ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕನ್ನಡದ ಅನುಭಾವ ಪರಂಪರೆಗೆ ಮಹತ್ವಪೂರ್ಣವಾದ ಇತಿಹಾಸವಿದ್ದು, ಇದು ದೇವರ-ಮನುಷ್ಯರನ್ನು ಬೆಸೆಯುವ ಸುವರ್ಣ ಸೇತುವೆಯಾಗಿದೆ ಎಂದು ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟನಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಜೆಎಸ್‌ಎಸ್ ಮಹಾ ವಿದ್ಯಾಪೀಠ, ಸಂತಕವಿ ಕನಕದಾಸ ಮತ್ತು ತತ್ವ್ಪಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಅನುಭಾವ ಪರಂಪರೆ- ತಾತ್ವಿಕ ಜಿಜ್ಞಾಸೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.12ನೇ ಶತಮಾನದಿಂದ ಇಂದಿನವರೆಗೆ ಸಾರ್ಥಕ ಬದುಕಿನ ಮಾರ್ಗವನ್ನು ಅನುಭಾವದ ಪರಂಪರೆ ಆವರಿಸಿಕೊಂಡಿದೆ, ಬದುಕಿಗೆ ಸತ್ವವನ್ನು ತಂದುಕೊಟ್ಟಿರುವುದೇ ಅನುಭಾವ ಪರಂಪರೆ ಇದು ದೇವರ-ಮನುಷ್ಯರ ಸುವರ್ಣ ಸೇತುವೆಯಾಗಿದೆ ಎಂದರು.12ನೇ ಶತಮಾನದ ಆದರ್ಶ ವಿವಾಹ ಮತ್ತು ಕನಕದಾಸರಿಗೆ ಶ್ರೀ ಕೃಷ್ಣನ ದರ್ಶನ ಸುಖಾಂತ್ಯದಲ್ಲಿ ಮುಗಿದಿದ್ದರೆ ಇದು ಜಗತ್ತಿನ ಹೆಮ್ಮೆಯ ವಿಚಾರವಾಗಿತ್ತು. ಆದರೆ ಪ್ರಭುತ್ವ ಮತ್ತು ಪುರೋಹಿತಶಾಯಿ ಇದನ್ನು ಸುಖಾಂತ್ಯ ಮಾಡದೇ ನೋವಿನ ಸಂಗತಿಯಾಗಿಸಿ ಬಿಟ್ಟಿತು. 12ನೇ ಶತಮಾನದ ಶರಣರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದು ಚಾಮರಾಜನಗರ ಜಿಲ್ಲೆಯ ನೆಲೆ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿಯ ಮಹಾಕಾವ್ಯಗಳು, ಜನಪದ ಗಾಯಕರು ಎಂದರು.ಬಸವಣ್ಣ, ಕನಕದಾಸ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಇವರುಗಳ ಚಿಂತನೆ ಮತ್ತು ಅನುಭಾವದ ಅಭಿವ್ಯಕ್ತಿ ಕನ್ನಡದ ಸಾರಸ್ವತ ಲೋಕದಲ್ಲಿ ಅತ್ಯಂತ ವಿಶಿಷ್ಟವಾದುದು. ಬಹುತ್ವದ ನೆಲೆಯಲ್ಲಿ ಸಮುದಾಯಗಳನ್ನು ಎಚ್ಚರಗೊಳಿಸುವ ಹಾಗೂ ಸಾಮಾಜಿಕ ಮುಂಚೂಣಿಗೆ ಕರೆತರುವಲ್ಲಿ ಈ ನಾಲ್ವರ ಪಾತ್ರ ಮಹತ್ವದ್ದು .ನಮ್ಮ ಬದಕನ್ನು ಕಾಡುತ್ತಿರುವ ವ್ಯವಸ್ಥೆಗಳಿಂದ ಪಾರು ಮಾಡುವ ಶಕ್ತಿಯನ್ನು ಅನುಭಾವ ಪರಂಪರೆ ಕಲಿಸುತ್ತದೆ ಎಂದರು.ಸಂಸ್ಕೃತಿ ಚಿಂತಕ ಪ್ರೊ.ಜಿ.ಎಸ್.ಜಯದೇವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುಭಾವ ಪರಂಪರೆಯನ್ನು ಪರಿಚಯಿಸಿದವರೇ ಶಿವಶರಣರು. ಅಲ್ಲದೇ ತಮಗಾದ ಅನುಭವವನ್ನು ಎಲ್ಲರಿಗೂ ಅನುಭಾವ ಆಗುವಂತೆ ಪಸರಿದವರು ಕೂಡಾ ಅವರೇ ಎಂದು ಹೇಳಿದರು.