ಪತ್ನಿ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಪತಿ ಮಹೇಶ್‌, ಆತನ ಸ್ನೇಹಿತರಾದ ಅಭಿ, ಭಾಸ್ಕರ್‌ ಬಂಧಿತರಾಗಿದ್ದಾರೆ.

ಮೈಸೂರು: ಪತ್ನಿಗೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲು ಬಂದ ಪತಿಯೇ ಪ್ರಕರಣದ ಆರೋಪಿಯಾಗಿ ಬಂಧಿಯಾಗಿರುವ ಘಟನೆ ಮೇಟಗಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪತ್ನಿ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಪತಿ ಮಹೇಶ್‌, ಆತನ ಸ್ನೇಹಿತರಾದ ಅಭಿ, ಭಾಸ್ಕರ್‌ ಬಂಧಿತರಾಗಿದ್ದಾರೆ.

ಬಿ.ಎಂ.ಶ್ರೀ ನಗರದ 14ನೇ ಅಡ್ಡರಸ್ತೆಯಲ್ಲಿರುವ ಮಹೇಶ್‌ ಅವರ ಮನೆಗೆ ಮಂಗಳವಾರ ರಾತ್ರಿ ಇಬ್ಬರು ಅಪರಿಚಿತರು ನುಗ್ಗಿದ್ದು, ಅವರ ಪತ್ನಿ ನಾಗರತ್ನಾ ತಲೆಗೆ ಸುತ್ತಿಗೆಯಿಂದ ಹೊಡೆದು, ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಆಕೆಗೆ ಟ್ರಾಮಾ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಪತಿಯು ಘಟನೆ ಬಗ್ಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ಮನೆಯೊಳಗೆ ನುಗ್ಗಿದ ಅಭಿ ಹಾಗೂ ಭಾಸ್ಕರ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದರು. ಈ ವೇಳೆ ಮಹೇಶ್‌ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದ್ದು, ಅವರನ್ನೂ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.