ಖಬರಸ್ತಾನದಲ್ಲಿ ಶವ ಸಂಸ್ಕಾರಕ್ಕೆ ಸಮಾಜದ ಹಿರಿಯರ ಅಡ್ಡಿ

| Published : Feb 25 2024, 01:49 AM IST

ಸಾರಾಂಶ

ಮುಸ್ಲಿಂ ಸಮಾಜದವರೇ ತಮ್ಮದೆ ಸಮಾಜದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಖಬರಸ್ತಾನದಲ್ಲಿ ಮಾಡಲು ಅಡ್ಡಿಪಡಿಸಿದ್ದರಿಂದ ಮೃತನ ಮಗ ವಜೀರ್‌ ಮತ್ತು ಸಮಾಜದ ಮುಖಂಡರ ಮಧ್ಯೆ ವಾಗ್ವಾದ ನಡೆದು ವಸೀಮ್‌ ನನ್ನು ಥಳಿಸಿದ ಘಟನೆ ರನ್ನಬೆಳಗಲಿಯಲ್ಲಿ ಶನಿವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮುಸ್ಲಿಂ ಸಮಾಜದವರೇ ತಮ್ಮದೆ ಸಮಾಜದ ವ್ಯಕ್ತಿಯ ಶವ ಅಂತ್ಯಸಂಸ್ಕಾರವನ್ನು ಖಬರಸ್ತಾನದಲ್ಲಿ ಮಾಡಲು ಅಡ್ಡಿಪಡಿಸಿದ್ದರಿಂದ ಮೃತನ ಮಗ ವಜೀರ್‌ ಮತ್ತು ಸಮಾಜದ ಮುಖಂಡರ ಮಧ್ಯೆ ವಾಗ್ವಾದ ನಡೆದು ವಸೀಮ್‌ ನನ್ನು ಥಳಿಸಿದ ಘಟನೆ ರನ್ನಬೆಳಗಲಿಯಲ್ಲಿ ಶನಿವಾರ ನಡೆದಿದೆ.

ನಡೆದಿದ್ದೇನು ?

ರನ್ನಬೆಳಗಲಿಯ ಹುಸೇನಸಾಬ ಹುದ್ದಾರ ( 90) ಶನಿವಾರ ಬೆಳಗ್ಗೆ ನಿಧನರಾಗಿದ್ದರು. ಕುಟುಂಬದವರು ಗ್ರಾಮದ ಖಬರಸ್ತಾನದಲ್ಲಿ ಶವಸಂಸ್ಕಾರ ನೆರವೇರಿಸಲು ಮುಂದಾದಾಗ ಸಮಾಜದ ಹಿರಿಯರು ತಡೆದು ನೀವು ನಮ್ಮ ಸಮಾಜದ ಯಾವ ಕೆಲಸ, ಕಾರ್ಯಕ್ರಮಗಳಿಗೂ ಬರುವುದಿಲ್ಲ ನೀಮಗೇಕೆ ನಮ್ಮ ಸ್ಮಾಶಾನದಲ್ಲಿ ಜಾಗ ಕೊಡಬೇಕು ಎಂದು ತಕರಾರು ತೆಗೆದರು. ಈ ವೇಳೆ ಮೃತನ ಮಗ ವಜೀರ್‌ ಹಾಗೂ ಸಮಾಜದ ಮುಖಂಡರ ಮಧ್ಯೆ ವಾಗ್ವಾದ ನಡೆದು ಕೆಲವರು ವಜೀರ್‌ನಿಗೆ ಥಳಿಸಿದ ಘಟನೆಯೂ ನಡೆದಿದೆ. ಅನಿವಾರ್ಯವಾಗಿ ಮಗ ವಜೀರ್‌

ಶವವನ್ನು ವಾಪಸ್‌ ತಂದು ಮನೆಯಲ್ಲಿಟ್ಟುಕೊಂಡ. ಕೆಲ ಸಮಯದ ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮುಸ್ಲಿಂ ಸಮಾಜದ ಹಿರಿಯರ ಮನವೊಲಿಸಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿದರು.

ಕುಟುಂಬದವರ ಆಕ್ರಂದನ: ಒಂದು ಕಡೆ ಕಟುಂಬದ ವ್ಯಕ್ತಿಯ ಸಾವು ಮತ್ತೊಂದು ಕಡೆ ಅಂತ್ಯಸಂಸ್ಕಾರಕ್ಕೆ ಅಡ್ಡಿಯಿಂದ ಕುಟುಂಬಸ್ಥರು ದಿಕ್ಕು ತೋಚದಂತಾಗಿ ರೋದಿಸುತ್ತಿರುವುದು ಕಂಡುಬಂತು. ಕೊನೆಗೂ ಪೊಲೀಸರ ಮಧ್ಯೆ ಪ್ರವೇಶದಿಂದ ವಿವಾದ ಸುಖಾಂತ್ಯಗೊಂಡಿದೆ.