ವಿಶ್ವದಲ್ಲಿ ಶ್ರೇಷ್ಠವಾದದ್ದು ಭಾರತ ಸಂವಿಧಾನ

| Published : Nov 27 2024, 01:04 AM IST

ಸಾರಾಂಶ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕುರುಗೋಡು: ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ದಿನಾಚರಣೆ ಆಚರಿಸಲಾಯಿತು.

ತಾಲ್ಲೂಕು ಕಚೇರಿ, ಪುರಸಭೆ ಸಿಬ್ಬಂದಿ ಮತ್ತು ವಿವಿಧ ಶಾಲೆ ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಮುಖ್ಯವೃತ್ತದಲ್ಲಿ ಸಮಾವೇಶಗೊಂಡು ಸಾಮೂಹಿಕವಾಗಿ ಪೀಠಿಯನ್ನು ಓದುವ ಮೂಲಕ ಸಂವಿಧಾನಕ್ಕೆ ಗೌರವ ಸಮರ್ಪಿಸಿದರು.ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿ ಶ್ರೇಷ್ಠ ಮತ್ತು ಅತಿದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ನರಸಪ್ಪ, ಮಾತನಾಡಿ, ಸಂವಿಧಾನ ಪೀಠಿಕೆ ನಮ್ಮದೇಶದ ಭವಿಷ್ಯದಜೀವನದ ವಿಧಾನವಾಗಿದೆ.ಸ್ವಾತಂತ್ರ, ಸಮಾನತೆ, ಹಾಗೂ ಸಂವಿಧಾನದ ಮೌಲ್ಯಗಳನ್ನು ಎಲ್ಲರೂಎತ್ತಿ ಹಿಡಿಯಬೇಕುಎಂದರು.

ನಮ್ಮ ಭಾರತದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಈ ಸಂವಿಧಾನದ ಭದ್ರ ಬುನಾದಿಯ ಮೇಲೆ ನಿಂತಿದೆ. ವಿಶ್ವದಲ್ಲಿಯೇ ಶ್ರೇಷ್ಠವಾದ ಹಾಗೂ ಮಹಾನ್ಗ್ರಂಥವನ್ನುಅ೦ಬೇಡ್ಕರ್ಅವರು ರಚಿಸಿದ ಸಂವಿಧಾನ ವಾಗಿದೆ. ಈ ಗ್ರಂಥವು ನಮ್ಮದೇಶಕ್ಕೆ ಮಾದರಿಯಾಗಿದೆ. ಆದ್ದರಿಂದ ನ.೨೬ ರಂದು ಭಾರತದೇಶವೇ ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಲಾಗುತ್ತಿದೆಎಂದು ತಿಳಿಸಿದರು.

ಗ್ರೇಡ್-೨ ತಹಶೀಲ್ದಾರ್ ಮಲ್ಲೇಶಪ್ಪ, ಶಿರಸ್ತೇದಾರ್ ರಾಜಶೇಖರ, ವಿಜಯಕುಮಾರ್, ಕಂದಾಯ ನಿರೀಕ್ಷ ಸುರೇಶ್ ಮತ್ತು, ಟಿ.ಸಿದ್ದಪ್ಪ,. ಪ್ರಾಂಶುಪಾಲರು ರಾಮಕೃಷ್ಣಪ್ಪ ಮೇಲ್ವಿಚಾರಕ್ಕೆ ಕಾಳಮ್ಮ. ಗ್ರಾಮ ಲೆಕ್ಕಾಧಿಕಾರಿಗಳಾದ ಯಮನೂರಪ್ಪ, ಭದ್ರಯ್ಯ, ಇದ್ದರು.

ಕುರುಗೋಡು ಮುಖ್ಯವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಸಂವಿಧಾನ ದಿನಾಚರಣೆ ಆಚರಿಸಲಾಯಿತು.