ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕು ಹೊಳಲು ಗ್ರಾಮದ ಶ್ರೀಬಲಮುರಿ ಗಣಪತಿ ದೇವಸ್ಥಾನದ ಆವರಣದಲ್ಲಿ ನವರಾತ್ರಿ (ದಸರಾ) ಹಬ್ಬದ ಪ್ರಯುಕ್ತ ಶ್ರೀ ದೊಡ್ಡಯ್ಯಸ್ವಾಮಿ, ಶ್ರೀಮಂತ್ರಿ ಹುಚ್ಚರಾಯಸ್ವಾಮಿ, ಶ್ರೀಚಿಕ್ಕಯ್ಯಸ್ವಾಮಿ, ಶ್ರೀಏಳೂರಮ್ಮದೇವಿ ಹಾಗೂ ಶ್ರೀಹುಚ್ಚಮ್ಮ ದೇವಿ ಐದು ದೇವರುಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು.ಉತ್ಸವದ ಅಂಗವಾಗಿ ಗ್ರಾಮದ ಮಹಿಳೆಯರು ಮಕ್ಕಳು ಹಾಗೂ ಹರಕೆ ಹೊತ್ತು ಭಕ್ತಾದಿಗಳು ದೇವರಿಗೆ ಹೂಗಳನ್ನ ಅರ್ಪಿಸಿದ ವಿವಿಧ ಹೂಗಳಿಂದ ಅಲಂಕರಿಸಿ ಹೂ ಹೊಂಬಾಳೆ ಮಾಡಿ ನಂತರ ದೇವರ ಗುಡ್ಡಪ್ಪರು, ಗಡಿಕಾರರು, ಮಡಿವಾಳ ಮಾಚಿದೇವರ ಸಮುದಾಯವರು ದೇವರಿಗೆ ವಿಷಯವಾಗಿ ಪೂಜೆ ಪುನಸ್ಕಾರ ನೆರವೇರಿಸಿ ಗ್ರಾಮದ ಶ್ರೀದೊಡ್ಡಯ್ಯ ಸ್ವಾಮಿ ಬಸವ ಸಮೇತ ಪೂಜೆ ನೆರವೇರಿಸಿದರು.
ನಂತರ ಶ್ರೀದೊಡ್ಡಮ್ಮ ತಾಯಿ ದೇವಿ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ದೇವರುಗಳ ಮೆರೆವಣಿಗೆ ನಡೆಸಲಾಯಿತು. ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಬೀದಿ ಬೀದಿಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ವಿಶೇಷವಾಗಿ ಎಲ್ಲಾ ವೃತ್ತಗಳಿಗೂ ವಿದ್ಯುತ್ ದೀಪಾಲಂಕಾರ ಹಾಗೂ ವಿವಿಧ ದೇವರುಗಳ (ಶಿವ, ಲಿಂಗ, ಗಣಪತಿ, ಲಕ್ಷ್ಮಿ) ಆರ್ಚುಗಳನ್ನು ಹಾಕಲಾಗಿತ್ತು. ನಂತರ ಗ್ರಾಮದ ರಂಗಮಂದಿರದ ಆವರಣದಲ್ಲಿ ರಾತ್ರಿಪೂರಿ ದೇವರ ಉತ್ಸವ ಜರುಗಿತು.ಈ ವೇಳೆ ಮಾಜಿ ಶಾಸಕ ಎಚ್.ಬಿ.ರಾಮು, ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, ವಕೀಲರಾದ ವಿಜಯ್ ಕುಮಾರ್, ಎಚ್.ಸಿ. ಹರಿಪ್ರಸಾದ್, ನಾರಾಯಣ, ಶ್ರೀಧರ್, ಮಂಜು, ದೊಡ್ಡೇಗೌಡ ಹೆಗ್ಗಡೆ, ಬೆಲ್ಲದ ಮಾದಪ್ಪ, ನಾರಾಯಣಪ್ಪ, ಶ್ರೀದೊಡ್ಡಯ್ಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳಾದ ಸದಾನಂದ, ಶಂಕರ್ ಪೂಜಾರಿ, ತಮ್ಮಣ್ಣ, ಹಾಗೂ ಎಚ್. ಮಲ್ಲಿಗೆರೆ, ವದೆ ಸಮುದ್ರ, ಹೊಳಲು, ಚಿಕ್ಕತಮ್ಮನಳ್ಳಿ ಗ್ರಾಮಗಳ, ಗಡಿಕಾರರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಯುವ ಮುಖಂಡರು ಹೊಳಲು ಗ್ರಾಮದ,ಸಂಘ ,ಸಂಸ್ಥೆಗಳ ಪದಾಧಿಕಾರಿಗಳು , ಅಕ್ಕ ಪಕ್ಕದ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.