, ಯೋಗ ಮಾರ್ಗದ ಮೂಲಕ ಬಾಳನ್ನು ಹಸನಾಗಿಸಲು ಸಾಧ್ಯ. ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಪತಂಜಲಿ ಯೋಗ ಸಮಿತಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ, ಅದಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಪ್ರಭಾರಿ ಎಚ್.ಎನ್.ಇನಾಮ್ದಾರ್, ರಾಜು ದಂಡಗಿ, ಬಿ.ಎಸ್.ಕಟಗೇರಿ, ಗೋಪಾಲಪ್ಪನವರ್, ಸೀಮಾ ಮಣ್ಣೂರ್, ಕೆ.ಮಾಲತಿ, ಸುಜಾತ ದೊಡ್ಮನಿ, ಚನ್ನಮ್ಮ ಮೇಟಿ ಮುಂತಾದವರು ಭಾಗವಹಿಸಿದ್ದರು. ಶ್ರೀಶೈಲ್ ಮಠಪತಿ ನಿರೂಪಿಸಿದರು.