ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮದಿನವಾದ ಶ್ರೀರಾಮನವಮಿಯಂದು ಶ್ರೀರಾಮಚಂದ್ರನ ಕೃಪಾಶ್ರೀವಾದದಿಂದ ವಿಶ್ವದಲ್ಲಿ ಶಾಂತಿ ಮತ್ತು ಸುಭಿಕ್ಷೆ ನೆಲಸಲಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರ ಹೊರವಲಯದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿಗೆ ಅಭಿಷೇಕ ಮತ್ತು ಪೂಜಾ ಕೈಂಕರ್ಯಗಳು ನೆರವೇರಿಸಿ ನಂತರ ಭಕ್ತರಿಗೆ ಕೋಸಂಬರಿ,ಪಾನಕ ಮತ್ತು ನೀರು ಮಜ್ಜಿಗೆ ವಿತರಿಸಿ ಮಾತನಾಡಿದರು.
ಉತ್ತಮ ಆಡಳಿತಗಾರ ಶ್ರೀರಾಮವಿಷ್ಣುವಿನ ಏಳನೇ ಅವತಾರ ಶ್ರೀರಾಮ. ರಾಮ ರಾಜ್ಯದ ಹರಿಕಾರ. ಇಂದಿಗೂ ಆತ ಭಾರತವಷ್ಟೇ ಅಲ್ಲ ಸುತ್ತಮುತ್ತಲಿನ ಅನೇಕ ದೇಶಗಳಿಗೆ ಆದರ್ಶ, ಆದರಣೀಯ. ಪ್ರಜಾಕಲ್ಯಾಣಕ್ಕಾಗಿ ಸದಾ ಸ್ಪಂದಿಸುತ್ತಿದ್ದ ರಾಜಾರಾಮ ಎಂದಿಗೂ ಜೀವಂತ. ಶ್ರೀರಾಮ ದೇವಪುರುಷ ಮಾತ್ರವಲ್ಲ, ಒಬ್ಬ ಉತ್ತಮ ಆಡಳಿತಗಾರನೂ ಹೌದು. ಆಡಳಿತಗಾರನಿಗೆ ಇರಬೇಕಾದ ಸರ್ವಗುಣ ಸಂಪನ್ನನಾಗಿದ್ದ. ಹೆತ್ತವರಿಗೆ ಸತ್ಪುತ್ರ ನಾಗಿದ್ದರೆ ಪ್ರಜೆಗಳಿಗೆ ಆದರ್ಶ ಪುರುಷೋತ್ತಮನಾಗಿದ್ದ ಎಂದರು. ಶ್ರೀರಾಮನ ಆಡಳಿತದ ಕಾಲದಲ್ಲಿ ಹೊಡೆದಾಟ, ಬಡಿದಾಟ, ರಕ್ತಪಾತಗಳ ಭಯವಿರಲಿಲ್ಲ. ಶಾಂತಿ, ಸಹಬಾಳ್ವೆ, ನ್ಯಾಯಪರಿಪಾಲನೆ, ಸಂಪತ್ತು, ಅಭಿವೃದ್ಧಿ, ಸಮೃದ್ಧಿಯಾಗಿದ್ದವು. ಪ್ರಜೆಗಳು ಸುಖ, ಶಾಂತಿ, ನೆಮ್ಮದಿ, ಸಂತೃಪ್ತಿಗಳಿಂದ ಇದ್ದು ಸದಾ ಪ್ರಸನ್ನವದನರಾಗಿದ್ದರು. ಜನರು ಸತ್ಯಸಂದರಾಗಿದ್ದರಿಂದ ಅಲ್ಲಿ ಎಲ್ಲವು ಸಮೃದ್ಧಿಯಾಗಿದ್ದವು. ಪ್ರಜೆಗಳು ಸುಖ, ಶಾಂತಿ, ನಮ್ಮದಿ, ಸಂತೃಪ್ತಿಗಳಿಂದ ಇದ್ದು ಸದಾ ಪ್ರಸನ್ನವದನರಾಗಿದ್ದರು. ಜನರು ಸತ್ಯಸಂಧರಾಗಿದ್ದರಿಂದ ಅಲ್ಲಿ ಅನಾಹುತಕ್ಕೆ ಸ್ಥಾನವಿರಲಿಲ್ಲ ಎಂದರು.
ಶ್ರೀಮಂತ ಸಂಸ್ಕೃತಿ, ಪರಂಪರೆತಂದೆಯ ವಚನ ಪಾಲನೆಯ ನಿರ್ಧಾರದಿಂದ ಹಿಂದೆ ಸರಿಯದ ಶ್ರೀರಾಮನ ಪಾದುಕೆಗಳನ್ನು ಸಹೋದರ ಭರತ ತನ್ನ ತಲೆಯ ಮೇಲೆ ಹೊತ್ತು ತಂದು ಅವುಗಳನ್ನು ಗದ್ದುಗೆಯ ಮೇಲಿಟ್ಟು ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾನೆ. ಇಂತಹ ಆದರ್ಶವನ್ನು ನಾವು ಶ್ರೀರಾಮ ಮತ್ತು ಅವನ ಸಹೋದರರಲ್ಲಿ ಮಾತ್ರ ಕಾಣಲು ಸಾಧ್ಯ. ಇದು ನಮ್ಮ ಪುಣ್ಯಭೂಮಿ ಭಾರತದ ಸಂಸ್ಕೃತಿ, ಪರಂಪರೆಯಾಗಿದೆ ಎಂದರು.
ರಾಮನ ಆದರ್ಶ ಪಾಲಿಸಬೇಕುಇಂದು ನಾವು ಶ್ರೀರಾಮನ ದರ್ಶನ ಮಾಡುವುದು ಮಾತ್ರವಲ್ಲ, ನಮ್ಮ ಮಕ್ಕಳಿಗೆ ಶ್ರೀರಾಮನ ಮುಖಾಂತರ ಧರ್ಮವನ್ನು,ನೈತಿಕತೆಯನ್ನು, ನೀತಿಯನ್ನು ಹಾಗೂ ಒಟ್ಟು ಬದುಕನ್ನು ಕಟ್ಟಿಕೊಡುವ ಪರಿಯನ್ನು ಹೇಳಿಕೊಡೋಣ. ಶ್ರೀರಾಮನ ಆದರ್ಶವನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯೋಣ ಎಂದು ತಿಳಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.