ಸಾರಾಂಶ
ಇಂದು ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಉತ್ತಮ ಶಿಕ್ಷಣ ಪಡೆದು ರಾಜಕೀಯ, ಸಾಹಿತ್ಯ, ಶಿಕ್ಷಣ, ಅಂತರೀಕ್ಷೆ, ಸಾಮಾಜಿಕ, ಆರ್ಥಿಕವಾಗಿ ಪ್ರತಿ ರಂಗದಲ್ಲಿಯೂ ಸಾಧನೆ ತೋರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಕುಷ್ಟಗಿ:
ತೊಟ್ಟಿಲು ತೂಗುವ ಕೈ ಜಗವ ತೂಗಬಲ್ಲದು ಎನ್ನುವುದಕ್ಕೆ ಅನೇಕ ಸಾಧಕಿಯರು ನಮ್ಮ ಮಧ್ಯೆ ಇದ್ದಾರೆಂದು ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ ಹೇಳಿದರು.ತಾಲೂಕಿನ ದೋಟಿಹಾಳದ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ಶ್ರೀದಯಾನಂದಪುರಿ ಸಾಂಸ್ಕೃತಿಕ ಸಂಘ, ಗಾಯಿತ್ರಿ ಮಹಿಳಾ ಸಂಘದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೀಮಂತ ಕಾರ್ಯಕ್ರಮ, ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಅಭಿನವ ಗವಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇಂದು ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಉತ್ತಮ ಶಿಕ್ಷಣ ಪಡೆದು ರಾಜಕೀಯ, ಸಾಹಿತ್ಯ, ಶಿಕ್ಷಣ, ಅಂತರೀಕ್ಷೆ, ಸಾಮಾಜಿಕ, ಆರ್ಥಿಕವಾಗಿ ಪ್ರತಿ ರಂಗದಲ್ಲಿಯೂ ಸಾಧನೆ ತೋರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಇನ್ನರ್ ವೀಲ್‌ಕ್ಲಬ್ ಮಾಜಿ ಅಧ್ಯಕ್ಷೆ ಶಾರದಾ ಶೆಟ್ಟರ್ ಮಾತನಾಡಿ, ನಾಡಿನ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಗರ್ಭಿಣಿಯರಿಗೆ ಸೀಮಂತ, ಸಾಧಕಿಯರ ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ಮಹಿಳೆಯರು ಉತ್ತಮ ಶಿಕ್ಷಣ ಪಡೆದು ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಮುಖ್ಯಪಾತ್ರ ವಹಿಸಬೇಕು ಎಂದರು.
ಪ್ರಶಸ್ತಿ ಪುರಸ್ಕೃತರು:ಮಾಲತಿ ನಾಯಕ, ಶ್ರೀದೇವಿ ನಿಡಗುಂದಿ, ಸರಸ್ವತಿ ದಾವಣಗೆರೆ, ಮಮತಾ ಮೇಟಿ, ಸವಿತಾ ಕೂಡ್ಲೂರು, ನಾಗರತ್ನ ಗಂಗಾವತಿ, ಶೋಭಾ ಪುರ್ತಗೇರಿ, ಉಮಾದೇವಿ ಪೋಲಿಸಪಾಟೀಲ, ರಜಿಯಾ ಬೇಗಂ ಬನ್ನು, ಗುರುಬಾಯಿ ಪತ್ತಾರ ಅವರಿಗೆ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ಕೆ.ವೈ. ಕಂದಕೂರ, ಹನುಮಂತಪ್ಪ ಈಟಿಯವರ, ಸಿದ್ರಾಮಪ್ಪ ಅಮರಾವತಿ, ರವೀಂದ್ರಸಾ ಬಾಕಳೆ, ಮಲ್ಲಯ್ಯ ಕೋಮಾರಿ, ಶ್ರೀನಿವಾಸ ಜಹಗೀದಾರ, ರವೀಂದ್ರ ನಂದಿಹಾಳ, ಮಲ್ಲನಗೌಡ ಅಗಸಿಮಂದಿನ, ಹನುಮಂತ ಪೂಜಾರಿ, ತಿಮ್ಮನಟ್ಟೆಪ್ಪ ಹೊಸಮನಿ, ಮಹೇಶ ನೆರೆಬೆಂಚಿ ಅವರಿಗೆ ಅಭಿನವ ಗವಿಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ದಲಾಲಿ ವರ್ತಕ ಲಾಡಸಾಬ್ ಕೊಳ್ಳಿ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿದರು. ಚಂದ್ರಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ರಾಜೇಸಾಬ್ ಯಲಬುರ್ಗಿ, ಶರಣಪ್ಪ ಗೋತಗಿ, ರಾಘವೇಂದ್ರ ಕುಂಬಾರ, ಸಿದ್ರಾಮಪ್ಪ ಅಮರಾವತಿ, ಮಂಜೂರುಅಲಿ ಬನ್ನು, ಡಾ. ಸಂತೋಷ ಬಿರಾದಾರ, ಪದ್ಮಾವತಿ ಕುಂಬಾರ, ಗಾಯತ್ರಿ ಕುದರಿಮೋತಿ, ಶೋಭಾ ಕಿರಗಿ, ರುಕ್ಮಿಣಿ ನಾಗಶೆಟ್ಟಿ, ಶಂಕ್ರಮ್ಮ ಕೊಳ್ಳಿ, ನಾಗರಾಜ ಕಾಳಗಿ, ಮಲ್ಲಿಕಾರ್ಜುನ ಕಿರಗಿ, ದೇವಮ್ಮ ಗೌಡರ ಇದ್ದರು.