ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ವಿರೋಧಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ 78 ದಿನಕ್ಕೆ ಕಾಲಿಟ್ಟಿದ್ದು, ಅಖಂಡ ರೈತ ಸಂಘಟನೆಯ ನಾಯಕರು ಬೆಂಬಲ ಸೂಚಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ವಿರೋಧಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ 78 ದಿನಕ್ಕೆ ಕಾಲಿಟ್ಟಿದ್ದು, ಅಖಂಡ ರೈತ ಸಂಘಟನೆಯ ನಾಯಕರು ಬೆಂಬಲ ಸೂಚಿಸಿದರು.ರೈತ ನಾಯಕ ನಾಯಕರ ಬಸವರಾಜ ಸುತ್ತುಗುಂಡಿ ಮಾತನಾಡಿ, ಶಾಸಕರು ಜಿಲ್ಲೆ ಹಿತಾಸಕ್ತಿ ಕಾಪಾಡಬೇಕು. ಜಿಲ್ಲೆಯ ಜನರ ಆರೋಗ್ಯ ಮತ್ತು ಶಿಕ್ಷಣ ಮಾರಾಟ ಮಾಡಬಾರದು. ಜಿಲ್ಲೆಗೆ ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಬಾರದು. ಜಿಲ್ಲೆಯ ಜನರ ಆದಾಯ ಕಡಿಮೆ ಇದೆ. ಅದಕ್ಕಾಗಿ ಮಕ್ಕಳ ಶಿಕ್ಷಣಕ್ಕೆ, ಬಡವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
150 ಎಕರೆ ಜಾಗ ಹೊಂದಿರುವ ಏಕೈಕ ಜಿಲ್ಲೆ ವಿಜಯಪುರ. ಸುಸಜ್ಜಿತ ಜಾಗವನ್ನು ಹೊಂದಿರುವ ನಮ್ಮ ಜಿಲ್ಲೆಗೆ ಸರ್ಕಾರ ಸಂಪೂರ್ಣ ವೈದ್ಯಕೀಯ ಕಾಲೇಜನ್ನು ಆರಂಭಿಸಬೇಕು. ನಮ್ಮ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಎರಡು ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ. ಅದಕ್ಕಾಗಿ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಬಡ ಮಕ್ಕಳ ಶಿಕ್ಷಣಕ್ಕಾಗಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಒಂದುವೇಳೆ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರು, ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದರು.ಹೋರಾಟ ಸಮಿತಿಯ ಅರವಿಂದ ಕುಲಕರ್ಣಿ, ಅಕ್ರಂ ಮಾಷಳಕರ, ಸಿದ್ಧಲಿಂಗ ಬಾಗೇವಾಡಿ, ಸುರೇಶ ಬಿಜಾಪುರ, ಬೋಗೇಶ್ ಸೋಲಾಪುರ, ಲಕ್ಷ್ಮಣ ಕಂಬಾಗಿ, ಬಾಬುರಾವ ಬೀರಕಬ್ಬಿ, ಸಿ.ಬಿ.ಪಾಟೀಲ, ಶ್ರೀನಾಥ್ ಪೂಜಾರಿ, ಗಿರೀಶ್ ಕಲಘಟಗಿ, ಶ್ರೀಕಾಂತ್ ಕೊಂಡಗೂಳಿ, ಗೀತಾಹಮ ಹೆಚ್, ಭರತಕುಮಾರ ಎಚ್.ಟಿ, ನೀಲಾಂಬಿಕ ಬಿರಾದರ, ಕಾವೇರಿ ರಜಪೂತ ಮುಂತಾದವರು ಭಾಗವಹಿಸಿದ್ದರು.