ಗಂಡ ಮಟ್ಕಾ ಆಡಿಸ್ತಿದ್ದ, ಪೊಲೀಸ್ರು ಕಮಿಷನ್ ಪಡಿತಿದ್ರು: ಪತ್ನಿ ಹೇಳಿಕೆ

| Published : May 26 2024, 01:38 AM IST

ಗಂಡ ಮಟ್ಕಾ ಆಡಿಸ್ತಿದ್ದ, ಪೊಲೀಸ್ರು ಕಮಿಷನ್ ಪಡಿತಿದ್ರು: ಪತ್ನಿ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪತಿ ಆದಿಲ್‌ ಮಟ್ಕಾ ಆಡಿಸುತ್ತಿದ್ದುದು ಸತ್ಯ. ಪೊಲೀಸರು ಸಹ ಪ್ರತಿ ತಿಂಗಳೂ ಕಮಿಷನ್ ವಸೂಲು ಮಾಡುತ್ತಿದ್ದರು. ಒಂದು ತಿಂಗಳು ಕಮಿಷನ್‌ ಕೊಡದಿದ್ದಕ್ಕೆ ಸಿವಿಲ್‌ ಡ್ರೆಸ್‌ನಲ್ಲಿ ನಿನ್ನೆ (ಶುಕ್ರವಾರ) ಸಂಜೆ ಮನೆ ಬಳಿ ಬಂದು, ಆತನನ್ನು ಕರೆದೊಯ್ದರು. ಪೊಲೀಸರ ಹೊಡೆತದಿಂದಲೇ ಪತಿ ಸಾವನ್ನಪ್ಪಿದ್ದಾರೆ ಎಂದು ಆದಿಲ್‌ ಪತ್ನಿ ಹೀನಾ ಬಾನು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಆದಿಲ್‌ಗೆ ಪೊಲೀಸರೇ ಹೊಡೆದು ಕೊಂದಿದ್ದಾರೆ: ಹೀನಾ ಬಾನು ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪತಿ ಆದಿಲ್‌ ಮಟ್ಕಾ ಆಡಿಸುತ್ತಿದ್ದುದು ಸತ್ಯ. ಪೊಲೀಸರು ಸಹ ಪ್ರತಿ ತಿಂಗಳೂ ಕಮಿಷನ್ ವಸೂಲು ಮಾಡುತ್ತಿದ್ದರು. ಒಂದು ತಿಂಗಳು ಕಮಿಷನ್‌ ಕೊಡದಿದ್ದಕ್ಕೆ ಸಿವಿಲ್‌ ಡ್ರೆಸ್‌ನಲ್ಲಿ ನಿನ್ನೆ (ಶುಕ್ರವಾರ) ಸಂಜೆ ಮನೆ ಬಳಿ ಬಂದು, ಆತನನ್ನು ಕರೆದೊಯ್ದರು. ಪೊಲೀಸರ ಹೊಡೆತದಿಂದಲೇ ಪತಿ ಸಾವನ್ನಪ್ಪಿದ್ದಾರೆ ಎಂದು ಆದಿಲ್‌ ಪತ್ನಿ ಹೀನಾ ಬಾನು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚನ್ನಗಿರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಬಳಿ ಆದಿಲ್‌ನನ್ನು ಕರೆದೊಯ್ದ ಪೊಲೀಸರು ಎಲ್ಲಿಗೆ ಅಂತಾನೂ ಹೇಳಲಿಲ್ಲ. ಪೊಲೀಸರಿಂದ ನನ್ನ ಗಂಡ ಸಾಕಷ್ಟು ಅನುಭವಿಸಿದ್ದಾರೆ. ಠಾಣೆಗೆ ಕರೆದೊಯ್ದು, ಬೇಕಾಬಿಟ್ಟಿಯಾಗಿ ಹೊಡೆದಿದ್ದಾರೆ. ಹಲ್ಲೆ ಬಳಿಕ ಆತನಿಗೆ ಮೂರ್ಛೆರೋಗ ಇತ್ತೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ನನ್ನ ಗಂಡ ತುಂಬಾ ಪ್ರೀತಿ ಮಾಡುತ್ತಿದ್ದ ನನ್ನ ಹಾಗೂ ನಮ್ಮ ಮಕ್ಕಳಿಗೆ ಈಗ ಯಾರು ಗತಿ? ಗಂಡನನ್ನು ಹೊಡೆದು ಕೊಂದಿರುವ ಪೊಲೀಸರು ಈಗ ಆದಿಲ್‌ನನ್ನು ಬದುಕಿಸಿಕೊಡ್ತಾರಾ? ಇಡೀ ಮನೆಯನ್ನು ಹುಡುಕಿದರೂ ಮೂರ್ಚೆ ರೋಗಕ್ಕೆ ಸಂಬಂಧಿಸಿದ ಒಂದು ಮಾತ್ರೆ ಸಹ ನಮ್ಮಲ್ಲಿ ಇಲ್ಲ. ಗಂಡನಿಗೆ ಯಾವುದೇ ರೋಗವೂ ಇರಲಿಲ್ಲ. ಆತ ಆರೋಗ್ಯವಾಗಿಯೇ ಇದ್ದ ಎಂದು ಹೀನಾಬಾನು ಹೇಳಿದರು.

- - -