ಜನರ ಅಭಿವೃದ್ಧಿಯೇ ಸರ್ಕಾರದ ಆಶಯ: ಸಚಿವ ಭೈರತಿ ಸುರೇಶ್

| Published : Mar 27 2025, 01:05 AM IST

ಸಾರಾಂಶ

ತರೀಕೆರೆ, ಇದು ನಿಮ್ಮದೇ ದುಡ್ಡು ಇದರಿಂದ ನಿಮ್ಮ ಉದ್ಧಾರವಾಗಬೇಕು. ನಿಮಗೆ ಸ್ಪಂದಿಸುವ ಕೆಲಸದಿಂದ ಎಳ್ಳಷ್ಟು ಹಿಂದೆ ಸರಿಯಲ್ಲ. ನಿಮ್ಮ ಅಭಿವೃದ್ಧಿಯೇ ಸರ್ಕಾರ ಹಾಗೂ ಕಾಂಗ್ರೆಸ್ಆ ಶಯವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪ್ರತಿಪಾದಿಸಿದರು.

ತರೀಕೆರೆಯಲ್ಲಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು, ವಿವಿಧ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಇದು ನಿಮ್ಮದೇ ದುಡ್ಡು ಇದರಿಂದ ನಿಮ್ಮ ಉದ್ಧಾರವಾಗಬೇಕು. ನಿಮಗೆ ಸ್ಪಂದಿಸುವ ಕೆಲಸದಿಂದ ಎಳ್ಳಷ್ಟು ಹಿಂದೆ ಸರಿಯಲ್ಲ. ನಿಮ್ಮ ಅಭಿವೃದ್ಧಿಯೇ ಸರ್ಕಾರ ಹಾಗೂ ಕಾಂಗ್ರೆಸ್ಆ ಶಯವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪ್ರತಿಪಾದಿಸಿದರು.

ಬುಧವಾರ ಪಟ್ಟಣದ ಗಾಂಧಿ ವೃತ್ತದ ಬಳಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ತರೀಕೆರೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆ, ಡಲ್ಟ್‌ ವಿಶೇಷ ಅನುದಾನದಡಿ ಅಜ್ಜಂಪುರ ಪಟ್ಟಣ ಪಂಚಾಯಿತಿ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಹಾಗೂ ಪಟ್ಟಣ ಪಂಚಾಯಿತಿ ಕಚೇರಿ ರಸ್ತೆಯ ಫುಟ್ ಪಾತ್ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಐಟಿ, ಬಿಟಿ. ಇಸ್ರೋ, ಏರ್ ಪೋರ್ಟ್ ಇತ್ಯಾದಿ ಎಲ್ಲ ಅಭಿವೃದ್ಧಿ ಕಾರ್ಯ ಮಾಡಿದ್ದು ಕಾಂಗ್ರೆಸ್ ಪಕ್ಷ, ನಮ್ಮ ಪಕ್ಷದಿಂದ ಮಾತ್ರ ಅಸು ಸಾಧ್ಯವಾಗಿದೆ. ಸ್ವಚ್ಛ ಭಾರತ್ ಘೋಷಿಸಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಐದು ಗ್ಯಾರಂಟಿ ಯೋಜನೆ ಇಡೀ ವಿಶ್ವದಲ್ಲಿಯೇ ಎಲ್ಲೂ ಇಲ್ಲ. ನಮ್ಮ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಇದನ್ನುಸಾಧಿಸಿ ತೋರಿಸಿದ್ದಾರೆ. ಗ್ಯಾರಂಟಿ ಯೋಜನೆಗೆ ₹60 ಸಾವಿರ ಕೋಟಿ ಅಗತ್ಯವಿದೆ. ಮುಖ್ಯಮಂತ್ರಿಗಳು ಈ ರಾಜ್ಯದ ಅಭಿವೃದ್ಧಿ ಗಾಗಿ ₹50 ಸಾವಿರ ಕೋಟಿ ತೆಗೆದಿರಿಸಿದ್ದಾರೆ ಎಂದು ವಿವರಿಸಿದರು.

₹250 ಕೋಟಿ ಅಭಿವೃದ್ಧಿ ಅನುದಾನಃ

ಸುಳ್ಳು ಹೇಳುವುದು ಬಿಜೆಪಿ ಕೆಲಸ. ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಇಲ್ಲಿಯವರೆಗೆ ₹250 ಕೋಟಿ ಅನುದಾನ ಬಂದಿದೆ ಎಂದ ಅವರು ಶಾಸಕ ಜಿ.ಎಚ್. ಶ್ರೀನಿವಾಸ್ ಕ್ಷೇತ್ರದಲ್ಲಿ ಬಹಳ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಶಾಸಕ ಜಿ.ಎಚ್.ಶ್ರೀನಿವಾಸ್ ಅನುದಾನ ಕೇಳಿದರೆ ಯಾವ ಇಲಾಖೆಯವರು ಇಲ್ಲ ಎಂದು ಹೇಳುವುದೇ ಇಲ್ಲ. ಎಲ್ಲರೂ ಸ್ಪಂದಿಸುತ್ತಾರೆ. ನನ್ನ ಇಲಾಖೆಯಿಂದಲೇ ₹100 ಕೋಟಿ ಅನುದಾನ ನೀಡಲಾಗಿದೆ. ಅನುದಾನ ತರುವುದರಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ನಂ.1 ಸ್ಥಾನದಲ್ಲಿದ್ದಾರೆ ಎಂದು ನುಡಿದರು.

