ಸಾರಾಂಶ
ಶುಕ್ರವಾರ ಮಂಗಳೂರು ನಗರದ ರಥಬೀದಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮಾನವ ದಿನಾಚರಣೆಯನ್ನು ಉದ್ಘಾಟಿಸಿ ಕಾಸರಗೋಡು ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಪ್ರೋ.ಚೇತನ್ ಮುಂಡಾಜೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರುವಿಶ್ವ ಮಾನವರಾಗಲು ವಿದ್ಯೆಯ ಕೇಂದ್ರೀಕರಣ ಮಾತ್ರವಲ್ಲ ಸಮಗ್ರವಾದ ಜ್ಞಾನವನ್ನು ಗ್ರಹಿಸುವುದು ಮುಖ್ಯ ಎಂದು ಕಾಸರಗೋಡು ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಪ್ರೋ.ಚೇತನ್ ಮುಂಡಾಜೆ ಹೇಳಿದರು.
ಅವರು ಶುಕ್ರವಾರ ನಗರದ ರಥಬೀದಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮಾನವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕವಿತೆ, ವೈಚಾರಿಕ ಕಾದಂಬರಿ, ಮಹಾಕಾವ್ಯದಲ್ಲಿ ಸ್ಥಾಪಿತವಾದ ಚಿಂತನೆಗೆ ಹೊಸ ರೂಪವನ್ನು ನೀಡಿದರು. ಕೃಷಿ ಸದೃಶವಾದ ಬರವಣಿಗೆಯಲ್ಲಿ ಕುವೆಂಪು ಅನ್ನು ರಸ ಋಷಿ ಕವಿ ಎಂದು ಕರೆಯಲಾಗುತ್ತದೆ. ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಸಾರ್ವಕಾಲಿಕವಾಗಿದೆ ಎಂದು ಹೇಳಿದರು.ರಥಬೀದಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಾರತಿ ಬಾಯಿ ಅಧ್ಯಕ್ಷತೆ ವಹಿಸಿ,ನಾವು ವಿಶಾಲ ಮನಸ್ಸಿನವರಾಗಬೇಕು. ತಮ್ಮ ಬದುಕಿನಲ್ಲಿ ಕುವೆಂಪು ಅವರ ಜೀವನ ಚರಿತ್ರೆ ಆದರ್ಶನಗಳನ್ನು ನಾವು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಸಾಹಿತ್ಯದ ಓದುವಿಕೆ ಮನಸ್ಸನ್ನು ಬೆಳೆಸುತ್ತದೆ ವೈಚಾರಿಕ ಲೇಖನಗಳ ವಿಷಯ ನಮ್ಮ ಚಿಂತನಾ ಶೀಲತೆಯನ್ನು ಬೆಳೆಸುತ್ತದೆ ಎಂದರು.ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು. ಪ್ರದೀಪ್ ಹಾವಂಜೆ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.