- ಶೂ ಎಸೆದು, ಘೋಷಣೆ ಕೂಗಿದ ಆರೋಪ

- ನಾಲ್ವರ ವಿರುದ್ಧ ದಾಖಲಾಗಿದ್ದ ಪ್ರಕರಣಕನ್ನಡಪ್ರಭ ವಾರ್ತೆ ಬೆಂಗಳೂರು

ಚಿಕ್ಕಬಳ್ಳಾಪುರ ಶಾಸಕ‌ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪ ಮೇಲೆ‌ ಕೇಂದ್ರ ಸಚಿವ ಎಚ್.ಡಿ.‌ಕುಮಾರಸ್ವಾಮಿ ಅಭಿಮಾನಿಗಳು ಎನ್ನಲಾದ ನಾಲ್ವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ‌ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.‌

ಪ್ರಕರಣ ಸಂಬಂಧ ತಮ್ಮ ವಿರುದ್ಧ ಚಿಕ್ಕಬಳ್ಳಾಪುರ ಟೌನ್ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್‌ಗೆ ಸಂಬಂಧಿಸಿದ ತನಿಖೆ ಹಾಗೂ ಚಿಕ್ಕಬಳ್ಳಾಪುರದ ಪ್ರಧಾನ ಹಿರಿಯ ಹಾಗೂ ಸಿಜೆಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಆರೋಪಿಗಳಾದ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಮಹೇಂದ್ರ ಟಿ.ಎಸ್. ಪ್ರಕಾಶ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ‌ಎಂ.‌ನಾಗಪ್ರಸನ್ನ ಅವರ ಪೀಠ, ಘಟನೆಯಿಂದ ತಮಗೆ ಅಪಮಾನವಾಗಿದ್ದರೆ‌ ಶಾಸಕ ಪ್ರದೀಪ್ ಈಶ್ವರ್ ಮೊಕದ್ದಮೆ ಹೂಡಬಹುದಿತ್ತು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ 800ಕ್ಕೂ ಅಧಿಕ ಜನ ಭಾಗವಹಿಸಿದ್ದರು ಎನ್ನಲಾಗಿದೆ. ಅದರಲ್ಲಿ ಈ ನಾಲ್ವರು ಅರ್ಜಿದಾರರ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಟೌನ್ ಪೊಲೀಸರ ಪರ ಹಾಜರಿದ್ದ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

ನಂತರ ಅರ್ಜಿದಾರರ ವಿರುದ್ಧ ತನಿಖೆ ಹಾಗೂ ಮುಂದಿನ‌ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳಿಗೆ ತಡೆ ನೀಡಿತು. ಹಾಗೆಯೇ ಪ್ರತಿವಾದಿಗಳಾದ, ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣಾಧಿಕಾರಿ ಹಾಗೂ ದೂರುದಾರಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಸ್.ಎಂ. ಅಮರ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?:

ಜೂ.27ರಂದು ಪಿಎಸ್ ಐ ಅಮರ್ ಅವರು ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆ ದೂರು ನೀಡಿದ್ದರು. ಅಂದು 11:30ಕ್ಕೆ ಚಿಕ್ಕಬಳ್ಳಾಪುರದ ಕನ್ನಡ ಭವನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕೇಂದ್ರ ಸಚಿವರಾದ ಕುಮಾರಸ್ವಾಮಿ ಕುರಿತ ಹೇಳಿಕೆಗೆ ಸಂಬಂಧಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದಲ್ಲದೆ, ಶೂ ಎಸೆದಿದ್ದರು‌ ಎಂದು ಆರೋಪಿಸಿದ್ದರು.‌

ಇದರಿಂದ ಮೋಹನ್ ರಾಜ್, ಅಖಿಲ್ ರೆಡ್ಡಿ, ಮಹೇಂದ್ರ ಮತ್ತು ಪ್ರಕಾಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್ ) ಸೆಕ್ಷನ್ 189 (ಸಾರ್ವಜನಿಕ ಶಾಂತಿ ಅಥವಾ ಕಾನೂನಿಗೆ ಭಂಗ ತರುವ ಉದ್ದೇಶದಿಂದ ''''''''ಕಾನೂನುಬಾಹಿರ ಸಭೆ'''''''' ಸೇರಿಸಿದ), ಸೆಕ್ಷನ್ 192 (2) (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡಿದ) ಸೆಕ್ಷನ್ 132‌ (ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆ ತಡೆದ), ಸೆಕ್ಷನ್ 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಯಾರನ್ನಾದರೂ ಉದ್ದೇಶಪೂರ್ವಕವಾಗಿ ಅವಮಾನಿಸಿದ) ಮತ್ತು ಸೆಕ್ಷನ್ 351(3) ಜೀವ ಬೆದರಿಕೆ ಹಾಕಿದ ಆರೋಪದ‌ ಮೇಲೆ ಚಿಕ್ಕಬಳ್ಳಾಪುರ ಟೌನ್ ಠಾಣಾ ಪೊಲೀಸರು 2026ರ ಜೂ.27ರಂದು ಎಫ್ಐಆರ್ ದಾಖಲಿಸಿದ್ದರು.