ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ಅನುಮತಿಸಿಲ್ಲ

| Published : Apr 07 2024, 01:51 AM IST

ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ಅನುಮತಿಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಮಟ್ಟದಲ್ಲಿ ಪೆಂಡಿಂಗ್ ಉಳಿದಿದೆ. ಸರ್ಕಾರದ ಮಟ್ಟದಿಂದ ಮಂಜೂರು ಮಾಡಿಸಿಕೊಂಡು ಬಂದರೇ ಕೂಡಲೇ ಪ್ರಾರಂಭಕ್ಕೆ ಅನುಕೂಲವಾಗಲಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ವಿಜಯಪುರ ಜಿಲ್ಲಾಡಳಿತಾತ್ಮಕ ನ್ಯಾಯಮೂರ್ತಿ ಶ್ರೀ ಅಶೋಕ ಕಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಮಟ್ಟದಲ್ಲಿ ಪೆಂಡಿಂಗ್ ಉಳಿದಿದೆ. ಸರ್ಕಾರದ ಮಟ್ಟದಿಂದ ಮಂಜೂರು ಮಾಡಿಸಿಕೊಂಡು ಬಂದರೇ ಕೂಡಲೇ ಪ್ರಾರಂಭಕ್ಕೆ ಅನುಕೂಲವಾಗಲಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ವಿಜಯಪುರ ಜಿಲ್ಲಾಡಳಿತಾತ್ಮಕ ನ್ಯಾಯಮೂರ್ತಿ ಶ್ರೀ ಅಶೋಕ ಕಿಣಗಿ ಹೇಳಿದರು.

ಶನಿವಾರ ತಾಳಿಕೋಟೆ ಪಟ್ಟಣದ ಹಳೆಯ ಪುರಸಭೆ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ವಿಜಯಪುರ, ಲೋಕೋಪಯೋಗಿ ಇಲಾಖೆ ಮತ್ತು ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.ಈಗಾಗಲೇ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿ ಪ್ರಥಮವಾಗಿ ಮುದ್ದೇಬಿಹಾಳ, ಬ.ಬಾಗೇವಾಡಿ, ಇಂಡಿಯಿಂದ ಅರ್ಜಿಗಳು ಬಂದಿದ್ದವು. ಅವುಗಳಿಗೆ ಸಂಬಂಧಿಸಿ ಈಗಾಗಲೇ ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸುವ ಸಲುವಾಗಿ ಸರ್ಕಾರ ಮಟ್ಟದಲ್ಲಿ ಉಳಿದಿದೆ. ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸುವವರೆಗೂ ಬ.ಬಾಗೇವಾಡಿ, ಇಂಡಿಯಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸಲು ಬರುವುದಿಲ್ಲ. ಮುದ್ದೇಬಿಹಾಳದಲ್ಲಿ ನ್ಯಾಯಾಲಯ ಪ್ರಾರಂಭಕ್ಕೆ ಸಂಬಂಧಿಸಿ ಈ ಭಾಗದ ಸರ್ಕಾರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳ ಸಹಕಾರ ತೆಗೆದುಕೊಂಡು ಮಂಜೂರು ಮಾಡಿಸಿಕೊಂಡು ಬಂದರೆ ಕೂಡಲೇ ಪ್ರಾರಂಭಿಸಲು ಅನುಕೂಲವಾಗಲಿದೆ ಎಂದರು.