ಒಂದು ಧರ್ಮವು ಹುಟ್ಟಿದ್ದು ಅನುಭಾವಿಗಳಿಂದ. ಅನುಭಾವ ಆದರದ ಮೇಲೆ ಧರ್ಮವು ಸ್ಥಾಪನೆಯಾಗಿದ್ದು, ಅನುಭವಿಗಳಿಂದಲೇ ಸ್ಥಾಪನೆಯಾಗಿದೆ. ಜಗತ್ತಿನ ಯಾವುದೇ ಧರ್ಮವು ಸಹ ಅನುಭಾವಗಳಿಂದಲೇ ಹುಟ್ಟಿದ್ದು, ಜಗತ್ತಿನಲ್ಲಿ ಸೃಷ್ಟಿಯಾಗಿರುವ ಪ್ರತಿಯೊಂದರ ಜತೆ ಹೊಂದಿಕೊಂಡು ಹೋಗು ಎಂಬುದೇ ಅನುಭಾವ ಎಂದರುಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಮಧ್ಯಕಾಲೀನ ಕರ್ನಾಟಕದ ಸಂದರ್ಭದಲ್ಲಿ ಸಾಮಾನ್ಯರನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದುಕೊಂಡು ಬಂದವು ತತ್ವಪದಗಳ ದಾರ್ಶನಿಕರು ಎಂದರು.ಮಧ್ಯಕಾಲೀನ ಕರ್ನಾಟಕದ ಅನುಭಾವ ಪರಂಪರೆ ವಿಷಯ ಕುರಿತು ಪ್ರೊ. ಮೊರಬದ ಮಲ್ಲಿಕಾರ್ಜುನ, ಕನಕದಾಸ, ಬಸವಣ್ಣ ಮತ್ತು ಮಲೆಮಹದೇಶ್ವರ ಅವೈದಿಕ ಚಿಂತನೆ ವಿಷಯು ಕುರಿತು ಡಾ. ಉಷಾರಾಣಿ, ಕನಕದಾಸ, ಬಸವಣ್ಣ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ= ಸಾಮಾಜಿಕ ಸಂಘರ್ಷ ಕುರಿತು ಡಾ. ರಾಜಪ್ಪ ದಳವಾಯಿ, ಕನಕದಾಸ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ- ಅನುಭಾವ ಚಿಂತನೆ ವಿಷಯ ಕುರಿತು ಡಾ. ಗಿರೀಶ್ ಕೆ.ಎನ್, ಮಹದೇಶ್ವರ ಮತ್ತು ಮಂಟೇಸ್ವಾಮಿ- ಸಾಂಸ್ಕೃತಿಕ ನಾಯಕರು ವಿಷಯು ಕುರಿತು ಮಹದೇವ ಶಂಕನಪುರ, ಅವರು ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹಾದೇವಸ್ವಾಮಿ, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಇತರರು ಇದ್ದರು.ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಿ.ರೂಪಶ್ರೀ ನಿರೂಪಿಸಿ, ಅರ್. ಉಮೇಶ್ ವಂದಿಸಿದರು.----------------೨೪ಸಿಎಚ್‌ಎನ್೧ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅನುಭಾವ ಪರಂಪರೆ-ತಾತ್ವಿಕ ಜಿಜ್ಞಾಸೆ ವಿಚಾರ ಸಂಕಿರಣವನ್ನು ಮೈಸೂರು ಜೆಎಸ್‌ಎಸ್ ಮಹಾ ವಿದ್ಯಾಪೀಠದ ಪ್ರಕಟನಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಉದ್ಘಾಟಿಸಿದರು.-----೨೪ಸಿಎಚ್‌ಎನ್೨ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅನುಭಾವ ಪರಂಪರೆ-ತಾತ್ವಿಕ ಜಿಜ್ಞಾಸೆ ವಿಚಾರ ಸಂಕಿರಣದಲ್ಲಿ ಮೈಸೂರು ಜೆಎಸ್‌ಎಸ್ ಮಹಾ ವಿದ್ಯಾಪೀಠದ ಪ್ರಕಟನಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿದರು.------------