ಚನ್ನಗಿರಿ ಪಟ್ಟಣದಲ್ಲಿ ಅಕ್ಟೋಬರ್ 8ರಂದು ನಡೆದ ವಿರಾಟ್ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಈ ಸಂಭ್ರಮದ ಯಶಸ್ವಿಗೆ ಸಹಕಾರ ನೀಡಿದ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಹೃತ್ಫೂರ್ವಕ ಕೃತಜ್ಞತೆಗಳು ಎಂದು ವಿರಾಟ್ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ಕೆ.ಎಚ್. ಮಂಜುನಾಥ್ ಹೇಳಿದ್ದಾರೆ.
- ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಮರ್ಪಣೆ: ಮಂಜುನಾಥ್
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದಲ್ಲಿ ಅಕ್ಟೋಬರ್ 8ರಂದು ನಡೆದ ವಿರಾಟ್ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಈ ಸಂಭ್ರಮದ ಯಶಸ್ವಿಗೆ ಸಹಕಾರ ನೀಡಿದ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಹೃತ್ಫೂರ್ವಕ ಕೃತಜ್ಞತೆಗಳು ಎಂದು ವಿರಾಟ್ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ಕೆ.ಎಚ್. ಮಂಜುನಾಥ್ ಹೇಳಿದರು.ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಗಣಪತಿ ಉತ್ಸವಗಳಿಗಿಂತಲೂ ಈ ಬಾರಿ ವಿಜೃಂಭಣೆಯಿಂದ ಗಣಪತಿ ಉತ್ಸವ ನಡೆಸಲಾಗಿದೆ. ಈ ಸಲದ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರೂ ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ. ಇದು ಹಿಂದೂ ಧರ್ಮದ ಸಂಘಟನೆಯ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ವಿ.ಎಚ್.ಪಿ- ಬಜರಂಗದಳದ ಕಾರ್ಯಕರ್ತರ 10 ದಿನಗಳ ಪರಿಶ್ರಮದಿಂದ ಚನ್ನಗಿರಿ ಪಟ್ಟಣವನ್ನು ಕೇಸರಿ ಬಣ್ಣದಿಂದ ಅಲಂಕರಿಸಲಾಗಿತ್ತು. ಎಲ್ಲರ ಸಹಕಾರ, ಪರಿಶ್ರಮದಿಂದ ಎಲ್ಲಿಯೂ ಗೊಂದಲ-ಗದ್ದಲಕ್ಕೆ ಆಸ್ಪದವಾಗಿಲ್ಲ. ನಮ್ಮ ಪೊಲೀಸ್ ಇಲಾಖೆಯವರ ಸಹಕಾರದಿಂದ ಗಣಪತಿ ಉತ್ಸವದ ಅತ್ಯಂತ ಯಶಸ್ವಿಯಾಗಿದೆ. ಈ ವರ್ಷದ ಗಣಪತಿ ಉತ್ಸವ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.ಗಣಪತಿ ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಸಂಖ್ಯೆಯ ಜನರಿಗೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ, ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳಿಗೆ ಕೊರತೆನಾಗದಂತೆ ವಿವಿಧ ಸಂಘಟನೆಗಳವರು ತಮ್ಮ ತಮ್ಮ ಸೇವೆ ಸಲ್ಲಿಸಿದ್ದಾರೆ. ಗಣಪತಿ ಪ್ರತಿಷ್ಠಾಪನೆಗೊಂಡ ದಿನದಿಂದ ವಿಸರ್ಜನಾ ದಿನದವರೆಗೂ ಪಟ್ಟಣದ ಎಲ್ಲ ಸಮಾಜದವರು ಪ್ರತಿದಿನ ಪೂಜೆ, ಪ್ರಸಾದಗಳ ವ್ಯವಸ್ಥೆ ಮಾಡಿದ್ದು, ಇದು ಹಿಂದೂ ಧರ್ಮದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಗಣಪತಿ ಉತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಣಪತಿ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ್ ಕಾಳೆ, ಪ್ರಮುಖರಾದ ರಾಜಣ್ಣ, ಚಿಕ್ಕಣ್ಣ, ರವಿಚಂದ್ರ, ಶ್ರೀನಿವಾಸ್, ಮಾರುತಿ, ಹೇಮಚಂದು ಹಾಜರಿದ್ದರು.- - -
-10ಕೆಸಿಎನ್ಜಿ1: ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.