ಸಾರಾಂಶ
ಅರಸೀಕೆರೆ ತಾಲೂಕಿನ ಬೈರಾಂಬುದಿಯ ಶ್ರೀ ಹೊಂಗ್ಯಮ್ಮ ದೇವಿ ಹಾಗೂ ಮಲ್ಲಿಗಮ್ಮ ದೇವಿಯವರ ದಸರಾ ಮಹೋತ್ಸವವು ಶುಕ್ರವಾರ ತುಂತುರು ಮಳೆಯ ನಡುವೆಯೇ ವೈಭವದಿಂದ ನೆರವೇರಿತು. ಶ್ರೀ ಚೆಲುವರಾಯಸ್ವಾಮಿಯವರ ಗಣಮಗನಾದ ಮಂಜಣ್ಣ ಬಾಳೇಕಂದ ಪೂಜೆಯನ್ನೂ, ತುಪಾಕಿ ಛೇದನವನ್ನೂ ನೆರವೇರಿಸಿದರು. ನೂರಾರು ಭಕ್ತರು ಬನ್ನಿ ಪಡೆದು ದೇವರ ದರ್ಶನ ಪಡೆದರು. ಶ್ರೀ ಚೆಲುವರಾಯಸ್ವಾಮಿ ಹಾಗೂ ದೂತರಾಯಸ್ವಾಮಿಯವರ ಕುಣಿತ ಭಕ್ತರನ್ನು ಆಕರ್ಷಿಸಿತು. ಅಂತಿಮವಾಗಿ ಮೂಲಸ್ಥಾನ ಹೊಂಗ್ಯಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ದಸರಾ ಮಹೋತ್ಸವ ಸಮಾರೋಪಗೊಂಡಿತು.
ಅರಸೀಕೆರೆ: ತಾಲೂಕಿನ ಬೈರಾಂಬುದಿಯ ಶ್ರೀ ಹೊಂಗ್ಯಮ್ಮ ದೇವಿ ಹಾಗೂ ಮಲ್ಲಿಗಮ್ಮ ದೇವಿಯವರ ದಸರಾ ಮಹೋತ್ಸವವು ಶುಕ್ರವಾರ ತುಂತುರು ಮಳೆಯ ನಡುವೆಯೇ ವೈಭವದಿಂದ ನೆರವೇರಿತುತಾಲೂಕಿನ ಬಾಣಾವಾರ ಹೋಬಳಿಯ ಬೈರಾಂಬುದಿಯ ಹೊಂಗ್ಯಮ್ಮ ದೇವಿ 12 ಹಳ್ಳಿಗಳ ಬುಡಕಟ್ಟು ದೇವಿಯಾಗಿ ಪ್ರಸಿದ್ಧಿ ಪಡೆದಿದ್ದು, ಸಹಸ್ರಾರು ಭಕ್ತರು ಮಹೋತ್ಸವಕ್ಕೆ ಆಗಮಿಸಿದ್ದರು. ಸಂಪ್ರದಾಯದಂತೆ ಹೊಂಗ್ಯಮ್ಮ ದೇವಿ, ಮಲ್ಲಿಗಮ್ಮ ದೇವಿ, ಚೆಲುವರಾಯಸ್ವಾಮಿ ಹಾಗೂ ದೂತರಾಯಸ್ವಾಮಿಗಳಿಗೆ ಸ್ವರ್ಣಾಭರಣಗಳು ಮತ್ತು ಹೂವಿನ ಅಲಂಕಾರ ಮಾಡಿ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ ಕಲ್ಯಾಣಿಯಲ್ಲಿ ಗಂಗಾ ಪೂಜೆ, ಬಿಲ್ಲು-ಬಾಣಗಳ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಹಸಿ ಫಲಾರ ನೈವೇದ್ಯ ಸಮರ್ಪಿಸಿ ಮಹಾಮಂಗಳಾರತಿ ನಡೆಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ನಂತರ ಶ್ರೀ ಚೆಲುವರಾಯಸ್ವಾಮಿಯವರ ಗಣಮಗನಾದ ಮಂಜಣ್ಣ ಬಾಳೇಕಂದ ಪೂಜೆಯನ್ನೂ, ತುಪಾಕಿ ಛೇದನವನ್ನೂ ನೆರವೇರಿಸಿದರು. ನೂರಾರು ಭಕ್ತರು ಬನ್ನಿ ಪಡೆದು ದೇವರ ದರ್ಶನ ಪಡೆದರು. ಶ್ರೀ ಚೆಲುವರಾಯಸ್ವಾಮಿ ಹಾಗೂ ದೂತರಾಯಸ್ವಾಮಿಯವರ ಕುಣಿತ ಭಕ್ತರನ್ನು ಆಕರ್ಷಿಸಿತು. ಅಂತಿಮವಾಗಿ ಮೂಲಸ್ಥಾನ ಹೊಂಗ್ಯಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ದಸರಾ ಮಹೋತ್ಸವ ಸಮಾರೋಪಗೊಂಡಿತು.ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಬೈರಾಂಬುದಿ ಹಾಗೂ ಸುತ್ತಮುತ್ತಲಿನ 12 ಹಳ್ಳಿಗಳ ಗ್ರಾಮಸ್ಥರು ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.