ಸಾರಾಂಶ
ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಬಯಲಾಟ ಪ್ರದರ್ಶನ ಹಾಗೂ ಬಯಲಾಟ ಗೀತೆಗಳ ಕಾರ್ಯಕ್ರಮ ನಡೆಯಿತು.
ದಾವಣಗೆರೆ: ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಬಯಲಾಟ ಪ್ರದರ್ಶನ ಹಾಗೂ ಬಯಲಾಟ ಗೀತೆಗಳ ಕಾರ್ಯಕ್ರಮ ನಡೆಯಿತು.
ಯರಗುಂಟೆ ಕ್ಷೇತ್ರದ ಪರಮೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಕಲೆ ಹಾಗೂ ಕಲಾವಿದರಿಗೆ ಸರ್ಕಾರ ಒಂದೇ ಅಲ್ಲ, ಜನತೆಯ ಸಹಭಾಗಿತ್ವ ಇರಬೇಕು. ಕಲಾವಿದರು ಶಿಸ್ತುಬದ್ಧರಾಗಿರಬೇಕು. ವೇದಿಕೆಯಲ್ಲಿ ಮಾತ್ರ ಕಲಾವಿದರು ರಾಜ, ಮಂತ್ರಿ, ಸೇನಾನಿ, ದೊರೆ, ಇನ್ನೂ ಅನೇಕ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಿಜಬದುಕಿನಲ್ಲಿ ಕಷ್ಟಜೀವಿಗಳು. ಈ ನಾಡಿನ ಕಲೆ, ಕಲಾವಿದರಿಗೆ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘವು 33 ವರ್ಷಗಳಿಂದ ಸ್ಪಂದಿಸಿ, ಪ್ರೋತ್ಸಾಹ ನೀಡುತ್ತರುವುದು ಶ್ಲಾಘನೀಯ ಎಂದರು.ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಎಸ್.ಪ್ರೇಮಾ, ಪಂಕಜಾ ದಯಾನಂದ್, ಡಿ.ಬಿ.ಶಿವಣ್ಣ, ಎನ್.ರಂಗನಾಥ, ಪಿ.ಖಾದರ್ ಇತರರು ಇದ್ದರು. ಅನಂತರ ಸಿದ್ದಮ್ಮನಹಳ್ಳಿಯ ಬಯಲಾಟ ಕಲಾ ತಂಡದವರಿಂದ ಕರಿಬಂಟನ ಕಾಳಗ ಎಂಬ ಬಯಲಾಟ ಪ್ರದರ್ಶನ ನಡೆಯಿತು. ಕಲಾವಿದರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
- - - -10ಕೆಡಿವಿಜಿ 37: ದಾವಣಗೆರೆಯಲ್ಲಿ ನಡೆದ ಬಯಲಾಟ ಪ್ರದರ್ಶನ, ಗೀತೆಗಳ ಕಾರ್ಯಕ್ರಮದಲ್ಲಿ ಪರಮೇಶ್ವರ ಸ್ವಾಮೀಜಿ ಮಾತನಾಡಿದರು.