ಕಲಾವಿದರ ನೆರವಿಗೆ ಸರ್ಕಾರ ಧಾವಿಸಲಿ: ಮಂಜಮ್ಮ ಜೋಗತಿ

| Published : Jul 01 2025, 12:47 AM IST

ಸಾರಾಂಶ

ಕಲಾವಿದರ ಜೀವನ ಬಹಳ ಕಷ್ಟವಿದ್ದು, ಕಲಾವಿದರ ನೆರವಿಗೆ ಸರ್ಕಾರ ಧಾವಿಸಬೇಕು. ಆಗ ಮಾತ್ರ ಕಲಾವಿದರ ಬದುಕು ಹಸನವಾಗುತ್ತದೆ.

ರಂಗಬಿಂಬದ 3ನೇ ವರ್ಷದ ವಾರ್ಷಿಕೋತ್ಸವ, ಸಂಗ್ಯಾ​ ಬಾಳ್ಯಾ ನಾಟಕ ಪ್ರದರ್ಶನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಕಲಾವಿದರ ಜೀವನ ಬಹಳ ಕಷ್ಟವಿದ್ದು, ಕಲಾವಿದರ ನೆರವಿಗೆ ಸರ್ಕಾರ ಧಾವಿಸಬೇಕು. ಆಗ ಮಾತ್ರ ಕಲಾವಿದರ ಬದುಕು ಹಸನವಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದರು.

ಇಲ್ಲಿನ ದುರ್ಗಾದಾಸ್ ಕಲಾಮಂದಿರದಲ್ಲಿ ನಡೆದ ರಂಗಬಿಂಬದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಂಗ್ಯಾ​ ಬಾಳ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲಾವಿದರ ಬದುಕು ಹಸನಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೆಚ್ಚಿನ ಮಟ್ಟದಲ್ಲಿ ಅನುದಾನ ನೀಡಬೇಕು. ಬಡಕಲಾವಿದರಿಗೆ ಹಾಗೂ ಕಲಾಸಂಸ್ಥೆಗಳ ನೆರವಿಗೆ ಧಾವಿಸುವ ಮೂಲಕ ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಆಗ ಮಾತ್ರ ಕಲಾವಿದರು ಮತ್ತು ಕಲೆ ಉಳಿಯಲು ಸಾಧ್ಯ ಎಂದರು.

ಈ ಹಿಂದೆ ಮರಿಯಮ್ಮನಹಳ್ಳಿಯಲ್ಲಿ ಬೆಳಗಾಗೋವರೆಗೆ ನಾಟಕ, ಬಯಲಾಟ ಪ್ರದರ್ಶನಗೊಳ್ಳುತ್ತಿದ್ದವು. ರಂಗಬಿಂಬ ಕಲಾತಂಡವು ನಾಟಕ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದ್ದು, ಈಗ ರಂಗಬಿಂಬ ಕಲಾ ಟ್ರಸ್ಟ್‌ಗೆ ಮೂರು ವರ್ಷಗಳಾಗಿದ್ದು, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವ ಮೂಲಕ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ‌ ಚಿದ್ರಿ ಸತೀಶ್, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಹಿರಿಯ ರಂಗಕಲಾವಿದೆ ಡಾ‌. ನಾಗರತ್ನಮ್ಮ, ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶಿವಮೂರ್ತಿ, ಪಪಂ‌ ಅಧ್ಯಕ್ಷ ಆದಿಮನಿ ಹುಸೇನ್ ಬಾಷ, ಲಲಿತ ಕಲಾರಂಗದ ಉಪಾಧ್ಯಕ್ಷ ಜಿ.ಎಂ. ಕೊಟ್ರೇಶ್‌ ಮಾತನಾಡಿದರು. ಪಪಂ ಸದಸ್ಯ ಕೆ. ಮಂಜುನಾಥ, ಜಿಪಂ ಮಾಜಿ ಸದಸ್ಯ ಗೋವಿಂದರ ಪರುಶುರಾಮ, ಸ್ಥಳೀಯ ಮುಖಂಡರಾದ ಗರಗ ಪ್ರಕಾಶ, ಎಂ. ಕೀರ್ತಿರಾಜ್ ಜೈನ್‌, ರೋಗಾಣಿ ಮಂಜುನಾಥ, ಕಾನಿಪ‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ್ ಸೇರಿದಂತೆ ಇತರರು ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ರಂಗಬಿಂಬ ಟ್ರಸ್ಟ್‌ನ ಅಧ್ಯಕ್ಷೆ ಎಂ. ಗಾಯತ್ರಿದೇವಿ ಅಧ್ಯಕ್ಷತೆ ವಹಿಸಿದ್ದರು.

