ವಚನ ಸಾಹಿತ್ಯ ಶರಣರ ಸರ್ವಶ್ರೇಷ್ಠ ಕೊಡುಗೆ: ಹನುಮಂತಗೌಡ ಗೊಲ್ಲರ

| Published : Jul 30 2025, 12:49 AM IST

ವಚನ ಸಾಹಿತ್ಯ ಶರಣರ ಸರ್ವಶ್ರೇಷ್ಠ ಕೊಡುಗೆ: ಹನುಮಂತಗೌಡ ಗೊಲ್ಲರ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ತತ್ವಾದರ್ಶಗಳಿಗೆ ಮನಸೋತು ದೇಶದ ನಾನಾ ಕಡೆಯಿಂದ ಶರಣರು ಕಲ್ಯಾಣಕ್ಕೆ ಆಗಮಿಸಿ ಶರಣ ಧರ್ಮವನ್ನು ಸ್ವೀಕರಿಸಿ ನಡೆ- ನುಡಿಗಳು ಒಂದಾದ ಸಾರ್ಥಕ ಜೀವನವನ್ನು ನಡೆಸಿ ಸರ್ವ ಜನಾಂಗದ ಹಾಗೂ ಮಹಿಳಾ ಸಮಾನತೆಯೊಂದಿಗೆ ಸರ್ವಶ್ರೇಷ್ಠ ವಚನ ಸಾಹಿತ್ಯವನ್ನು ಕೊಡ ಮಾಡಿದರು.

ಹಾವೇರಿ: 12ನೇ ಶತಮಾನದಲ್ಲಿ ಬಸವಣ್ಣವರು ಕೈಗೊಂಡ ಸಮಾಜೋಧಾರ್ಮಿಕ ಚಳವಳಿ ಹಾಗೂ ಸಮ ಸಮಾಜದ ನಿರ್ಮಾಣದ ಕಾರ್ಯ ಇಂದಿಗೂ ಸ್ಮರಣೀಯವಾಗಿದೆ ಎಂದು ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ಹನುಮಂತಗೌಡ ಗೊಲ್ಲರ ತಿಳಿಸಿದರು.ಸ್ಥಳೀಯ ಶಿವಾಜಿನಗರದ ವಿ.ಜಿ. ಯಳಗೇರಿ ಅವರ ಮನೆಯಲ್ಲಿ ಬಸವ ಬಳಗ ಮತ್ತು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಸವಣ್ಣನವರ ತತ್ವಾದರ್ಶಗಳಿಗೆ ಮನಸೋತು ದೇಶದ ನಾನಾ ಕಡೆಯಿಂದ ಶರಣರು ಕಲ್ಯಾಣಕ್ಕೆ ಆಗಮಿಸಿ ಶರಣ ಧರ್ಮವನ್ನು ಸ್ವೀಕರಿಸಿ ನಡೆ- ನುಡಿಗಳು ಒಂದಾದ ಸಾರ್ಥಕ ಜೀವನವನ್ನು ನಡೆಸಿ ಸರ್ವ ಜನಾಂಗದ ಹಾಗೂ ಮಹಿಳಾ ಸಮಾನತೆಯೊಂದಿಗೆ ಸರ್ವಶ್ರೇಷ್ಠ ವಚನ ಸಾಹಿತ್ಯವನ್ನು ಕೊಡ ಮಾಡಿದರು ಎಂದರು. ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಶ್ರಾವಣ ಮಾಸದ ಒಂದು ತಿಂಗಳವರೆಗೆ ಹಾವೇರಿ ನಗರದ ಆಸಕ್ತರ ಮನೆಗಳಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ದೇಶ ಮತ್ತು ಶರಣರ ವಚನ ಸಾಹಿತ್ಯದ ಶ್ರೇಷ್ಠತೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮುರಿಗೆಪ್ಪ ಕಡೆಕೊಪ್ಪ, ಶಿವಯೋಗಿ ಬೆನ್ನೂರ, ಉಳಿವೆಪ್ಪ ಪಂಪಣ್ಣವರ, ನಾಗಪ್ಪ ಹಾವೇರಿ, ಗಂಗಣ್ಣ ಮಾಸೂರ, ಎನ್.ಬಿ. ಕಾಳೆ, ಚಂದ್ರಶೇಖರ ಮಾಳಗಿ, ನಾಗರಾಜ ಇಚ್ಚಂಗಿ, ಬಸವರಾಜ ಕೋರಿ, ನಾಗೇಂದ್ರಪ್ಪ ಮಂಡಕ್ಕಿ, ಶಿವಾನಂದ ಹೊಸಮನಿ, ಆರ್.ವಿ. ಹೆಗಡಾಳ, ಬಸವರಾಜ ಮುಳಗುಂದ, ಬಸವರಾಜ ಬೆಲ್ಲದ, ಪ್ರಭುಗೌಡ ಬಸನಗೌಡ, ಪರಿಮಳ ಜೈನ್, ಸುಮಂಗಲ ಯಳಗೇರಿ ಇತರರು ಇದ್ದರು. ಕಾವ್ಯ ಅಂಗಡಿ ವಚನ ಪ್ರಾರ್ಥಿಸಿದರು. ದಯಾನಂದ ಉಳ್ಳಾಗಡ್ಡಿ ಸ್ವಾಗತಿಸಿದರು. ಚೇತನ್ ಯಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವ ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ, ಜಗದೀಶ ಹತ್ತಿಕೋಟಿ ನಿರೂಪಿಸಿದರು. ಶಿವಬಸಪ್ಪ ಮುದ್ದಿ ವಂದಿಸಿದರು.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹಾವೇರಿ: ಆತ್ಮ ಯೋಜನೆಯಡಿ ಜಿಲ್ಲೆಯ ರೈತರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ(ಹಸಿರು ಮನೆ, ಕಸಿ ಅಭಿವೃದ್ಧಿ, ಸಸ್ಯಕಾಶಿ ಇತ್ಯಾದಿ), ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳಲ್ಲಿ(ಸಮಗ್ರ ಕೃಷಿಯಲ್ಲಿ ನಿರತರಾಗಿರುವ) ಪಾಲ್ಗೊಳ್ಳುವರಿಗೆ ಪ್ರಶಸ್ತಿ ನೀಡಲಾಗುತ್ತದೆ.ಅವಧಿ ಮೀರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಶಸ್ತಿಗೆ ಸಂಬಂಧಿತ ಹೆಚ್ಚಿನ ಮಾಹಿತಿಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ನಮೂದಿಸಲಾಗಿದ್ದು, ಅರ್ಜಿ ನಮೂನೆಗಳನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.