ರಾಜ್ಯ ಸರ್ಕಾರಿ ನೌಕರರ ಜತೆ ಖಂಡಿತ ಸರ್ಕಾರ ಇರುತ್ತದೆ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ

| N/A | Published : Feb 02 2025, 01:02 AM IST / Updated: Feb 02 2025, 12:27 PM IST

ರಾಜ್ಯ ಸರ್ಕಾರಿ ನೌಕರರ ಜತೆ ಖಂಡಿತ ಸರ್ಕಾರ ಇರುತ್ತದೆ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಅಧಿಕಾರಿಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಸರ್ಕಾರಿ ನೌಕರರ ಜೊತೆ ಸರ್ಕಾರ ಖಂಡಿತ ಇರುತ್ತೇವೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

 ತರೀಕೆರೆ : ಅಧಿಕಾರಿಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಸರ್ಕಾರಿ ನೌಕರರ ಜೊತೆ ಸರ್ಕಾರ ಖಂಡಿತ ಇರುತ್ತೇವೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತರೀಕೆರೆ ತಾಲೂಕು ಶಾಖೆಯಿಂದ ಪಟ್ಟಣದ ಸಪ್ತಗಿರಿ ಕನ್ವೆನ್ಷನ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ 2ನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿಎಸ್ ಷಡಾಕ್ಷರಿ ಹಾಗೂ ರಾಜ್ಯ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನೆ ಮತ್ತು ತಾಲೂಕು ಶಾಖೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಶಿಕ್ಷಣ ಇಲಾಖೆಗೆ ಹೆಚ್ಚು ಒತ್ತು ಕೊಡಲಾಗಿದೆ, ಎನ್.ಪಿ.ಎಸ್. ನಿಂದ ಓಪಿಎಸ್ ಖಂಡಿತ ಮಾಡುತ್ತೇವೆ. ನಿಮ್ಮ ಎಲ್ಲ ಬೇಡಿಕೆಗಳು ಮನಸ್ಸಿನಲ್ಲಿದೆ. ನಿಮ್ಮ ಜೊತೆ ಖಂಡಿತ ಮುಂಚೂಣಿಯಲ್ಲಿ ಇದ್ದು ನಿಮ್ಮ ಪರವಾಗಿ ಇರುತ್ತೇವೆ ಎಂದು ಹೇಳಿದರು.

ಶಾಸಕ ಜಿ. ಎಚ್. ಶ್ರೀನಿವಾಸ್ ಮಾತನಾಡಿ ಅಜ್ಜಂಪುರ ಮತ್ತು ತರೀಕೆರೆ ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆಯಾಗಿದೆ. ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ನುಡಿದಂತೆ ನಡೆಯುತ್ತಾರೆ. ಓಪಿಎಸ್ ಖಂಡಿತ ಆಗುತ್ತದೆ. ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕುಗಳಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮವಾಗಬೇಕು ಎಂದು ಹೇಳಿದರು,

 ಕರ್ನಾಟಕ ರಾಜ್ಯ ಬೆಂಗಳೂರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ. ನಿಮ್ಮ ಸಹಕಾರವೇ ನಮಗೆ ಸ್ಫೂರ್ತಿ. ಸಂಘಟನೆ ವಿಚಾರವಾಗಿ ನಾನು 24 x7 ಕೆಲಸ ನಿರ್ವಹಿಸುತ್ತೇನೆ. 30 ಸರ್ಕಾರಿ ಆದೇಶ ಮಾಡಿಸಿದ್ದೇನೆ. ಎನ್ ಪಿ ಎಸ್ ಹೋಗಿ ಓ ಪಿ ಎಸ್ ಆಗಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘ ತರೀಕೆರೆ ತಾಲೂಕು ಅಧ್ಯಕ್ಷ ಸಿ.ಆರ್. ಅನಂತಪ್ಪ ಮಾತನಾಡಿ, ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸರಕಾರಿ ನೌಕರರ ಹಿತ ಕಾಪಾಡಿದ್ದಾರೆ. ಸಂಘಟನೆಗೆ ಬಲ ತಂದಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.

ಶಿವಮೊಗ್ಗ ಕಾಡ ಅಧ್ಯಕ್ಷ ಡಾ. ಅಂಶುಮಂತ್, ಪುರಸಭಾ ಮಾಜಿ ಅಧ್ಯಕ್ಷ ಎಂ. ನರೇಂದ್ರ. ಉಪವಿಭಾಗಾಧಿಕಾರಿ ಡಾ. ಕೆ. ಜಿ. ಕಾಂತರಾಜ್ ಮತ್ತಿತರರು ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಮಾಜಿ ಪುರಸಭಾಧ್ಯಕ್ಷ ಟಿ, ಎಸ್, ಪ್ರಕಾಶ್ ವರ್ಮ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ದೇವೇಂದ್ರ, ತಹಸೀಲ್ದಾರ್ ವಿಶ್ವಜಿತ್ ಮೇಹತ, ರಾಜ್ಯ ಪರಿಷತ್ ಸದಸ್ಯ ಡಾ. ಗೋವಿಂದಪ್ಪ, ಕಾರ್ಯಾಧ್ಯಕ್ಷ ಎಂ. ಬಿ. ರಾಮಚಂದ್ರಪ್ಪ, ತಾಲೂಕು ಕಾರ್ಯದರ್ಶಿ ಡಾ. ಟಿ. ಎಂ. ದೇವರಾಜ್, ಖಜಾಂಚಿ ರೇವಣ್ಣ, ಅಜ್ಜಂಪುರ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ವಿವಿಧ ವೃಂದ ಸಂಘಗಳ ಅಧ್ಯಕ್ಷರು, ಪದಾದಿಕಾರಿಗಳು, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.1ಕೆಟಿಆರ್.ಕೆ.12ಃ

ತರೀಕೆರೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮತ್ತಿತರರು ಭಾಗವಹಿಸಿದ್ದರು.