ತಾಳಿಕೋಟೆ ಭಾಗಕ್ಕೆ ಸಂಬಂಧಿಸಿದಂತೆ ೨೦೧೯ ರಿಂದ ೨೫೦೦ ಕ್ಕಿಂತಲೂ ಹೆಚ್ಚು ಕೇಸುಗಳು ಪೆಂಡಿಂಗ್ ಉಳಿದಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ತಾಳಿಕೋಟೆಯಲ್ಲಿ ಪುಲ್ ಟೈಮ್ ನ್ಯಾಯಾಲಯ ಪ್ರಾರಂಭಿಸಲು ಆಗದಿದ್ದರೂ ಮೊದಲು ಎರಡು ದಿನವಾದರೂ ಕಲಾಪ ನಡೆಸಲು ಅನುಕೂಲ ಮಾಡಿದರೆ ಆದಷ್ಟು ಕೇಸ್‌ಗಳು ಬೇಗನೇ ಇತ್ಯರ್ಥವಾಗಬಹುದು ಎಂದು ನ್ಯಾಯಾಲಯ ಪ್ರಾರಂಭಿಸಿದ್ದೇವೆ. ಶುಕ್ರವಾರ ಮತ್ತು ಶನಿವಾರ ಎರಡು ದಿನಗಳು ಕಲಾಪ ನಡೆಯಲಿದೆ. ಮುಂದೆ ಈ ಭಾಗದ ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ಸರ್ಕಾರದಿಂದ ಪುಲ್ ಟೈಮ್ ನ್ಯಾಯಾಲಯ ನಡೆಸಲು ಅನುಮತಿ ಮಾಡಿಕೊಂಡು ಬಂದರೆ ವಾರದ ಸೋಮವಾರದಿಂದ ಶನಿವಾರದವರೆಗೆ ನ್ಯಾಯಾಲಯದ ಕಲಾಪವನ್ನು ನಡೆಸಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಅವರು ಮಾತನಾಡಿದರು.ಇನ್ನೋರ್ವ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರು ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯ ಮೇಲೆ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂಪತ್‌ಕುಮಾರ ಬಳೋಲಗಿಡದ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಕ ಅಭಿಯಂತರ ರಾಜು ಮುಜುಮದಾರ ಉಪಸ್ಥಿತರಿದ್ದರು. ಈ ಸಮಯದಲ್ಲಿ ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ವ್ಹಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಂ.ಎಸ್.ನಾವದಗಿ, ಎಂ.ಎಂ.ಮುದ್ದೇಬಿಹಾಳ, ವಿಶ್ವನಾಥರಡ್ಡಿ ಮದರಕಲ್ಲ, ಎಸ್.ಆರ್.ಸಜ್ಜನ, ಎಸ್.ಎಂ.ಗುಡದಿನ್ನಿ, ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ ಹಾಗೂ ನ್ಯಾಯವಾದಿಗಳಾದ ಎಂ.ಆರ್.ಪಾಟೀಲ, ಆನಂದ ಮದರಕಲ್ಲ, ಆನಂದ ಕೊಂಗಡ್ಡಿ, ಆನಂದ ದೊಡಮನಿ, ಬಸನಗೌಡ ಮುಂದಿನಮನಿ, ಪ್ರಭಾಕರ ಗುಡಗುಂಟಿ, ಎಂ.ಎಚ್.ಜೂಲಿ, ಸುರೇಶ ನಾರಿ, ಎಂ.ಎಸ್.ಹಜೇರಿ, ಆರ್.ಎಚ್.ಇನಾಮದಾರ, ಎಸ್.ಆರ್.ದೇಸಾಯಿ, ಮುತ್ತು ಜಾಗೀರದಾರ, ಈರಪ್ಪ ಕುಂಬಾರ, ವ್ಹಿ.ಜಿ.ಮದರಕಲ್ಲ, ಎಸ್.ಆರ್.ಸಜ್ಜನ, ಎಂ.ಎಸ್.ಅಮಲ್ಯಾಳ, ಝ.ಕೆ.ಚಿತ್ತರಗಿ, ಬಸವರಾಜ ನಾಡಗೌಡ, ಎಸ್.ಎಂ.ಚಿಲ್ಲಾಳಶೆಟ್ಟರ, ವಿರೇಶ ಬಾಗೇವಾಡಿ, ಶಾಂತು ದೋರನಹಳ್ಳಿ, ಎಂ.ಎಸ್.ಪಾಟೀಲ, ಆರ್.ಎಂ.ಪಾಟೀಲ, ಆರ್.ಎಸ್.ಐನಾಪೂರ, ಆಯ್.ಕೆ.ಸಾಸನೂರ, ಎನ್.ಬಿ.ಮುದ್ನಾಳ, ವಾಯ್.ವಾಯ್.ದೊಡಮನಿ, ಕಾರ್ತಿಕ ಕಟ್ಟಿಮನಿ, ಟಿ.ಎಸ್.ನೀರಲಗಿ, ಎನ್.ಆಯ್.ಮಸ್ಕಾನಾಳ, ಕೆ.ಬಿ.ದೊಡಮನಿ, ಟಿ.ಎಸ್.ಚಲವಾದಿ, ಭರತ ಅಗರವಾಲ, ಎಂ.ಕೆ.ಮೇತ್ರಿ ಮೊದಲಾದವರು ಉಪಸ್ಥಿತರಿದ್ದರು.