ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ತನ್ನ ಪತ್ನಿ ಕತ್ತು ಕತ್ತರಿಸಿ ದೇಹದ ಅಂಗಾಂಗಗಳನ್ನು ಚಾಕುವಿನಿಂದ ಮಾಂಸದ ಮುದ್ದೆಯನ್ನಾಗಿ ಮಾಡಿದ ಘಟನೆ ತಾಲೂಕಿನ ಹುಲಿಯೂರು ದುರ್ಗದ ಹೊಸಪೇಟೆಯಲ್ಲಿ ಮಂಗಳವಾರ ನಡೆದಿದೆ.ಹುಲಿಯೂರುದುರ್ಗ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಶಿವರಾಮ್ (40) ಕೊಲೆ ಮಾಡಿದ ಆರೋಪಿ. ಕಳೆದ 10 ವರ್ಷದ ಹಿಂದೆ ಶಿವಮೊಗ್ಗ ಮೂಲದ ಪುಷ್ಪ ಎಂಬಾಕೆಯನ್ನ ಮದುವೆಯಾಗಿದ್ದ. ಪತ್ನಿ ಹಾಗೂ 8 ವರ್ಷದ ಗಂಡು ಮಗುವಿನೊಂದಿಗೆ ಕಳೆದ 8 ತಿಂಗಳಿಂದ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿರುವ ಬೆಟ್ಟಪ್ಪನ ಸಾಮಿಲ್ನಲ್ಲಿದಿನಕ್ಕೆ 350 ರು.ಗಳಂತೆ ಕೂಲಿ ಕೆಲಸ ಮಾಡುತ್ತಿದ್ದನು. ಆರೋಪಿ ಶಿವರಾಮ್‌ಗೆ ಮಧ್ಯರಾತ್ರಿ ಮನೆಯಲ್ಲಿದ್ದ ಎಂಟು ವರ್ಷದ ಮಗನನ್ನು ರೂಂಮಿನಲ್ಲಿ ಕೂಡಿ ಹಾಕಿ, ಮಲಗಿದ್ದ ಪತ್ನಿಯನ್ನು ಅಡುಗೆ ಮನೆಗೆ ಕರೆತಂದು ಕತ್ತು ಕತ್ತರಿಸಿ ದೇಹದಿಂದ ಬೇರ್ಪಡಿಸಿದ್ದಾನೆ. ನಂತರ ಇತರ ಅಂಗಾಂಗಗಳನ್ನು ಚಾಕುವಿನಿಂದ ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ.ಆರೋಪಿ ಶಿವರಾಮ್ ತಾನು ಕೆಲಸ ಮಾಡುವ ಮಾಲೀಕರಿಗೆ ಕರೆ ಮಾಡಿ ಪತ್ನಿಯನ್ನು ಕೊಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಹುಲಿಯೂರುದುರ್ಗ ಪೊಲೀಸರು ಹತ್ಯೆಯ ಭೀಕರತೆ ಕಂಡು ಬೆಚ್ಚಿಬಿದ್ದಿದ್ದಾರೆ. ಆತ ನೋಡೋಕೆ ಅಮಾಯಕನ ರೀತಿ ಕಂಡರೂ ಮಾಡಿದ ಕೆಲಸ ಮಾತ್ರ ಭಯ ಭೀಕರವಾಗಿತ್ತು. ಇದರಿಂದ ಪಟ್ಟಣದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ,ವಿ ಅಶೋಕ್, ಎಎಸ್ಪಿ ಅಬ್ದುಲ್ ಖಾದರ್, ಕುಣಿಗಲ್ ಡಿವೈಎಸ್ಪಿ ಓಂಪ್ರಕಾಶ್, ಅಮೃತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್, ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.