ಅದ್ಧೂರಿ ಲಕ್ಷ್ಮಿ ಕನಕನರಸಿಂಹ ದೇವರ ರಥೋತ್ಸವ

| Published : Mar 19 2025, 12:32 AM IST

ಅದ್ಧೂರಿ ಲಕ್ಷ್ಮಿ ಕನಕನರಸಿಂಹ ದೇವರ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಸಂಜೆ ಮುಂಡರಗಿ ಪಟ್ಟಣದಲ್ಲಿ ಶ್ರೀ ಲಕ್ಷ್ಮಿ ಕನಕನರಸಿಂಹ ದೇವರ ರಥೋತ್ಸವ ಸಾವಿರಾರು ಭಕ್ತರ ಜಯ ಘೋಷಗಳೊಂದಿಗೆ ಅದ್ಧೂರಿಯಾಗಿ ಜರುಗಿತು.

ಮುಂಡರಗಿ: ಮಂಗಳವಾರ ಸಂಜೆ ಮುಂಡರಗಿ ಪಟ್ಟಣದಲ್ಲಿ ಶ್ರೀ ಲಕ್ಷ್ಮಿ ಕನಕನರಸಿಂಹ ದೇವರ ರಥೋತ್ಸವ ಸಾವಿರಾರು ಭಕ್ತರ ಜಯ ಘೋಷಗಳೊಂದಿಗೆ ಅದ್ಧೂರಿಯಾಗಿ ಜರುಗಿತು.

ಮಹಾರಥೋತ್ಸವಕ್ಕೆ ದೇವಸ್ಥಾನದ ಹಿರಿಯರಾದ ವಿ.ಎಲ್. ನಾಡಗೌಡ್ರ ಚಾಲನೆ ನೀಡಿದರು. ಈ ವೈ.ಎನ್. ಗೌಡರ್, ನಾಗೇಶ ಹುಬ್ಬಳ್ಳಿ, ನಾಗರಾಜ ಹೊಂಬಳಗಟ್ಟಿ, ಪ್ರಕಾಶ ಹಲವಾಗಲಿ,ರಾಜಾಭಕ್ಷಿ ಬೆಟಗೇರಿ, ಕೊಟ್ರೇಶ ಅಂಗಡಿ, ಬಿ.ವಿ. ಮುದ್ದಿ, ವಿಜಯಕುಮಾರ ಶಿಳ್ಳೀನ, ಮಂಜುನಾಥ ಇಟಗಿ, ಬಸವರಾಜ ದೇಸಾಯಿ, ನಾಗರಾಜ ಕೊರ್ಲಹಳ್ಳಿ, ಚಂದ್ರಶೇಖರ ಬಡಿಗೇರ, ಮಾರುತಿ ಅಬ್ಬೀಗೇರಿ, ರಾಘವೇಂದ್ರ ಕುರಿಯವರ, ಗೌತಮ್ ಚೊಪ್ರಾ, ರಾಮಚಂದ್ರ ಕಲಾಲ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.