ಕಲಾವಿದ ಕೆ. ನಾಗೇಶ್‌ ಸ್ವಾಗತಿಸಿದರು. ರಂಗಬಿಂಬ ಕಾರ್ಯದರ್ಶಿ ಸಿ.ಕೆ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಲಾವಿದೆ ಪುಷ್ಪ ಪಿ. ಸರದಾರ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದ ನಂತರ ನಾಡೋಜ ಡಾ. ಚಂದ್ರಶೇಖರ ಕಂಬಾರ ರಚಿಸಿದ ಬಿ.ಎಂ.ಎಸ್. ಪ್ರಭು ನಿರ್ದೇಶನದ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನ ನಡೆಯಿತು.

ಸಂಗ್ಯಾ​ - ಸರದಾರ ಬಿ., ಬಾಳ್ಯ- ​ಮಹಾಂತೇಶ್ ಮಸಾರಿ ನೆಲ್ಲುಕುದುರೆ, ಈರ್ಯ​- ಜಿ. ಸೋಮಶೇಖರ್, ವಿರುಪಾಕ್ಷಿ​- ನವೀನ್ ಕುಮಾರ್ ಟಿ, ಬಸವಂತ -​ ಕೊಟ್ರೇಶ್ ಲಕ್ಕಿಮರ, ಮಾರ್ವಾಡಿ​- ಎಚ್. ಮಂಜುನಾಥ, ಪೊಸ್ಟ್ ಮ್ಯಾನ್-​ ಅಕ್ಷರ ಎನ್. ದೇವನಕೊಂಡ, ವ್ಯಕ್ತಿ-​ ಹುರುಕೊಳ್ಳಿ ಗುರುಪ್ರಕಾಶ್, ಗಂಗಿ-​ ಲಕ್ಕಿಮರ ಶಾರದ, ಪಾರವ್ವ​- ಕೆ. ಸರ್ವಮಂಗಳ ನಾಟಕದಲ್ಲಿ ಮನೋಜ್ಞವಾಗಿ ಅಭಿನಯಿಸಿ ಗಮನಸೆಳೆದರು.

ಸಂಗೀತದಲ್ಲಿ ಹಾರ್ಮೋನಿಯಂ​- ಕೆ. ತಿಪ್ಪಣ್ಣ, ತಬಲ-​ ಜಿ.ಕೆ. ಮೌನೇಶ್, ಗಾಯನ-​ ಕೆ. ಮಲ್ಲನಗೌಡ, ಜಿ. ಮಲ್ಲಪ್ಪ, ಶರಣಬಸವ, ಬಿ. ಶಾರದಮ್ಮ, ಜಿ, ಸಂಗೀತ, ಜಿ. ನಾಗವೇಣಿರವರ ಹಿನ್ನೆಲೆ ಗಾಯನ ಗಮನ ಸೆಳೆಯಿತು.

ನಾಟಕಕ್ಕೆ ಬೆಳಕು- ಬಿ.ಎಂ.ಎಸ್. ಮೃತ್ಯುಂಜಯ, ಕಟ್ಟೆ ಉಮೇಶ್‌, ಧ್ವನಿ- ಹ್ಯಾಟಿ ಮಂಜುನಾಥ, ರಂಗಸಜ್ಜಿಕೆ- ಕೆ. ನಾಗೇಶ್‌, ರಂಗಪರಿಕರ- ಜಿ. ಸೋಮಣ್ಣ, ಪ್ರಸಾದನ ಪುಷ್ಪ ಪಿ. ಸರದಾರ, ವಸ್ತ್ರಲಂಕಾರ- ಪ್ರಕೃತಿ ಎನ್‌. ದೇನವಕೊಂಡ, ಸಿ.ಕೆ. ನಾಗರಾಜ ನಿರ್ವಹಿಸಿದರು.