ಮನುಷ್ಯನು ಮನುಷ್ಯನಿಗೆ ನೀಡಬಹುದಾದ ಅತಿದೊಡ್ಡ ಕೊಡುಗೆ

| Published : Sep 08 2025, 01:00 AM IST

ಮನುಷ್ಯನು ಮನುಷ್ಯನಿಗೆ ನೀಡಬಹುದಾದ ಅತಿದೊಡ್ಡ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತದಾನವು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಕಾರ್ಯವಾಗಿದ್ದು, ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಹಾಗೂ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅರುಣ್‌ ಕುಮಾರ ಹೇಳಿದರು. ರಕ್ತದಾನದಿಂದ ನಮ್ಮ ಆರೋಗ್ಯಕ್ಕೂ ಸಹಾಯಕವಾಗಿದ್ದು, ನಮ್ಮ ದೇಹದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಹೊರಹಾಕಿ ಹೊಸ ರಕ್ತದ ಉತ್ಪತ್ತಿಯಾಗುತ್ತದೆ ಮತ್ತು ಹೃದಯಘಾತ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ

ರಕ್ತದಾನವು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಕಾರ್ಯವಾಗಿದ್ದು, ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಹಾಗೂ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅರುಣ್‌ ಕುಮಾರ ಹೇಳಿದರು. ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಭಾರತಿಯ ರೆಡ್‌ಕ್ರಾಸ್, ಮೈಸೂರಿನ ನಾರಾಯಣ ಆಸ್ಪತ್ರೆ, ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆ, ಚನ್ನರಾಯಪಟ್ಟಣದ ಸ್ವಯಂಪ್ರೇರಿತ ರಕ್ತ ಕೇಂದ್ರ, ಗ್ರಾಮ ಪಂಚಾಯ್ತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ರಕ್ತದಾನ ಜೀವ ದಾನವಾಗಿದ್ದು, ಇದು ಮನುಷ್ಯನು ಮನುಷ್ಯನಿಗೆ ನೀಡಬಹುದಾದ ಅತಿದೊಡ್ಡ ಕೊಡುಗೆಯಾಗಿದೆ. ಅನೇಕ ಅಪಘಾತ ಸಂದರ್ಭಗಳಲ್ಲಿ ಗಾಯಗೊಂಡ ಅಥವಾ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವ ರೋಗಿಗಳ ಜೀವ ರಕ್ಷಣೆ ಮಾಡಲು ಸಹಕಾರಿಯಾಗುವುದರ ಜತೆಗೆ ಅವಶ್ಯಕ ಸಮಯದಲ್ಲಿ ಜೀವನದ ಆಶಾಕಿರಣ ಒದಗಿಸುತ್ತದೆ. ರಕ್ತದಾನದಿಂದ ನಮ್ಮ ಆರೋಗ್ಯಕ್ಕೂ ಸಹಾಯಕವಾಗಿದ್ದು, ನಮ್ಮ ದೇಹದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಹೊರಹಾಕಿ ಹೊಸ ರಕ್ತದ ಉತ್ಪತ್ತಿಯಾಗುತ್ತದೆ ಮತ್ತು ಹೃದಯಘಾತ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ ಎಂದು ಹೇಳಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಫ್ತಾಬ್ ಪಾಷಾ ಮಾತನಾಡಿ, ರಕ್ತದಾನವು ಜನರ ನಡುವೆ ಸಹಕಾರ ಭಾವನೆಯ ಮೂಲಕ ಸಮಾಜದಲ್ಲಿ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಇಂತಹ ಕಾರ್ಯಕ್ರಮಗಳು ಯುವಜನತೆಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶೀಬಿರಗಳನ್ನು ನಡೆಯುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪುಷ್ಠಿ ನೀಡುತ್ತವೆ. ಮುಂದೆಯೂ ಇಂತಹ ಶಿಬಿರಗಳನ್ನು ಹೆಚ್ಚಾಗಿ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.ಶಿಬಿರದಲ್ಲಿ ಹೃದಯ ಸಂಬಂಧಿತ ಇಸಿಜಿ, ಬಿಪಿ, ಶುಗರ್, ಕಣ್ಣು ಪರೀಕ್ಷೆ, ಕೀಲು ಮತ್ತು ಮೂಳೆ ತಪಾಸಣೆ, ಪ್ರಸೂತಿ ಮತ್ತು ಸ್ತ್ರೀ ರೋಗ ಹಾಗೂ ಇತರೆ ಖಾಯಿಲೆಯ ಸಂಬಂದಿಸಿದಂತೆ ಸುಮಾರು ೨೮೩ ಜನರ ತಪಾಸಣೆ ಮಾಡಲಾಯಿತು ಹಾಗೂ ೪೧ ಜನ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಯ್ತಿ ಮಾಜಿ ಅಧ್ಯಕ್ಷರಾದ ಶರತ್‌ ಕುಮಾರ್, ಎಸ್.ಟಿ.ಮಹೇಶ್, ಎಸ್.ಆರ್.ಲೋಕೆಶ್, ಭಾರತಿ ಚಂದ್ರೇಗೌಡ, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಅಶೋಕ್, ಸುಕುಮಾರ್, ಗೋವಿಂದರಾಜ್, ನಾಗೇಂದ್ರ, ರಂಗಸ್ವಾಮಿ, ಡೋಲಿ ಅಶೋಕ್, ನವೀನ್, ಧರ್ಮರಾಜ್, ಸೋಮೇಶ್, ಸ್ವಯಂಪ್ರೇರಿತ ರಕ್ತ ಕೇಂದ್ರ ಮುಖ್ಯಸ್ಥ ಎಚ್.ಜಿ. ಭರತ್‌ ಕುಮಾರ್, ನಾರಾಯಣ ಆಸ್ಪತ್ರೆಯ ಡಾ. ಜೀವನ್, ಡಾ. ಸಂಸದ, ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ಡಾ. ಸಂದೀಪ್ ಹಾಗೂ ಆಪ್ತ ಸಮಾಲೋಚಕ ಎಸ್.ಮಹಾದೇವ್ ಇದ್ದರು.