ಮಾವಿನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿಯ ಏಳನೇ ವರ್ಷದ ವಾರ್ಷಿಕೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಮಾನವೀಯತೆಯಲ್ಲಿ ನಂಬಿಕೆ ವಿಶ್ವಾಸಗಳನ್ನು ಯಾವತ್ತು ಕಳೆದುಕೊಳ್ಳಬಾರದು ಸಂಕಷ್ಟಗಳನ್ನು ಎದುರಿಸಿದ ಮನುಷ್ಯ ಜೀವನದಲ್ಲಿ ಯಶಸ್ಸು ಕಾಣುತ್ತಾನೆ ರೈತರ ಬಾಳ ಬದುಕಿನಲ್ಲಿ ಹೊಸ ಬೆಳಕು ಮೂಡಲಿ ಈ ಯುಗಾದಿಯ ಪರಬನಾಮ ಸಂವತ್ಸರ ದಲ್ಲಿ ಮಂಗಳ ಕಾರ್ಯಗಳು ಹೆಚ್ಚು ನಡೆಯುತ್ತವೆ ಸುಳ್ಳು ನಿಲ್ಲಲ್ಲ ಅಡಗುತ್ತದೆ ಸತ್ಯ ಉಳಿಯುತ್ತದೆ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಮಾನವ ಜೀವನ ಉತ್ಕೃಷ್ಟವಾದದು. ಅರಿವು ಆಚಾರಗಳ ಪ್ರಜ್ಞೆ ಬೇಕು. ಅರಿವಿನ ದಾರಿಯಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ಕೆರಗೋಡಿ ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಹೋಬಳಿಯ ಜೆ. ಮಾವಿನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿಯ ಏಳನೇ ವರ್ಷದ ವಾರ್ಷಿಕೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಮಾನವೀಯತೆಯಲ್ಲಿ ನಂಬಿಕೆ ವಿಶ್ವಾಸಗಳನ್ನು ಯಾವತ್ತು ಕಳೆದುಕೊಳ್ಳಬಾರದು ಸಂಕಷ್ಟಗಳನ್ನು ಎದುರಿಸಿದ ಮನುಷ್ಯ ಜೀವನದಲ್ಲಿ ಯಶಸ್ಸು ಕಾಣುತ್ತಾನೆ ರೈತರ ಬಾಳ ಬದುಕಿನಲ್ಲಿ ಹೊಸ ಬೆಳಕು ಮೂಡಲಿ ಈ ಯುಗಾದಿಯ ಪರಬನಾಮ ಸಂವತ್ಸರ ದಲ್ಲಿ ಮಂಗಳ ಕಾರ್ಯಗಳು ಹೆಚ್ಚು ನಡೆಯುತ್ತವೆ ಸುಳ್ಳು ನಿಲ್ಲಲ್ಲ ಅಡಗುತ್ತದೆ ಸತ್ಯ ಉಳಿಯುತ್ತದೆ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರು.

ಹಸಿರು ಕ್ರಾಂತಿ ಮಾಡಲು ತಾಲೂಕಿನ 100 ಕೆರೆಗಳಿಗೆ ಹೇಮಾವತಿ ನದಿಯ ಗಂಗಾಜಲವನ್ನು ಹರಿಸಿ ತುಂಬಿಸಲು ಶ್ರಮಿಸಿರುವ ಶಾಸಕ ಬಾಲಕೃಷ್ಣ ಅವರಿಗೆ ಮುಂದಿನ ದಿನಗಳಲ್ಲಿ ಮಂತ್ರಿಗಳಾಗುವ ಯೋಗವಿದೆ ನಿಮ್ಮ ಪ್ರೀತಿ, ವಿಶ್ವಾಸ ಅವರ ಮೇಲಿರಲಿ ಎಂದರು. ಬೇರೆ ತಾಲೂಕುಗಳಿಗಿಂತಲೂ ಚನ್ನರಾಯಪಟ್ಟಣ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಲು ಶಾಸಕರು ಮುಂದಾಗಿದ್ದಾರೆ ಎಂದು ಅವರ ಅಭಿವೃದ್ಧಿ ಕೆಲಸಗಳನ್ನು ಶ್ಲಾಘಿಸಿದರು.

ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ ತೋಟಿ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರಕ್ಕೆ 11 ಕೋಟಿ ರು. ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಲಾಗಿದೆ. ಮುಂದಿನ ಹಂಗಾಮಿಗೆ 900 ಮೀಟರ್ ಉಳಿದ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು. ಅಕ್ಕನಹಳ್ಳಿ ವೃತ್ತದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಈ ಭಾಗದ ರೈತರಿಗೆ 15 ಕೋಟಿ ರು. ರಿಯಾಯಿತಿ ಸಾಲ ನೀಡಲಾಗಿದೆ ಎಂದು ತಿಳಿಸಿದರು. ಶಾಸಕನಾಗಿ 13 ವರ್ಷದಿಂದ ಯಾವುದೇ ದ್ವೇಷ ಅಸೂಯೆ ಇಲ್ಲದೆ ತಾಲೂಕಿನ ಅಭಿವೃದ್ಧಿಗೆ ಕಂಕಣ ಬದ್ಧವಾಗಿ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದೇನೆ ಎಂದರು. ಮಾವಿನಹಳ್ಳಿ ಗ್ರಾಮದ ರಸ್ತೆ ಹಾಗೂ ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿ, ಹೆಸರಿನ ಸಮುದಾಯ ಭವನ ಮಾಡಿಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಅಕ್ಕನಹಳ್ಳಿ ಕುಮಾರಸ್ವಾಮಿಜಿ, ಟಿಎಪಿಸಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಎಂ. ಮಧು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಎನ್. ಆರ್. ಕೃಪಾಶಂಕರ್, ಮುಖಂಡರಾದ ತಿಪಟೂರು ಮಧುಸೂದನ್, ಎಂ. ಎಸ್. ಸುರೇಶ್, ಎಂ. ಎಸ್. ರಾಜು, ನವೀನ್, ಡೇರಿ ನಾಗರಾಜ್, ಗನ್ನಿ ಕುಮಾರ್, ವಿಶ್ವನಾಥ್, ಸೋಮಶೇಖರ್, ಎಸ್. ಜಿ. ಚಿರಂಜೀವಿ, ಮರಿಶೆಟ್ಟಿಹಳ್ಳಿ ಸತೀಶ್, ಅಕ್ಕನಹಳ್ಳಿ ದಯಾನಂದ್, ಆನಂದ್, ಗಂಗಣ್ಣ, ಮುಳ್ಕೆರೆ ಗಿರೀಶ್, ಪಂಚಾಕ್ಷರಿ, ಈಶ್ವರಪ್ಪ, ರೇಣುಕಪ್ಪ, ಅಪ್ಪಾಜಿಗೌಡ, ಸಿದ್ದರಾಮಪ್ಪ, ಅಕ್ಕನಹಳ್ಳಿ ದಯಾನಂದ್, ರಾಜಪ್ಪ, ರಮೇಶ್, ಸೌಪರ್ಣಿಕಾ ಸುರೇಶ್, ಚಂದನ್ ಸುರೇಶ್, ಅನಿಲ್ ಕುಮಾರ್, ಇತರರು ಹಾಜರಿದ್ದರು.