ಸಾರಾಂಶ
ದೇವರದಾಸಿಮಯ್ಯನವರ ಆದರ್ಶ ಬದುಕು ಮನುಕುಲಕ್ಕೆ ದಾರಿದೀಪ. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಮೈಂದರಗಿ ಗುರು ಹಿರೇಮಠದ ಶ್ರೀ ಷ.ಬ್ರ.ಅಭಿನವ ರೇವಣಸಿದ್ಧ ಪಟ್ಟದೇವರು ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ದೇವರದಾಸಿಮಯ್ಯನವರ ಆದರ್ಶ ಬದುಕು ಮನುಕುಲಕ್ಕೆ ದಾರಿದೀಪ. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಮೈಂದರಗಿ ಗುರು ಹಿರೇಮಠದ ಶ್ರೀ ಷ.ಬ್ರ.ಅಭಿನವ ರೇವಣಸಿದ್ಧ ಪಟ್ಟದೇವರು ಹೇಳಿದರು.ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ನಡೆದ ದೇವರ ದಾಸಿಮಯ್ಯನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾತನಾಡಿ, ಹೊಸ ಸಾಹಿತ್ಯ ಪ್ರಕಾರಕ್ಕೆ ಹೊಸ ಆಯಾಮಗಳನ್ನು ತೋರಿಸಿದವರು ದಾಸಿಮಯ್ಯ ಎಂದರು.ನಂತರ ಮಾತನಾಡಿದ ಬ್ರಹ್ಮ ವಿದ್ಯಾಶ್ರಮ ಸಿದ್ಧಾರೂಢ ಮಠದ ಸಹಜಾನಂದ ಸ್ವಾಮೀಜಿ ದೇವರ ದಾಸಿಮಯ್ಯನವರು ಜಗತ್ತಿನ ಪ್ರಥಮ ವಚನಕಾರ ಎಂದು ಗುರುತಿಸಲ್ಪಟ್ಟಿದ್ದಾರೆ. ಅವರು ನೇಕಾರ ಸಮುದಾಯದ ಸೂರ್ಯನಿದ್ದಂತೆ. ಅವರ ಬೆಳಕು ಸಮುದಾಯದ ಮೇಲೆ ನಿರಂತರ ಬೀಳುತ್ತಿರಬೇಕು. ದಾಸಿಮಯ್ಯ ನಡೆಸುತ್ತಿದ್ದ ಶಿವಕಾರುಣ್ಯ ಗೋಷ್ಠಿಗಳು ಮುಂದೆ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪ ದಂತಹ ಲೋಕಪ್ರಿಯ ವಿಚಾರಗೋಷ್ಠಿಗಳು ರೂಪುಗೊಳ್ಳಲು ಕಾರಣವಾಯಿತು. ದಾಸಿಮಯ್ಯ ಆರಂಭಿಸಿದ ಧಾರ್ಮಿಕ, ಸಾಮಾಜಿಕ ಸುಧಾರಣೆಗಳು ಮುಂದೂವರಿದು ಬಸವಣ್ಣ ಮತ್ತು ಸಮಕಾಲೀನ ಶರಣರ ಕಾಲದಲ್ಲಿ ಸಮಸಮಾಜದ ನಿರ್ಮಾಣಕ್ಕೆ ಬುನಾದಿಯಾದವು ಎಂದರು ಹೇಳಿದರು.
ಮರೆಗುದ್ದಿಯ ಪಪೂ ಡಾ.ನಿರುಪಾಧೀಶ್ವರ ಮಹಾಸ್ವಾಮಿಗಳು ಮೂರ್ತಿಗೆ ಪ್ರಾಣ ಪ್ರತಿಷ್ಠೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಯಲ್ಲಣ್ಣಗೌಡ ಪಾಟೀಲ, ಸಜ್ಜನಸಾಬ ಪೆಂಡಾರಿ, ನಾರಾಯಣ ಕಿರಗಿ, ಶ್ರೀಶೈಲಪ್ಪ ಬಾಡನವರ, ಮಲ್ಲಪ್ಪ ಭಾವಿಕಟ್ಟಿ, ಡಾ. ಬಿ.ಡಿ.ಸೋರಗಾಂವಿ, ಬಿ.ವಿ.ಕೆರೂರ, ಹಣಮಂತ ಬಡಿಗೇರ, ರಾಜು ಚಮಕೇರಿ, ಶಿವಲಿಂಗ ಟಿರ್ಕಿ, ಮಹಾಲಿಂಗ ದಡೂತಿ, ರಾಜೇಶ ಭಾವಿಕಟ್ಟಿ, ಬಿ.ಸಿ.ಪೂಜಾರಿ, ಮಲ್ಲಪ್ಪ ಸೋರಗಾಂವಿ, ಶಂಕರೆಪ್ಪಾ ಹಣಗಂಡಿ, ಶ್ರೀಶೈಲ ಬಾಳಿಗಿಡದ, ಚಂದ್ರು ಕಾಗಿ, ಶ್ರೀಶೈಲ ಕಿರಗಟಗಿ, ಪ್ರಭು ಬೆಳಗಲಿ, ಮಹಾಲಿಂಗಪ್ಪ ದಡೂತಿ ಶಂಕರ ಹಿಕಡಿ, ಲಕ್ಕಪ್ಪ ಚಮಕೇರಿ, ಶಿವಾನಂದ ಕಿತ್ತೂರ, ಶಂಕರ ಯಾದವಾಡ, ಮಹಾದೇವ ಚೆಮಕೇರಿ, ಅಲ್ಲಪ್ಪಾ ಹುನ್ನೂರ, ಮಹಾಲಿಂಗ ಬುದ್ನಿ ಸೇರಿದಂತೆ ಹಲವರುಇದ್ದರು. ಗುರುಪಾದ ಅಂಬಿ ನಿರೂಪಿಸಿ, ವಂದಿಸಿದರು.