ಮೂಡಿಗೆರೆಬಸವಣ್ಣ ವಚನಗಳ ಮೂಲಕವೇ 12ನೇ ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಅಸಮಾನತೆ. ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಜ್ಞಾನದ ಬೆಳೆಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಹೇಳಿದರು.
ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶ್ರೀ ಬಸವೇಶ್ವರ ಜಯಂತಿ
ಕನ್ನಡಪ್ರಭ ವಾರ್ತೆ ಮೂಡಿಗೆರೆಬಸವಣ್ಣ ವಚನಗಳ ಮೂಲಕವೇ 12ನೇ ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಅಸಮಾನತೆ. ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಜ್ಞಾನದ ಬೆಳೆಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಹೇಳಿದರು.
ಸೋಮವಾರ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿಯಲ್ಲಿ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿಜ್ಞರಾಗಿ ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆ ಮೂಲಕ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದರು.ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಪಾಠ ಕಳಿಸಿ ಕೊಟ್ಟ ವಿಶ್ವ ಗುರು ಬಸವಣ್ಣ ನವರ ತತ್ವ. ಆದರ್ಶ. ಚಿಂತನೆ ಇಂದಿಗೂ ನಮಗೆಲ್ಲರಿಗೂ ಪಾಠ. ಬದುಕಿಗೆ ದಾರಿ. ಈ ಮಹಾನ್ ಚೇತನರ ಜನ್ಮಜಯಂತಿಯನ್ನು ಪ್ರತಿವರ್ಷ ವೈಶಾಖ ಮಾಸದ ತೃತೀಯ ದಿನ ಅಂದರೆ ಅಕ್ಷಯ ತೃತೀಯದ ದಿನ ಆಚರಿಸಲಾಗುತ್ತದೆ ಎಂದರು.
ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಉಮಾ ಮೋಹನ್ ಮಾತನಾಡಿ, ಮೂಢ ನಂಬಿಕೆ, ಮಡಿ ಮೈಲಿಗೆ, ಮೇಲು ಕೀಳು, ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದವರು ಬಸವಣ್ಣನವರು. ದಯಯೇ ಧರ್ಮದ ಮೂಲವಯ್ಯ ಎನ್ನುತ್ತಾ ಮನುಕುಲಕ್ಕೆ ಮಾನವೀಯತೆ ಸಂದೇಶ ಸಾರಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಅನುಭವ ಮಂಟಪ ಹುಟ್ಟುಹಾಕಿದರೂ ಎಂದರು.ಗೌರವ ಟ್ರಸ್ಟಿ ಸಿ.ಸಿ.ರಾಜಣ್ಣ, ಡಿಂಪಲ್, ಗಂಗಾಧರ್, ಬಾಂಧವ್ಯ, ಪ್ರಸನ್ನ, ಅಶ್ವಿನಿ, ಮಾನ್ಯ, ಮಿಥುನ್ ಉಪಸ್ಥಿತರಿದ್ದರು.