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅಭಿವೃದ್ಧಿಗೆ ₹9 ಕೋಟಿ, ₹124 ಕೋಟಿಯಲ್ಲಿ ಒಳಚರಂಡಿ ಯೋಜನೆ, ₹26 ಕೋಟಿ ಯಲ್ಲಿ ಅಜ್ಜಂಪುರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ, ತರೀಕೆರೆ ಪುರಸಭೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ, ತರೀಕೆರೆ ಪಟ್ಟಣಕ್ಕೆ 24X7 ಕುಡಿಯುವ ನೀರಿನ ಯೋಜನೆ, ಇಷ್ಟೆಲ್ಲಾ ಯೋಜನೆಗಳು ಇನ್ನು ಕೇವಲ ಒಂದುವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಸಚಿವ ಬಿ.ಎಸ್.ಸುರೇಶ್ ತರೀಕೆರೆ ಪಟ್ಟಣಕ್ಕೆ ಕೋಟಿ ಕೋಟಿ. ಅನುದಾನ ನೀಡಿದ್ದಾರೆ. ಶಾಸಕರು ಶ್ರಮಪಟ್ಟು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ತುಂಬಾ ಶ್ರಮಪಟ್ಟು ತರೀಕೆರೆ ಪಟ್ಟಣದ ಬಿ.ಎಚ್.ರಸ್ತೆ ಅಭಿವೃದ್ಧಿಗೆ ಒಟ್ಟು ₹51. 65 ಕೋಟಿ ಅನುದಾನ ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಇನ್ನೂ ಹೆಚ್ಚು ಅನುದಾನ ಖಂಡಿತ ತರುತ್ತೇನೆ. ಬಡ ವಿದ್ಯಾರ್ಥಿಗಳಿಗೆ ಅರ್ಥಿಕ ನೆರವು ನೀಡುವ ಸಚಿವ ಬಿ.ಎಸ್.ಸುರೇಶ್ ಅವರು ಇನ್ನೂ ಹೆಚ್ಚಿನ ಸ್ಥಾನ ಗಳಿಸಲಿ ಎಂದು ಆಶಿಸಿದರು.

ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ 16ನೇ ಆಯವ್ಯಯ ಮಂಡಿಸಿ ದಾಖಲೆ ಸ್ಥಾಪಿಸಿದ್ದಾರೆ. ಅಭಿವೃದ್ದಿಗಾಗಿ ಎಲ್ಲಾ ಶಾಸಕರಿಗೆ ಅನುದಾನನೀಡಿದ್ದಾರೆ. ಮುಖ್ಯಮಂತ್ರಿಗಳು ನೀರಾವರಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಹೇಳಿದರು.

ತರೀಕೆರೆ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ, ಕುಡಿಯುವ ನೀರಿನ ಪೈಪ್ ಲೈನ್ ಕೆಲಸ ನಾಳೆಯಿಂದಲೇ ಪ್ರಾರಂಭ ವಾಗಲಿದೆ. ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ಸ್ಥಾಪನೆ ಆಗಲಿದೆ ಎಂದು ಹೇಳಿದರು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭೆ ಸದಸ್ಯರು, ನಾಮಿನಿ ಸದಸ್ಯರು, ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸಮೀವುಲ್ಲಾ ಷರೀಪ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಪುರಸಭಾಧ್ಯಕ್ಷ ಟಿ.ವಿ.ಶಿವಶಂಕರಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ತಣಿಗೇಬೈಲು, ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್, ಟಿ.ಎನ್.ಜಗದೀಶ್‌ ಭಾಗವಹಿಸಿದ್ದರು.-----------------ಫೋಟೋ ಇದೆಃ 26ಕೆಟಿಆರ್.ಕೆ.12ಃ ತರೀಕೆರೆಯಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದ ಉದ್ಗಾಟನೆಯನ್ನು ನಗರಾಭಿವೃದ್ದಿ ಸಚಿವ ಮತ್ತು ನಗರ ಯೋಜನಾ ಸಚಿವರಾದ ಬಿ.ಎಸ್.ಸುರೇಶ್ ಅವರುನೆರವೇರಿಸಿದರು. ಶಾಸಕ ಜಿ.ಹೆಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ಮತ್ತಿತರರು ಇದ್ದಾರೆ.