ತಾಳಿಕೋಟೆ ಯ ಶ್ರೀ ಖಾಸ್ಗತೇಶ್ವರ ಮಠದ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಮಹಾರಥೋತ್ಸವ ಸಹಸ್ರಾರು ಭಕ್ತಸಮೂಹದ ಮಧ್ಯೆ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಮಹಾರಥೋತ್ಸವ ಸಹಸ್ರಾರು ಭಕ್ತಸಮೂಹದ ಮಧ್ಯೆ ವೈಭವದಿಂದ ಜರುಗಿತು.

ಜಾತ್ರೋತ್ಸವ ನಿಮಿತ್ತ ದಿನನಿತ್ಯ ಶ್ರೀ ಖಾಸ್ಗತೇಶ್ವರ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಶ್ರೀಮಠದ ವಿಶ್ವನಾಥ ವಿರಕ್ತಮಠ, ಮಹಾಂತಯ್ಯ ವಿರಕ್ತಮಠ ನಡೆಸಿಕೊಟ್ಟರು.

ಸೋಮವಾರ ಸಂಜೆ ಶ್ರೀ ಮಠದಿಂದ ಆರಂಭವಾದ ರಥೋತ್ಸವ ಬಸವೇಶ್ವರ ದೇವಸ್ಥಾನದವರೆಗೆ ಜರುಗಿ ಮರಳಿ ಶ್ರೀಮಠಕ್ಕೆ ತಲುಪಿತು.

ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರ ಅಧ್ಯಕ್ಷತೆಯಲ್ಲಿ ಜರುಗಿದ ಜಾತ್ರಾ ಮಹೋತ್ಸವದಲ್ಲಿ ಶ್ರೀಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ, ವಿಶ್ವನಾಥ ವಿರಕ್ತಮಠ ಅವರು ನೆತೃತ್ವ ವಹಿಸಿದ್ದರು.

ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹಾಗೂ ಮುಂಬೈ, ಪುಣೈ, ಸಾಂಗ್ಲಿ, ಮಿರೇಜ್, ಸೋಲ್ಲಾಪುರ, ಕೊಲ್ಲಾಪುರ, ಬೆಂಗಳೂರು, ಗೋವಾ ಹಾಗೂ ಹೈದ್ರಾಬಾದ್‌ ನಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.